newsfirstkannada.com

WATCH: ಭಂ ಭಂ ಬೋಲೇನಾಥ್.. ಈ ವರ್ಷದ ಅಮರನಾಥ ಯಾತ್ರೆಯ ವಿಶೇಷತೆಗಳೇನು ಗೊತ್ತಾ?

Share :

01-07-2023

  ಕಾಶ್ಮೀರದ ಅಮರನಾಥ ಗುಹೆಗೆ ಸಾವಿರಾರು ಯಾತ್ರಾರ್ಥಿಗಳ ದಂಡು

  12 ಕಿ.ಮೀ ದೂರ, 13,000 ಅಡಿ ಎತ್ತರದಲ್ಲಿರುವ ಅಮರನಾಥ ಗುಹೆ

  ಈ ವರ್ಷ ಒಟ್ಟು 62 ದಿನಗಳ ಕಾಲ ಅಮರನಾಥ ಯಾತ್ರೆಗೆ ಅವಕಾಶ

ಶ್ರೀನಗರ: ಜಮ್ಮು ಕಾಶ್ಮೀರದ ಅಮರನಾಥ ಗುಹೆಗೆ ಸಾವಿರಾರು ಯಾತ್ರಾರ್ಥಿಗಳ ದಂಡು ಹರಿದು ಬರ್ತಿದೆ. ಅಮರನಾಥ ಗುಹಾ ದೇಗುಲದಲ್ಲಿ ಅರ್ಚಕರು ಆರತಿ, ವಿಶೇಷ ಪೂಜೆ ನೆರವೇರಿಸುವ ಮೂಲಕ ಅಮರನಾಥ ಯಾತ್ರೆ ಆರಂಭಿಸಿದ್ದಾರೆ. ಬಾಲ್ತಲ್, ಪಹಲಗಾಮ್‌ನಲ್ಲಿ ಅಮರನಾಥ ಯಾತ್ರೆ 2023ಕ್ಕೆ ಅಧಿಕಾರಿಗಳು ವಿದ್ಯುಕ್ತ ಚಾಲನೆ ನೀಡಿದ್ದರು.

ಅಮರನಾಥ ಗುಹೆಗೆ ಈಗಾಗಲೇ ಎರಡು ಬ್ಯಾಚ್‌ಗಳಲ್ಲಿ ಯಾತ್ರಾರ್ಥಿಗಳು ಹೊರಟಿದ್ದಾರೆ. ಅಮರನಾಥ ದರ್ಶನಕ್ಕೆ ಹೊರಟ ಮೊದಲನೆಯ ಬ್ಯಾಚ್‌ಗೆ ಪೊಲೀಸರು, ಪ್ಯಾರಾ ಮಿಲಿಟರಿ ಪಡೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಮೊದಲ ಯಾತ್ರಾರ್ಥಿಗಳ ತಂಡ ಈಗಾಗಲೇ ಗುಹಾಂತರ ದೇಗುಲಗಳತ್ತ ಹೊರಟಿದ್ದಾರೆ. ಈ ವರ್ಷ ಒಟ್ಟು 62 ದಿನಗಳ ಕಾಲ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿದೆ.

ಪ್ರತಿವರ್ಷ ಇಲ್ಲಿ ಮಂಜುಗಡ್ಡೆಯಿಂದ ಶಿವಲಿಂಗದ ದರ್ಶನವಾಗುತ್ತದೆ. ಜುಲೈ ತಿಂಗಳಲ್ಲಿ ಮಂಜುಗಡ್ಡೆಯ ಶಿವಲಿಂಗದ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ನೈಸರ್ಗಿಕ ವಿಕೋಪಗಳು, ಕಿರಿದಾದ ಗುಡ್ಡ, ಬೆಟ್ಟಗಳನ್ನು ಹತ್ತಿ ಪವಿತ್ರ ಅಮರನಾಥ ಗುಹೆಯನ್ನ ತಲುಪುವುದೇ ಅತಿದೊಡ್ಡ ಸಾಹಸ. ಈ ಪವಿತ್ರ ಗುಹೆಯಲ್ಲಿ ಅಮರನಾಥ ಶಿವಲಿಂಗದ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಈ ಬಾರಿ ಬರೋಬ್ಬರಿ 6 ಸಾವಿರಕ್ಕೂ ಹೆಚ್ಚು ಅಮರನಾಥ ಯಾತ್ರೆ ಕೈಗೊಳ್ಳಲು ಈಗಾಗಲೇ ಬೇಸ್‌ ಕ್ಯಾಂಪ್‌ಗಳನ್ನು ತಲುಪಿದ್ದಾರೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ರಕ್ಷಣಾ ಸಿಬ್ಬಂದಿ RFID ಕಾರ್ಡ್‌ಗಳನ್ನು ಕೊಟ್ಟು ಯಾತ್ರೆಗೆ ಅನುವು ಮಾಡಿಕೊಡುತ್ತಾರೆ.

ಅಮರನಾಥ ಗುಹೆಯು ಶ್ರೀನಗರದ ಈಶಾನ್ಯಕ್ಕೆ 145 ಕಿಲೋ ಮೀಟರ್ ದೂರದಲ್ಲಿದೆ. ಯಾತ್ರಾರ್ಥಿಗಳು ರಸ್ತೆ ಮಾರ್ಗದಲ್ಲಿ ಕಾಶ್ಮೀರ ತಲುಪಿದ ಬಳಿಕ 2 ಮಾರ್ಗದಲ್ಲಿ ಅಮರನಾಥ ಗುಹೆಯನ್ನು ತಲುಪಬಹುದು. ಮೊದಲನೆಯದು ಗಂಡೆರ್ಬಾಲ್ ಜಿಲ್ಲೆ ಮತ್ತೊಂದು ಅನಂತನಾಗ್ ಜಿಲ್ಲೆಯ ಪಹಲ್ಗಾಂ ಮೂಲಕ 12 ಕಿಲೋ ಮೀಟರ್ ದೂರ ಚಲಿಸಬೇಕಾಗಿದೆ. ಪವಿತ್ರ ಅಮರನಾಥ ಗುಹೆಯು 13,000 ಅಡಿ ಎತ್ತರದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಭಂ ಭಂ ಬೋಲೇನಾಥ್.. ಈ ವರ್ಷದ ಅಮರನಾಥ ಯಾತ್ರೆಯ ವಿಶೇಷತೆಗಳೇನು ಗೊತ್ತಾ?

https://newsfirstlive.com/wp-content/uploads/2023/07/Amarnath-Yatra.jpg

Load More