ತಂದೆಯಿಂದಲೇ ದಾರುಣ ಅಂತ್ಯ ಕಂಡ ಕುಡುಕ ಮಗ..!
ಮಗನನ್ನು ಹತ್ಯೆ ಮಾಡಿದ ಅಪ್ಪ ಈಗ ಎಲ್ಲಿದ್ದಾರೆ ಗೊತ್ತಾ?
ತಂದೆ, ಮಗನನ್ನು ಕೊಲೆ ಮಾಡಲಿತ್ತು ಆ ಒಂದು ಕಾರಣ
ದೊಡ್ಡಬಳ್ಳಾಪುರ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಕುಡಿಯಬೇಡಿ ಅಂತಾ ಎಷ್ಟೇ ಹೇಳಿದ್ರು ಕುಡುಕರು ಕೇಳಲ್ಲ. ಮದ್ಯಪಾನ ಮಾಡಿ ನಿತ್ಯ ಕಿರುಕುಳ ಕೊಡುತ್ತಿದ್ದ ಎಂದು ಸ್ವಂತ ಮಗನನ್ನೇ, ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಾಣಿಗರಹಳ್ಳಿ ಗ್ರಾಮದ ನಿವಾಸಿ ಆದರ್ಶ್ (28) ಕೊಲೆಯಾದವರು. ಜಯರಾಮಯ್ಯ (58) ಪುತ್ರನನ್ನು ಹತ್ಯೆ ಮಾಡಿ ಸದ್ಯ ಜೈಲು ಪಾಲಾಗಿದ್ದಾರೆ. ಮಗ ನಿತ್ಯ ಮದ್ಯಪಾನ ಸೇವನೆ ಮಾಡಿ ಮನೆಗೆ ಬರುತ್ತಿದ್ದನಂತೆ. ಬಂದು ಒಂದಿಲ್ಲವೊಂದು ಕಾರಣದಿಂದ ತಂದೆ ಜೊತೆ ಜಗಳ ತೆಗೆಯುತ್ತಿದ್ದನು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಆರೋಪಿ ತಂದೆ, ಕುಡುಕ ಮಗನ ಕೈ, ಕಾಲು ಕಟ್ಟಿ ಹಾಕಿದ್ದಾನೆ.
ಬಳಿಕ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ. ಸದ್ಯ ಕೊಲೆ ಆರೋಪದ ಹಿನ್ನೆಲೆಯಲ್ಲಿ ಮಗನನ್ನ ಹತ್ಯೆಗೈದಿರುವ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ