newsfirstkannada.com

ನಾಯಕತ್ವ ರಿಜೆಕ್ಟ್​ ಮಾಡಿದ್ದ ಸಚಿನ್ ಅಂದು ಯಾರನ್ನ ಸಜೆಸ್ಟ್​ ಮಾಡಿದ್ರು ಗೊತ್ತಾ? ಸಖತ್ತಾಗಿದೆ ಈ ಸ್ಟೋರಿ

Share :

07-11-2023

    ಅರಸಿ ಬಂದ ನಾಯಕತ್ವವನ್ನು ಬೇಡ ಎಂದಿದ್ದ ಸಚಿನ್​ ತೆಂಡುಲ್ಕರ್​

    ಟೀಂ ಇಂಡಿಯಾಗೆ ಸರಿಯಾದ ನಾಯಕನನ್ನು ಸಜೆಸ್ಟ್​ ಮಾಡಿದ್ದ ಮಾಸ್ಟರ್​ ಬ್ಲಾಸ್ಟರ್​

    ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಿಸಿ ಬಿಟ್ರು ಸಚಿನ್​ ಸಜೆಸ್ಟ್​ ಮಾಡಿದ್ದ ವ್ಯಕ್ತಿ

ಟೀಮ್​ ಇಂಡಿಯಾ ನಾಯಕತ್ವ ಹುಡುಕಿಕೊಂಡು ಬಂದ್ರೆ ಯಾರಾದ್ರೂ ಬಿಡ್ತಾರಾ.? ಆದರೆ, ಸಚಿನ್​ ತೆಂಡುಲ್ಕರ್​ ಆಫರ್​ನ ರಿಜೆಕ್ಟ್​ ಮಾಡಿ ಬೇರೊಬ್ಬರನ್ನ ಸಜೆಸ್ಟ್​ ಮಾಡಿದ್ರಂತೆ. ಸಚಿನ್​ರ ಆ ಸಜೆಶನ್​ ಭಾರತೀಯ ಕ್ರಿಕೆಟ್​ ಅನ್ನೇ ಬದಲಾಯಿಸಿಬಿಡ್ತು. ಅಷ್ಟಕ್ಕೂ ಸಚಿನ್​ ನಾಯಕತ್ವ ಬೇಡ ಅಂದಿದ್ಯಾಕೆ.? ಯಾರನ್ನ ಸಜೆಸ್ಟ್​ ಮಾಡಿದ್ರು.? ಇಲ್ಲಿದೆ ಮಾಹಿತಿ.

2007ರ ಇಂಗ್ಲೆಂಡ್​ ಪ್ರವಾಸದ ವೇಳೆ ಟೀಮ್​ ಇಂಡಿಯಾ ನಾಯಕತ್ವ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ರನ್ನ ಅರಸಿ ಬಂದಿತ್ತಂತೆ. ಅಂದಿನ ಬಿಸಿಸಿಐ ಅಧ್ಯಕ್ಷ ಶರದ್​ ಪವಾರ್​​, ಓವಲ್​ ಪಂದ್ಯಕ್ಕೂ ಮುನ್ನ ಸಚಿನ್​ಗೆ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ರಂತೆ. ಆದರೆ, ಸಚಿನ್​​ ಈ ಆಫರ್​ ಅನ್ನ ನಿರಾಕರಿಸಿ ಬಿಟ್ರಂತೆ. ಬದಲಾಗಿ ಒಂದು ಸಲಹೆ ನೀಡಿದ್ರಂತೆ. ಆ ಸಲಹೆ ಇಡೀ ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಿಸಿ ಬಿಡ್ತು.

ಅಂದು ನಡೆದ ಮೀಟಿಂಗ್​ನಲ್ಲಿ ಶರದ್​ ಪವಾರ್ ನೀನೆ ಲೀಡರ್​ಶಿಪ್​ ರೋಲ್​ನ ನಿಭಾಯಿಸಬೇಕು ಎಂದು ಹೇಳಿದ್ರಂತೆ. ಇದಕ್ಕೆ ಉತ್ತರಿಸಿದ್ದ ಸಚಿನ್​, ಹಿರಿಯ ಆಟಗಾರನಾಗಿ ಲೀಡರ್​ಶಿಪ್​ ರೋಲ್ ಯಾವಾಗಲೂ​ ನಿಭಾಯಿಸ್ತಿನಿ. ಆದರೆ ಕ್ಯಾಪ್ಟನ್​ ಟ್ಯಾಗ್​ ಬೇಡ ಎಂದ್ರಂತೆ. ನನ್ನ ದೇಹ ತುಂಬಾ ಸಮಸ್ಯೆಯಲ್ಲಿದೆ. ನನ್ನ ಎರಡೂ ಆ್ಯಂಕಲ್​ ಇಂಜುರಿಯಾಗಿವೆ. ಫೀಲ್ಡ್​ನಲ್ಲಿ ತುಂಬಾ ಹೊತ್ತು ಇರೋದಕ್ಕೆ ಆಗ್ತಿಲ್ಲ. ಡ್ರೆಸ್ಸಿಂಗ್​ ರೂಮ್​ಗೆ ಹೋಗಿ ಆಗಾಗ ಐಸ್​​ಪ್ಯಾಕ್​ ಇಡೋಕೆ ಆಗಲ್ಲ ಎಂದರಂತೆ.

ಆದರೆ, ನನ್ನ ಬಳಿ ಒಂದು ಸಲಹೆ ಇದೆ ಎಂದ ಸಚಿನ್​, ಎಮ್​.ಎಸ್​ ಧೋನಿಯ ಹೆಸರನ್ನ ಸೂಚಿಸಿದ್ರಂತೆ. ನಾನು ಸ್ಲಿಪ್​ ಫೀಲ್ಡಿಂಗ್​ ಮಾಡುವಾಗ ತುಂಬಾ ಮಾತನಾಡಿದ್ದೇನೆ. ಧೋನಿಯ ಕ್ರಿಕೆಟಿಂಗ್​ ಬ್ರೈನ್​ ಅದ್ಭುತವಾಗಿದ್ದು, ಆತ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಚಿನ್​, ಪವಾರ್​​ಗೆ ತಿಳಿಸಿದ್ರಂತೆ. ಆ ನಂತರದ್ದು ಈಗ ಇತಿಹಾಸ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾಯಕತ್ವ ರಿಜೆಕ್ಟ್​ ಮಾಡಿದ್ದ ಸಚಿನ್ ಅಂದು ಯಾರನ್ನ ಸಜೆಸ್ಟ್​ ಮಾಡಿದ್ರು ಗೊತ್ತಾ? ಸಖತ್ತಾಗಿದೆ ಈ ಸ್ಟೋರಿ

https://newsfirstlive.com/wp-content/uploads/2023/11/Sachin-Tendulkar.jpg

Load More