newsfirstkannada.com

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಡಾಕ್ಟರ್​​ ಏನಂದ್ರು? ನಿಜವಾಗ್ಲೂ ಹುಷಾರ್ ತಪ್ಪಿದ್ರಾ?

Share :

18-09-2023

    ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಚೈತ್ರಾ

    ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಡಾಕ್ಟರ್ ಏನಂದ್ರು?

    ನಿಜವಾಗಲೂ ಎದೆ ನೋವಿತ್ತಾ? ರಿಪೋರ್ಟ್​​ ಹೇಳ್ತಿರೋದೇನು?

ಬೆಂಗಳೂರು: 5 ಕೋಟಿ ಡೀಲ್​ ಪ್ರಕರಣದ ಎ1 ಆರೋಪಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಮೂರ್ಛೆ ರೋಗ & ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಕಾರ್ಡಿಯಾಲಾಜಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಈಗ ಕೊನೆಗೂ ಚೈತ್ರಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ನ್ಯೂರಾಲಾಜಿಸ್ಟ್, ಮನೋ ವೈದ್ಯರು ಚೈತ್ರಾ ಆರೋಗ್ಯದ ತಪಾಸಣೆ ಮಾಡಿದ್ದಾರೆ. ಚೈತ್ರಾಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ ಸಿಸಿಬಿ ಕಚೇರಿಗೆ ಕೆರದುಕೊಂಡು ಹೋಗಲಾಗಿದೆ.

ಇನ್ನು ಚೈತ್ರಾಳ ಆರೋಗ್ಯ ಸ್ಥಿರವಾಗಿದೆ ಎಂದು PMSSY ಆಸ್ಪತ್ರೆಯ ವಿಶೇಷಾಧಿಕಾರಿ ಡಾಕ್ಟರ್ ದಿವ್ಯ ಪ್ರಕಾಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಚೈತ್ರಾಳಿಗೆ ನಡೆಸಿರುವ ಎಲ್ಲಾ ಪರೀಕ್ಷೆಗಳಲ್ಲೂ ಆರೋಗ್ಯ ಸುಸ್ಥಿತಿಯಲ್ಲಿರುವ ಬಗ್ಗೆ ರಿಪೋರ್ಟ್ ಬಂದಿದೆ. ಇನ್ನು ಫಿಡ್ಸ್ ವಿಚಾರವಾಗಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಸದ್ಯಕ್ಕೆ ನರ ತಜ್ಞರು ಕೆಲವು ಮಾತ್ರೆಗಳನ್ನು ನೀಡಿದ್ದು ಹೊರತುಪಡಿಸಿದ್ರೆ ಬೇರೆ ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ನೀಡಿಲ್ಲ. ಒಟ್ಟಾರೆಯಾಗಿ ಚೈತ್ರಾ ಆರೋಗ್ಯ ಈಗ ನಾರ್ಮಲ್ ಆಗಿದೆ ಅಂತ ದಿವ್ಯ ಪ್ರಕಾಶ್ ತಿಳಿಸಿದ್ರು.

ಚೈತ್ರಾ ಕುಂದಾಪುರ ಆಂಡ್​​ ಟೀಂ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂವರು ಆರೋಪಿಗಳನ್ನ ಮೆಡಿಕಲ್ ಟೆಸ್ಟ್​​ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಧನರಾಜ್, ಪ್ರಜ್ವಲ್ ಮತ್ತು ಚನ್ನ ನಾಯ್ಕ್ ಅವರನ್ನ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಡಾಕ್ಟರ್​​ ಏನಂದ್ರು? ನಿಜವಾಗ್ಲೂ ಹುಷಾರ್ ತಪ್ಪಿದ್ರಾ?

https://newsfirstlive.com/wp-content/uploads/2023/09/Chaitra-Kundapura-6.jpg

Load More