newsfirstkannada.com

ಗುರುವಿದ್ದರೆ ಗುರಿ ಪಕ್ಕಾ! ಟೀಂ ಇಂಡಿಯಾದ ಆನ್​​ಫೀಲ್ಡ್​ ಸಕ್ಸಸ್​ ಹಿಂದೆ ಇರೋ ಈ ಪರಾಸ್ ಮಾಂಬ್ರೆ ಯಾರು ಗೊತ್ತಾ?

Share :

11-11-2023

    ವಿಶ್ವಕಪ್​​ನಲ್ಲಿ ಇಂಡಿಯನ್ ಬೌಲರ್​ಗಳ ಪರಾಕ್ರಮ..!

    5 ಬಾರಿ 200 ಕ್ಕಿಂತ ಕಮ್ಮಿ.. 2 ಬಾರಿ 100 ಕ್ಕಿಂತ ಕಮ್ಮಿ..!

    ಮಾಂಬ್ರೆ ಕೋಚಿಂಗ್ ಬಗ್ಗೆ ಇತ್ತು ಅನುಮಾನ..!

ಟೀಮ್ ಇಂಡಿಯಾ. ಸದ್ಯ ವಿಶ್ವಕಪ್​ನಲ್ಲಿ ಮೋಸ್ಟ್​ಡಿಸ್ಟ್ರಕ್ಟಿವ್ ಬೌಲಿಂಗ್ ಅಟ್ಯಾಕ್ ಹೊಂದಿರೋ ಟೀಮ್. ಆದರೆ, ಇದೇ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವನ್ನ ವಿಶ್ವಕಪ್​ಗೂ ಮುನ್ನ ಟೀಕಿಸಿದ್ದೆ ಹೆಚ್ಚು. ಆದರೀಗ ಇದೆಲ್ಲವೂ ಬದಲಾಗಿದೆ. ಇದಕ್ಕೆಲ್ಲಾ ಕಾರಣ ಆ ಒಬ್ಬ. ಆತನ್ಯಾರು ಗೊತ್ತಾ?.

ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮುಟ್ಟಿದೆಲ್ಲ ಚಿನ್ನ. ಬ್ಯಾಟಿಂಗ್​​ ದಾಂಡಿಗರು ದಾಂಗುಡಿ ಇಡ್ತಿದ್ರೆ. ಬೌಲಿಂಗ್​ನಲ್ಲಿ ಬೌಲರ್​ಗಳು ರಣ ಭಯಾನಕ ಸ್ಪೆಲ್​​ಗಳು ಎದುರಾಳಿಗಳ ನಿದ್ದೆ ಗೆಡಿಸಿದೆ. ಪರಿಣಾಮ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ದಂಡಯಾತ್ರೆ ನಡೆಸ್ತಿದೆ. ಈ ಸಕ್ಸಸ್​ ಸಿಕ್ರೇಟ್​ ಟೀಮ್ ಇಂಡಿಯಾದ ಬೌಲರ್​ಗಳ ಅಟ್ಯಾಕಿಂಗ್​ ಸ್ಪೆಲ್​..!

ಟೀಮ್ ಇಂಡಿಯಾ ಅಟ್ಯಾಕಿಂಗ್​​​ಗೆ ವಿಶ್ವವೇ ಸಲಾಂ..!

ಸದ್ಯ ವಿಶ್ವಕಪ್​ನಲ್ಲಿ ಇತರೆ 9 ತಂಡಗಳ ಬೌಲಿಂಗ್​ನದ್ದೇ ಒಂದು ಲೆಕ್ಕವಾದ್ರೆ. ಟೀಮ್ ಇಂಡಿಯಾ ಬೌಲರ್​ಗಳದ್ದೇ ಒಂದು ಲೆಕ್ಕ. ಕಾರಣ ವಿಶ್ವಕಪ್​ನಲ್ಲಿ ಇಂಡಿಯನ್ ಬೌಲರ್​ಗಳು ಮಾಡ್ತಿರುವ ಪರಾಕ್ರಮ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಟೀಮ್ ಇಂಡಿಯಾದ 8 ಗೆಲುವುಗಳು.

8 ಪಂದ್ಯ ಒಮ್ಮೆಯೂ 300 ರನ್ ಗಡಿ ದಾಟಿಲ್ಲ.!

ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ಯಾವ ಮಟ್ಟಕ್ಕೇ ಡಾಮಿನೇಟ್ ಮಾಡ್ತಿದೆ ಅಂದ್ರೆ, 8 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಒಮ್ಮೆಯೂ ಎದುರಾಳಿ ತಂಡವನ್ನ 300 ರನ್​ ಕ್ರಾಸ್​ ಮಾಡಲು ಬಿಟ್ಟಿಲ್ಲ. ಅಷ್ಟೇ ಯಾಕೆ… 5 ಪಂದ್ಯಗಳಲ್ಲಿ 200 ಕ್ಕಿಂತ ಎದುರಾಳಿಯನ್ನ ಬಗ್ಗುಬಡಿದಿರುವ ಟೀಮ್ ಇಂಡಿಯಾ, 2 ತಂಡಗಳನ್ನ ನೂರರೊಳಗೆ ಆಲೌಟ್​ ಮಾಡಿದೆ. ಟೀಮ್ ಇಂಡಿಯಾದ ಈ ಬೌಲಿಂಗ್​ ಸಕ್ಸಸ್​ ಹಿಂದೆ ಒಬ್ಬ ವ್ಯಕ್ತಿಯ ಕಠಿಣ ಶ್ರಮ ಇದೆ.

ಇದನ್ನು ಓದಿ: 4 ವರ್ಷ, 1589 ದಿನ.. ಅಂದು ಟೀಂ ಇಂಡಿಯಾ ಕ್ರಿಕೆಟಿಗರು ಸುರಿಸಿದ ಕಣ್ಣೀರಿಗೆ ಬ್ರೇಕ್​ ಹಾಕಲು ಬಂತು ಟೈಮ್​!

ಆನ್​​ಫೀಲ್ಡ್​ ಸಕ್ಸಸ್​ ಹಿಂದೆ ಪರಾಸ್ ಮಾಂಬ್ರೆ..!

ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಬೌಲರ್​ಗಳು ಈ ಮಟ್ಟಕ್ಕೆ ಸೌಂಡ್ ಮಾಡ್ತಿದ್ದಾರೆ ಅಂದ್ರೆ, ಅದಕ್ಕೆ ಪ್ರಮುಖ ಕಾರಣವೇ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ. ಆಟಗಾರರ ಜೊತೆ ಸದಾ ಬೆರೆಯುವ ಮಾಂಬ್ರೆ, ಆಟಗಾರರ ಪಾಲಿನ ಸ್ಪೂರ್ತಿ ಚಿಲುಮೆಯಾಗಿದ್ದಾರೆ. ಓರ್ವ ಆಟಗಾರ ಬೆಂಚ್​ನಲ್ಲಿದ್ದರೂ, ಮೋಟಿವೇಟ್ ಮಾಡುವ ಮಾಂಬ್ರೆ, ನೆಟ್ಸ್​ನಲ್ಲಿ ಹೆಚ್ಚು ಆಟಗಾರರ ಜೊತೆಯೇ ಬೆರೆಯುತ್ತಾರೆ. ಟೆಕ್ನಿಕಲಿ ಟಿಪ್ಸ್​ ನೀಡ್ತಾ ಆಟಗಾರರನ್ನ ಹುರಿದುಂಬಿಸ್ತಾರೆ. ಇದರ ಪರಿಣಾಮವೇ ವಿಶ್ವಕಪ್​​ನಲ್ಲಿ ಇಂಡಿಯನ್ ಬೌಲರ್ಸ್ ನೆಕ್ಸ್ಟ್ ಲೆವೆಲ್ ಬೌಲಿಂಗ್ ಮಾಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಎದುರಾಳಿ ವಿಕೆಟ್ ಬೇಟೆಗೆ A, B, C ಪ್ಲಾನ್​ ರೆಡಿ ಇರುತ್ತೆ.

ಮಾಂಬ್ರೆ ಅಡಿ ಬೌಲರ್​ಗಳ ಪ್ರದರ್ಶನ -ಪಂದ್ಯ ವಿಕೆಟ್​​ ಏಕಾನಮಿ
ಮೊಹಮ್ಮದ್ ಸಿರಾಜ್ 37 64 4.85
ಕುಲ್​ದೀಪ್ ಯಾದವ್ 33 57 4.63
ಶಾರ್ದೂಲ್ ಠಾಕೂರ್ 32 43 5.89
ಮೊಹಮ್ಮದ್ ಶಮಿ 19 39 5.07
ಜಸ್​ಪ್ರೀತ್ ಬೂಮ್ರಾ 19 36 4.27

ಹೌದು! ಮಾಂಬ್ರೆ ಅಡಿಯಲ್ಲಿ 37 ಏಕದಿನ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್, 64 ವಿಕೆಟ್ ಬೇಟೆಯಾಡಿ 4.85ರ ಏಕಾನಮಿ ಕಾಯ್ದುಕೊಂಡಿದ್ರೆ. ಕುಲ್​ದೀಪ್ ಯಾದವ್, 33 ಪಂದ್ಯಗಳಿಂದ 57 ವಿಕೆಟ್ ಉರುಳಿಸಿ 4.63ರ ಏಕಾನಮಿ ಕಾಯ್ದಕೊಂಡಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ 32 ಪಂದ್ಯಗಳಿಂದ 43 ವಿಕೆಟ್ ಉರುಳಿಸಿದ್ದು, 5.89ರ ಏಕಾನಮಿ ಹೊಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್​ ಬೂಮ್ರಾ ತಲಾ 19 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಶಮಿ 39 ವಿಕೆಟ್ ಉರುಳಿಸಿದ್ರೆ. ಬೂಮ್ರಾ 36 ವಿಕೆಟ್ ಬೇಟೆಯಾಡಿ 4.27ರ ಏಕನಾಮಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಇಂತಹ ಪರಾಸ್​ ಮಾಂಬ್ರೆಯ ಆರಂಭಿಕ ದಿನಗಳು ನಿಜಕ್ಕೂ ಅಪಮಾನದಿಂದಲೇ ಕೂಡಿತ್ತು.

ಇದನ್ನು ಓದಿ: ವಿಶ್ವಕಪ್​ ಟೂರ್ನಿಯಲ್ಲಿ ಡೂಪ್ಲಿಕೇಟ್ ಹವಾ.. ಪಂದ್ಯ ವೀಕ್ಷಿಸಿದ ಧೋನಿ, ಕೊಹ್ಲಿ, ನರೈನ್​ ನೋಡಿ ಫ್ಯಾನ್ಸ್​ ಶಾಕ್

ಆರಂಭಿಕ ದಿನಗಳಲ್ಲಿ ಟೀಕೆ, ಟಿಪ್ಪಣೆ.. ಆರೋಪ

ಹೌದು.! ಭರತ್​ ಅರುಣ್ ನಿರ್ಗಮನದ ಬಳಿಕ ಬೌಲಿಂಗ್ ಕೋಚ್ ಆಗಿ ಎಂಟ್ರಿ ಕೊಟ್ಟ ಮಾಂಬ್ರೆಯ ಆರಂಭಿಕ ದಿನಗಳು ಕಷ್ಟಕರವಾಗಿತ್ತು. ಎನ್​ಸಿಎನಲ್ಲಿ ಕೆಲಸ ಮಾಡಿದ್ದ ಮಾಂಬ್ರೆಯನ್ನ ಕೋಚ್​ ದ್ರಾವಿಡ್ ಕರೆತಂದಿದ್ರು. ಹೀಗಾಗಿ ದ್ರಾವಿಡ್ ಫ್ರೆಂಡ್ ಎಂಬ ಆರೋಪ ಕೇಳಿ ಬಂದಿತ್ತು. ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಆಟಗಾರನಾಗಿ ಸಕ್ಸಸ್​ ಕಾಣದ ಪರಾಸ್, ಇಂಡಿಯನ್ ಟೀಮ್​ನಲ್ಲಿ ಏನ್ ಮಾಡ್ತಾರೆ ಎಂದೇ ಟೀಕಿಸಿ ಕಾಲೆಳೆದಿದ್ದುಂಟು. ಆದ್ರೀಗ ಇದಕ್ಕೆಲ್ಲಾ ಇಂಡಿಯನ್ ಬೌಲರ್​ಗಳು ಈಗ ಉತ್ತರ ನೀಡ್ತಿದ್ದಾರೆ.

ಅದೇನೇ ಆಗಲಿ.. ವಿಶ್ವಕಪ್​ನಲ್ಲಿ ಇಂಡಿಯನ್ ಬೌಲರ್​ಗಳು ನೆಕ್ಸ್ಟ್​ ಲೆವೆನ್ ಪರ್ಫಾಮೆನ್ಸ್​ ನೀಡ್ತಿದ್ದು, ಪರಾಸ್ ಅಂಡರ್​ನಲ್ಲಿ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದೆ. ಇದು ಹೀಗೆ ಮುಂದುವರಿದು ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಲಿ ಅನ್ನೋದೇ ಎಲ್ಲರ ಆಶಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗುರುವಿದ್ದರೆ ಗುರಿ ಪಕ್ಕಾ! ಟೀಂ ಇಂಡಿಯಾದ ಆನ್​​ಫೀಲ್ಡ್​ ಸಕ್ಸಸ್​ ಹಿಂದೆ ಇರೋ ಈ ಪರಾಸ್ ಮಾಂಬ್ರೆ ಯಾರು ಗೊತ್ತಾ?

https://newsfirstlive.com/wp-content/uploads/2023/11/Paras-mhambrey.jpg

Load More