ಮಂಗಳೂರು ಚೆಲುವೆ ಹೊಳೆಯೋ ಕಣ್ಣು ನಿಮಗೂ ಬೇಕಾ?
ಐಶ್ವರ್ಯಾ ರೈ ಮೀನಿನಂತ ಕಣ್ಣು ಎಂಥವರನ್ನು ಆಕರ್ಷಿಸುತ್ತದೆ
ಮಹಾರಾಷ್ಟ್ರದ ಸಚಿವ ವಿಜಯಕುಮಾರ್ ಗವಿತ್ ಹೇಳಿದ್ದೇನು?
ಬಾಲಿವುಡ್ ನಟಿ, ಮಂಗಳೂರು ಚೆಲುವೆ ಐಶ್ವರ್ಯಾ ರೈ ರೀತಿಯ ಸುಂದರ ತ್ವಜೆ, ಹೊಳೆಯೋ ಕಣ್ಣು ನಿಮಗೂ ಬೇಕಾ? ಇದಕ್ಕಾಗಿ ಯಾವ ಸೋಪ್ ಬಳಸೋದು ಬೇಡ. ಮೇಕ್ ಅಪ್ ಕ್ರೀಮ್‌ಗಳ ಮೊರೆ ಹೋಗೋದು ಬೇಡ. ಪ್ರತಿದಿನ ಮೀನೂಟ ಮಾಡಿದ್ರೆ ಸಾಕಂತೆ. ಮಹಾರಾಷ್ಟ್ರ ಸಂಪುಟದ ರಾಜ್ಯ ಬುಡಕಟ್ಟು ವ್ಯವಹಾರಗಳ ಸಚಿವ ವಿಜಯಕುಮಾರ್ ಗವಿತ್ ಹೀಗೊಂದು ಹೇಳಿಕೆ ನೀಡಿ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ. ಪ್ರತಿ ದಿನ ಮೀನೂಟ ಮಾಡಿ ಐಶ್ವರ್ಯಾ ರೈ ಅವರಂತ ಸುಂದರ ಕಣ್ಣುಗಳನ್ನು ಪಡೆಯಿರಿ ಎಂದಿದ್ದಾರೆ.
ಐಶ್ವರ್ಯಾ ರೈ ಕಣ್ಣಿನ ಬಗ್ಗೆ ಸಚಿವ ವಿಜಯಕುಮಾರ್ ಗವಿತ್ ನೀಡಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ರೈ ಕೂಡ ಮಂಗಳೂರು ಮೂಲದವರು. ಅವರು ಮೀನಿನ ಊಟ ಮಾಡಿರುವುದರಿಂದಲೇ ಸುಂದರವಾದ ಕಣ್ಣನ್ನು ಹೊಂದಿದ್ದಾರೆ. ಅವರ ಮೀನಿನಂತ ಕಣ್ಣು ಎಂಥವರನ್ನು ಆಕರ್ಷಿಸುತ್ತದೆ. ಮೀನಿನಲ್ಲಿ ವಿಶೇಷವಾದ ಎಣ್ಣೆಯ ಅಂಶವೊಂದಿದೆ. ಅದು ನಿಮ್ಮ ತ್ವಜೆಯನ್ನು ಕೋಮಲವಾಗಿಸುತ್ತದೆ ಎಂದು ಗವಿತ್ ಹೇಳಿದ್ದಾರೆ.
ಇದನ್ನೂ ಓದಿ: VIDEO: ಭಾರತದ ಅತ್ಯಂತ ಹಿರಿಯ ಆನೆ ಇನ್ನಿಲ್ಲ.. 89 ವರ್ಷ ಬಿಜುಲಿ ಪ್ರಸಾದ್ ಬದುಕಿದ್ದೇ ರೋಚಕ
ಸಾರ್ವಜನಿಕ ಸಮಾರಂಭವೊಂದರಲ್ಲಿ ಸಚಿವ ವಿಜಯಕುಮಾರ್ ಗವಿತ್ ಈ ಹೇಳಿಕೆ ನೀಡಿದ್ದು ಭಾರೀ ವೈರಲ್ ಆಗಿದೆ. 68 ವರ್ಷದ ಗವಿತ್ ಅವರಿಗೂ ಒಬ್ಬರು ಮಗಳಿದ್ದಾರೆ. ಮಗಳ ಹೆಸರು ಹೀನಾ ಗವಿತ್, ಇವರು ಬಿಜೆಪಿ ಲೋಕಸಭಾ ಸದಸ್ಯರು. ಇವರೂ ಕೂಡ ಪ್ರತಿದಿನ ಮೀನಿನ ಊಟ ಮಾಡಿದ್ರೆ ತ್ವಜೆಯನ್ನು ಮೃದುವಾಗಿಸುತ್ತದೆ ಅನ್ನೋದನ್ನ ಕೇಳಿದ್ರಂತೆ. ಹಾಗಾಗಿ ಜನರು ಪ್ರತಿದಿನ ಮೀನಿನ ಊಟ ಮಾಡಿದ್ರೆ ಐಶ್ವರ್ಯಾ ರೈ ಅಂತೆ ಸುಂದರವಾಗಿ ಕಾಣಿಸಬಹುದು ಎಂದಿದ್ದಾರೆ. ಮಹಾರಾಷ್ಟ್ರ ಸಚಿವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೀನಿನಲ್ಲಿ ವಿಶೇಷವಾದ ಎಣ್ಣೆಯ ಅಂಶವಿರೋದು ನಿಜವಾದ್ರೂ ಅದರಿಂದ ಐಶ್ವರ್ಯಾ ರೈ ರೀತಿಯಲ್ಲಿ ಸುಂದರವಾಗಿ ಕಾಣಲು ಸಾಧ್ಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ