ಇದು ಪ್ರಶಾಂತ್ ನೀಲ್ ಸ್ಟೋರಿ ನರೇಟ್ ರಹಸ್ಯದ ಕಥೆ
77 ವರ್ಷದ ಈ ನಟನ ಹಿನ್ನಲೆ ಸಖತ್ ಇಂಟ್ರಸ್ಟಿಂಗ್ಗಾಗಿದೆ
ಸಲಾರ್ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾ
ಸ್ಟೋರಿ ಹೇಳೋದ್ರಲ್ಲಿ ಪ್ರಶಾಂತ್ ನೀಲ್ ತುಂಬಾನೇ ಡಿಫ್ರೆಂಟ್. ಸಿನಿಮಾ ಕಥೆ ನರೇಟ್ ಮಾಡೋಕೆ ಅಂತಾನೇ ಕೆಲವು ಆ್ಯಕ್ಟರ್ಗಳನ್ನ ಫಿಕ್ಸ್ ಮಾಡಿಕೊಳ್ತಾರೆ. ಕೆಜಿಎಫ್ ಮೊದಲ ಚಾಪ್ಟರ್ನಲ್ಲಿ ಬಿ ಸುರೇಶ್ ಪಾತ್ರ ನಿಮಗೆ ನೆನಪಿರಬಹುದು. ‘ಭಾವನೆಗಳಿಗೆ ಒಳಗಾಗಬೇಡ, ಇಲ್ಲಿ ಅದಕ್ಕೆ ಬೆಲೆ ಇಲ್ಲ’ ಅನ್ನೋ ಒಂದೇ ಒಂದು ಡೈಲಾಗ್ ಇಡೀ ಟ್ರೇಲರ್ಗೆ ಕಿಕ್ ಕೊಟ್ಟಿತ್ತು. ಚಾಪ್ಟರ್ 2ನಲ್ಲಿ, ‘ನಿಮಗೊಂದು ಸಲಹೆ ಕೊಡ್ತೀನಿ.. ನೀವ್ ಮಾತ್ರ ಅವ್ನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸಾರ್’ ಅಂತ ಹೇಳಿದ ತಾತ ಪ್ಯಾನ್ ಇಂಡಿಯಾ ಟ್ರೆಂಡ್ ಆಗಿದ್ದು ಗೊತ್ತೇ ಇದೆ. ಈಗ ಸಲಾರ್ನಲ್ಲೂ ಅಂತಹದ್ದೇ ಪ್ರಮುಖ ಪಾತ್ರವೊಂದನ್ನ ಸೃಷ್ಟಿಸಿದ್ದಾರೆ ಪ್ರಶಾಂತ್ ನೀಲ್.
ಸಲಾರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದ್ರಲ್ಲಿ ವೃದ್ಧ ವ್ಯಕ್ತಿ ಹೇಳೋ ಲಯನ್, ಚೀತಾ, ಟೈಗರ್, ಎಲಿಪೆಂಟ್ ಡೈಲಾಗ್ ಸೆನ್ಸೇಷನ್ ಆಗ್ತಿದೆ. ಅಷ್ಟಕ್ಕೂ ಪ್ರಭಾಸ್ ಎಂಟ್ರಿಗೆ ಇಷ್ಟೊಂದು ಬಿಲ್ಡಪ್ ಕೊಡೋ ಈ ನಟ ಯಾರು? ಇವ್ರ ಹಿನ್ನೆಲೆ ಏನು ಅಂತ ನೋಡಿದ್ರೆ ಇಂಟರೆಸ್ಟಿಂಗ್ ಅನಿಸುತ್ತೆ.
ಕನ್ನಡದಲ್ಲೂ ನಟಿಸಿದ್ದಾರೆ ಈ ತಾತ
ಅಂದಹಾಗೆಯೇ, ಸಲಾರ್ ಟೀಸರ್ನಲ್ಲಿ ನೀವು ನೋಡಿದ ಈ ಕಲಾವಿದನ ಹೆಸರು ಟಿನ್ನು ಆನಂದ್. ಹಿಂದಿ ಚಿತ್ರರಂಗದ ಖ್ಯಾತ ನಟ, ಬರಹಗಾರ, ನಿರ್ದೇಶಕ. 77 ವರ್ಷದ ಟಿನ್ನು ಆನಂದ್ ಬಾಲಿವುಡ್‌ನ ಹಿರಿಯ ರೈಟರ್ ಆಗಿದ್ದ ಇಂದರ್ ರಾಜ್ ಅವರ ಮಗ. ಸತ್ಯಜಿತ್ ರೇಯಂತಹ ದಿಗ್ಗಜ ನಿರ್ದೇಶಕರ ಬಳಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ ಟಿನ್ನು ಆನಂದ್, 1979ರಲ್ಲಿ ‘ದುನಿಯಾ ಮೇರಿ ಜೆಬ್ ಮೇ’ ಎನ್ನುವ ಚಿತ್ರದೊಂದಿಗೆ ನಿರ್ದೇಶಕರಾದ್ರು. ಈ ಚಿತ್ರದಲ್ಲಿ ರಿಷಿ ಕಪೂರ್ & ಶಶಿ ಕಪೂರ್ ನಾಯಕರಾಗಿ ನಟಿಸಿದ್ದರು. ಈವರೆಗೂ ಒಟ್ಟು 8 ಸಿನಿಮಾಗಳನ್ನು ಟಿನ್ನು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಹಿಂದಿ, ತಮಿಳು, ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟನೆಯೂ ಮಾಡಿದ್ದಾರೆ.
ಟಿನ್ನು ಆನಂದ್
ನೀವೇನಾದರೂ ಕಮಲ್ ಹಾಸನ್ ನಟಿಸಿದ್ದ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ನೋಡಿದ್ರೆ, ಅದರಲ್ಲಿ ಬರೋ ಕಿಲ್ಲರ್ ಪಾತ್ರ ಮಾಡಿದಲ್ಲಿ ನಟಿಸಿದ್ದು ಇದೇ ಟಿನ್ನು ಆನಂದ್. 1995ರಲ್ಲಿ ಕನ್ನಡದ ‘ಎಮರ್ಜೆನ್ಸಿ’ ಚಿತ್ರದಲ್ಲೂ ಟಿನ್ನು ಆನಂದ್ ಅಭಿನಯಿಸಿದ್ದರು. ಅಷ್ಟೇ ಅಲ್ಲ ಶಾರುಖ್ ಖಾನ್ ನಟನೆಯ ಚಮತ್ಕಾರ್, ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿರೀಸ್, ಅಮೀರ್ ಖಾನ್ ನಟನೆಯ ಗಜಿನಿ ಸೇರಿದಂತೆ ಬಹುತೇಕ ಬಾಲಿವುಡ್‌ನ ಸ್ಟಾರ್ ಕಲಾವಿದರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇನ್ನು ಪ್ರಭಾಸ್ ಅವರ ‘ಸಾಹೋ’ ಚಿತ್ರದಲ್ಲೂ ಟಿನ್ನು ಆನಂದ್ ನಟಿಸಿದ್ದರು. ಇದೀಗ ಪ್ರಭಾಸ್ & ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಲಾರ್ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದು, ಇವ್ರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ