newsfirstkannada.com

INDvsAUS: ವಿಶ್ವಕಪ್‌ ಫೈನಲ್‌ನಲ್ಲೂ ಗಮನ ಸೆಳೆದ ಅನುಷ್ಕಾ ಶರ್ಮಾ ಸ್ಪೆಷಲ್ ಡ್ರೆಸ್‌; ಇದರ ಬೆಲೆ ಎಷ್ಟು ಗೊತ್ತಾ?

Share :

19-11-2023

    ವಿಶ್ವಕಪ್ ಫೈನಲ್​ ಪಂದ್ಯವನ್ನು ವೀಕ್ಷಿಸಲು ಬಂದ ವಿರಾಟ್​ ಪತ್ನಿ

    ನೆಟ್ಟಿಗರ ಗಮನ ಸೆಳೆದ ಅನುಷ್ಕಾ ಶರ್ಮಾ ಮತ್ತೊಂದು ಸ್ಪೆಷಲ್ ಡ್ರೆಸ್​

    ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನ ಬೆಲೆ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ!

ಅಹಮದಾಬಾದ್‌: ಭಾರತ, ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್​ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಅರ್ಧಶತಕ ಸಿಡಿಸಿದ ವಿರಾಟ್‌ ಕೊಹ್ಲಿ ಫ್ಯಾನ್ಸ್‌ ನಿರೀಕ್ಷೆಯನ್ನ ಹುಸಿಗೊಳಿಸಿಲ್ಲ. ಈ ರೋಚಕ ಫೈನಲ್ ಪಂದ್ಯದಲ್ಲಿ ನರೇಂದ್ರ ಮೋದಿ ಸ್ಟೇಡಿಯಂಗೆ ವಿರಾಟ್​​ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಬಂದಿದ್ದಾರೆ. ಕೊಹ್ಲಿ ಆಟದ ಜೊತೆಗೆ ಅನುಷ್ಕಾ ಶರ್ಮಾ ಅವರು ತೊಟ್ಟಿದ್ದ ಸ್ಪೆಷಲ್ ಡ್ರೆಸ್ ಎಲ್ಲರ ಗಮನ ಸೆಳೆದಿದೆ. ಮತ್ತೊಮ್ಮೆ ಅನುಷ್ಕಾ ಶರ್ಮಾ ತೊಟ್ಟಿದ್ದ ಬಟ್ಟೆ ಬಗ್ಗೆಯೇ ಚರ್ಚೆಯಾಗಿದೆ.

ಮೊನ್ನೆಯಷ್ಟೇ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ನಟಿ ಅನುಷ್ಕಾ ಶರ್ಮಾ ಅವರು ಧರಿಸಿದ್ದ ಸ್ಟೈಲಿಶ್ ಡ್ರೆಸ್​​ ಪ್ರೇಕ್ಷಕರ ಗಮನ ಸೆಳೆದಿತ್ತು. ಬಿಳಿ ಬೇಸ್ ಶರ್ಟ್ ಮೇಲೆ ಡಾರ್ಕ್ ಹಸಿರು ಬಣ್ಣದ ಹೂವಿನ ಪ್ರಿಂಟ್ ಇತ್ತು. ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂಪಾಯಿ ಇತ್ತು.

ಇಂದು ಕೂಡ ಅದೇ ರೀತಿಯ ಡ್ರೆಸ್​​ ಅನ್ನು ಅನುಷ್ಕಾ ಶರ್ಮಾ ಧರಿಸಿಕೊಂಡು ಬಂದಿದ್ದಾರೆ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಧರಿಸಿರುವ ವಸ್ತ್ರವು ಸ್ವದೇಶಿ ಲೇಬಲ್ ನಿಕೋಬಾರ್‌ನಿಂದ ಬಂದಿದ್ದು ಇದರ ಬೆಲೆ 7,250 ರೂಪಾಯಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

INDvsAUS: ವಿಶ್ವಕಪ್‌ ಫೈನಲ್‌ನಲ್ಲೂ ಗಮನ ಸೆಳೆದ ಅನುಷ್ಕಾ ಶರ್ಮಾ ಸ್ಪೆಷಲ್ ಡ್ರೆಸ್‌; ಇದರ ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2023/11/2023-match-16.jpg

Load More