newsfirstkannada.com

ಮೂರ್ಛೆ ರೋಗದ ಬಳಿಕ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರ ಮತ್ತೊಂದು ಕಂಪ್ಲೆಂಟ್; ಜಯದೇವ ಆಸ್ಪತ್ರೆಗೆ ಶಿಫ್ಟ್​ ಆಗ್ತಾರಾ?

Share :

17-09-2023

    ಅಭಿನವ ಹಾಲಶ್ರೀಗಳ ಕಾರು ಚಾಲಕ ಹೇಳಿದ ಸತ್ಯವೇನು..?

    ಸಿಸಿಬಿ ತನಿಖೆಯಿಂದ ತಪ್ಪಿಸಿಕೊಳ್ಳಲು ಚೈತ್ರಾ ಆಸ್ಪತ್ರೆಯಲ್ಲಿ ಡ್ರಾಮಾ..?

    ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ವೈದ್ಯರು ಹೇಳ್ತಿರೋದೇನು..?

ಗೋವಿಂದನಿಗೆ ಪಂಚಕೋಟಿ ನಾಮ ಹಾಕಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಪೊಲೀಸರ ಅತಿಥಿಯಾಗಿದ್ದಾಳೆ. ಇದುವರೆಗೆ ಹಲವು ಆರೋಪಿಗಳನ್ನು ಖೆಡ್ಡಾಗೆ ಕೆಡವಿರೋ ಪೊಲೀಸರು ಆರೋಪಿಗಳನ್ನು ಇನ್ನಿಲ್ಲದಂತೆ ವಿಚಾರಣೆ ನಡೆಸ್ತಿದ್ದಾರೆ. ಈ ವಿಚಾರಣೆ ವೇಳೆ ಚೈತ್ರಾ ಬೃಹನ್ನಾಟಕ ಮಾಡಿ ಆಸ್ಪತ್ರೆ ಪಾಲಾಗಿದ್ದಾಳೆ. ಚೈತ್ರಾ ಆಸ್ಪತ್ರೆಯಲ್ಲಿದ್ದು ಡ್ರಾಮಾ ಮಾಡ್ತಿದ್ದಾಳಾ ಎಂಬ ಪ್ರಶ್ನೆ ಮೂಡಿದೆ.

ಚೈತ್ರಾ ಕುಂದಾಪುರ ಅಸ್ವಸ್ಥ

ಸಿಸಿಬಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಚೈತ್ರಾ ಹೈಡ್ರಾಮಾ?

ವಂಚನೆ ಕೇಸ್‌ನಲ್ಲಿ ಸಿಸಿಬಿ ಬಲೆಗೆ ಬಿದ್ದಿರೋ ಚೈತ್ರಾ ಮೂರ್ಛೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸಿಬಿ ತನಿಖೆಯಿಂದ ತಪ್ಪಿಸಿಕೊಳ್ಳಲು ಚೈತ್ರಾ ಈ ರೀತಿ ಆಸ್ಪತ್ರೆಯಲ್ಲಿದ್ದು ಹೈಡ್ರಾಮಾ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ವೈದ್ಯರೇ ಖುದ್ದು ಚೈತ್ರಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸ್ಥಿರವಾಗಿದೆ, ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಇದೆ ಅಂತ ವೈದ್ಯರು ಹೇಳಿದ್ದಾರೆ. ಇನ್ನೂ ಆಸ್ಪತ್ರೆಯಿಂದ ಚೈತ್ರಾ ಡಿಸ್ಚಾರ್ಜ್ ಆಗದಿರುವುದು ಅನುಮಾನ ಮೂಡಿಸಿದೆ. ಮೊದಲು ಮೂರ್ಚೆ ರೋಗದಿಂದ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಚೈತ್ರಾ ಇದೀಗ ಮತ್ತೊಂದು ಹೊಸ ವರಸೆಯನ್ನ ತೆಗೆದಂತಿದೆ.

ಚೈತ್ರಾಗೆ ಎದೆನೋವು?!

  • ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾಗೆ ಚಿಕಿತ್ಸೆ ಮುಂದುವರಿಕೆ
  • ಚೈತ್ರಾಗೆ ಎದೆ ನೋವಿನ ಸಮಸ್ಯೆ ಕಾಣಿಸಿಕೊಂಡಿರುವ ಮಾಹಿತಿ
  • ಜಯದೇವ ಹೃದ್ರೋಗ ಆಸ್ಪತ್ರೆಗೆ ಶಿಪ್ಟ್ ಮಾಡಲು ವೈದ್ಯರ ಸೂಚನೆ
  • ಜಯದೇವಗೆ ಶಿಫ್ಟ್ ಮಾಡಲು ಆ್ಯಂಬುಲೆನ್ಸ್ ಸಿದ್ಧತೆ ಮಾಡಲಾಗಿತ್ತು
  • ಆದ್ರೆ, ಚೈತ್ರಾ ಕುಂದಾಪುರ ಆರೋಗ್ಯ ಸ್ಟೇಬಲ್‌ ಇರುವ ಮಾಹಿತಿ
  • ಕೊನೆಯ ಕ್ಷಣದಲ್ಲಿ ಜಯದೇವಗೆ ಶಿಫ್ಟ್‌ ಸದ್ಯಕ್ಕೆ ಕ್ಯಾನ್ಸಲ್ ಆಗಿದೆ
  • ವಿಕ್ಟೋರಿಯಾದಲ್ಲೇ ಚಿಕಿತ್ಸೆ.. ಇವತ್ತು ಪರಿಸ್ಥಿತಿ ನೋಡಿ ವ್ಯವಸ್ಥೆ

ಚೈತ್ರಾ ಕುಂದಾಪುರ

ಅಭಿನವ ಹಾಲಶ್ರೀ ಕಾರು ಚಾಲಕನ ತೀವ್ರ ವಿಚಾರಣೆ

ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂಪಾಯಿ ವಂಚನೆ ಕೇಸ್‌ನಲ್ಲಿ ಅಭಿನವ ಹಾಲಶ್ರೀ ಕೂಡಾ ಆರೋಪಿಯಾಗಿದ್ದಾರೆ. ಆದ್ರೀಗ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಅವರ ಪತ್ತೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ ಹಾಲಶ್ರೀ ಕಾರು ಚಾಲಕನನ್ನ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು. ಈ ವೇಳೆ ಶ್ರೀಗಳ ಬಗ್ಗೆ ತನಗೇನು ಗೊತ್ತಿಲ್ಲ ಅಂತ ಕಾರು ಚಾಲಕ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಎಲ್ಲಿ ಹೋದ್ರು, ಎಲ್ಲಿದ್ದಾರೆ ಏನೂ ಸಹ ನನಗೆ ಗೊತ್ತಿಲ್ಲ. ಮಠದಿಂದ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದ್ರು. ಆ ಮೇಲೆ ಸಂಪರ್ಕ ಮಾಡಿಲ್ಲ ಅಂತ ಚಾಲಕ ಹೇಳಿದ್ದಾನೆ. ಸದ್ಯ ಚಾಲಕನ ನಂಬರ್‌ನ ಪೊಲೀಸರು ಸಿಡಿಆರ್ ಹಾಕಿಸಿದ್ದಾರೆ.

ಗೋವಿಂದನಿಗೆ ಪಂಚಕೋಟಿ ನಾಮ ಹಾಕಿದ ಪ್ರಕರಣದಲ್ಲಿ ಕ್ಷಣಕ್ಕೊಂದು ರೋಚಕ ತಿರುವು ಸಿಗ್ತಿದೆ. ಸದ್ಯ ಚೈತ್ರಾ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಪೊಲೀಸರ ತನಿಖೆಯ ವೇಗಕ್ಕೆ ಹಿನ್ನಡೆಯಾಗಿದೆ. ಅದೇನೆ ಇರಲಿ, ವಂಚನೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರ್ಛೆ ರೋಗದ ಬಳಿಕ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರ ಮತ್ತೊಂದು ಕಂಪ್ಲೆಂಟ್; ಜಯದೇವ ಆಸ್ಪತ್ರೆಗೆ ಶಿಫ್ಟ್​ ಆಗ್ತಾರಾ?

https://newsfirstlive.com/wp-content/uploads/2023/09/CHAITRA_KUNDAPUR-1.jpg

Load More