ರಾಷ್ಟ್ರಕವಿ ಕುವೆಂಪು ನಾಡಿಗೆ ಕಳಂಕ ತರಲು ಮುಂದಾದ ಶಂಕಿತರು
ವಿದೇಶದಲ್ಲೇ ಕುಳಿತು ಉಗ್ರವಾದದ ಪಾಠ ಮಾಡುತ್ತಿದ್ದ ಅರಾಫತ್ ಅಲಿ
ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿಬಿದ್ದವರು ಮಾಡಿದ್ದ ಪ್ಲಾನ್ ಏನೆಲ್ಲಾ ಗೊತ್ತಾ?
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಕದ್ರಿ ದೇವಸ್ಥಾನ ಸ್ಫೋಟಕ್ಕೆ ಸಂಚು, ಮಂಗಳೂರು ಕುಕ್ಕರ್ ಬ್ಲಾಸ್ಟ್ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಐಸಿಸ್ ಶಂಕಿತ ಉಗ್ರ ಅರಾಫತ್ ಅಲಿ ಬಂಧನವಾಗಿದೆ. ಬಂಧನದ ಬಳಿಕ ಎನ್ಐಎ ತನಿಖೆಯಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ಹೊರಬಿದ್ದಿದೆ. ರಾಷ್ಟ್ರಕವಿ ಕುವೆಂಪು ಹುಟ್ಟೂರಾದ ತೀರ್ಥಹಳ್ಳಿಗೆ ಕುಖ್ಯಾತ ಹೆಸರನ್ನು ತರಬೇಕು ಎಂದು ಸಂಚು ರೂಪಿಸಿರುವ ವಿಚಾರ ತನಿಖೆ ವೇಳೆ ಗೊತ್ತಾಗಿದೆ.
ಹುಟ್ಟೂರಿಗೆ ಕಳಂಕ ತರಲು ಮುಂದಾದ ಶಂಕಿತರು
ಶಂಕಿತ ಉಗ್ರ ಅರಾಫತ್ ಅಲಿ ಕುವೆಂಪು ಹುಟ್ಟೂರಿಗೆ ತೀರ್ಥಹಳ್ಳಿ ಬ್ರದರ್ಸ್ ಎಂಬ ಹೆಸರನ್ನು ತರಬೇಕು ಎಂದು ಪ್ರಯತ್ನಿಸಿದ್ದ. ಆದರೆ ಈ ಕಾನ್ಸೆಪ್ಟ್ ಹುಟ್ಟು ಹಾಕಿದ್ದೆ ಅಬ್ದುಲ್ ಮತೀನ್. ಈತ ಎನ್ಐಎ ಮೋಸ್ಟ್ ವಾಂಟೇಡ್ ಆಗಿದ್ದು, 2014 ರಲ್ಲೇ ಉಗ್ರವಾದದ ನಂಟು ಅಂಟಿಸಿಕೊಂಡಿದ್ದನು.
ವಿದೇಶಕ್ಕೆ ಎಸ್ಕೇಸ್ ಆಗಿದ್ದ ಮತೀನ್
ಎನ್ಐಎ ಮೋಸ್ಟ್ ವಾಂಟೇಡ್ ಅಬ್ದುಲ್ ಮತೀನ್ಗೆ ಉಗ್ರರ ನಂಟು ಹೊಂದಿದ ಬಳಿಕ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಈ ವೇಳೆ 2020 ರಲ್ಲಿ ಮಾಜ್ ಮುನೀರ್, ಶಾರೀಕ್, ಹಾಗೂ ಅರಾಫತ್ ಅಲಿ ಮೂವರು ಗೋಡೆ ಬರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಬ್ದುಲ್ ಮತೀನ್ ಇವರನ್ನು ಕಂಟ್ಯಾಕ್ಟ್ ಮಾಡಿದ್ದನು. ಅಬ್ದುಲ್ ಮತೀನ್ ಸೂಚನೆಯಂತೆ ಅರಾಫತ್ ಅಲಿಯೂ ವಿದೇಶಕ್ಕೆ ಎಸ್ಕೇಪ್ ಆಗಿದ್ದನು. ನಂತರ ಅಲ್ಲಿಂದ ಶಾರೀಕ್ ಹಾಗೂ ಮಾಜ್ ಮುನೀರ್ಗೆ ಉಗ್ರವಾದ ಬಗ್ಗೆ ಪಾಠ ಮಾಡುತ್ತಿದ್ದ ಎನ್ನಲಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣ
ಅರಾಫತ್ ಅಲಿ ಇವ್ರಿಗೆ ಮೊದಲು ಟ್ರೈನಿಂಗ್ ಆಗಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದನು. ಬಳಿಕ ಕದ್ರಿ ದೇವಸ್ಥಾನದಲ್ಲಿ ಸ್ಫೋಟಗೊಳಿಸುವಂತೆ ಮೊದಲ ಟಾರ್ಗೆಟ್ ನೀಡಿದ್ದ. ಆದರೆ ಮೊದಲ ಯತ್ನವೇ ವಿಫಲವಾಗಿತ್ತು. ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಅವರು ಹಾಕಿಕೊಂಡಿದ್ದ ಸಂಚು ಫೇಲ್ ಆಗಿತ್ತು. ಇದರಿಂದ ತೀರ್ಥಹಳ್ಳಿ ಬ್ರದರ್ಸ್ ಎಂಬ ಕುಖ್ಯಾತ ಹೆಸರನ್ನು ಮುನ್ನೆಲೆಗೆ ತರುವ ಕನಸು ಫೇಲ್ ಆಯ್ತು. ತನ್ನ ಪ್ಲಾನ್ ಫೇಲ್ ಆಯ್ತು ಎಂದ ಅರಾಫತ್ ಅಲಿ ಕೀನ್ಯಾದ ನೈರೋಬಿಯಿಂದ ಭಾರತಕ್ಕೆ ವಾಪಸ್ಸು ಬಂದ. ಈ ವೇಳೆ ದೆಹಲಿಯಲ್ಲಿ ಎನ್ಐಎ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ವೇಳೆ ವಿಧ್ವಂಸಕ ಕೃತ್ಯದ ಬಗ್ಗೆ ಬಾಯಿ ಬಿಚ್ಚಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ