newsfirstkannada.com

WATCH: ಸಿಲಿಕಾನ್ ಸಿಟಿಯಲ್ಲಿ ಮತ್ತೆ JCB ಘರ್ಜನೆ; ಡೆಮಾಲಿಷನ್​ಗೆ ವಿರೋಧ.. BBMP ಮೇಲೆ ರೋಷಾವೇಶ

Share :

19-06-2023

    BBMP ಅಧಿಕಾರಿಗಳಿಗೆ ಫರ್ನ್ಸ್ ಸಿಟಿ ನಿವಾಸಿಗಳು ಪ್ರಶ್ನೆಗಳ ಸುರಿಮಳೆ

    ಜೆಸಿಬಿಗಳ ಒತ್ತುವರಿ ತೆರವಿಗೆ ಸ್ಥಳೀಯ ನಿವಾಸಿಗಳ ಭಾರೀ ವಿರೋಧ

    ದೊಡ್ಡನೆಕುಂದಿಯ ಫರ್ನ್ಸ್ ಸಿಟಿ ಬಳಿ ರಾಜಕಾಲುವೆ ಒತ್ತುವರಿ ತೆರವು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮತ್ತೊಮ್ಮೆ ಜೆಸಿಬಿಗಳ ಘರ್ಜನೆ ಶುರವಾಗಿದೆ. ಇಂದು ದೊಡ್ಡನೆಕುಂದಿಯ ಫರ್ನ್ಸ್ ಸಿಟಿ ಬಳಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಒತ್ತುವರಿ ತೆರವಿಗೆ ಫರ್ನ್ಸ್ ಸಿಟಿ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆರೆಯ ಆರಂಭದಿಂದ ತೆರವು ಮಾಡಿಕೊಂಡು ಬನ್ನಿ. ಮಧ್ಯದಲ್ಲಿ ಯಾಕೆ ತೆರವು ಮಾಡ್ತೀರಿ? ಬೇರೆಲ್ಲಾ ಸ್ಟೇ ಇದೆ, ಇಲ್ಲಿ ತೆರವು ಮಾಡಿದ್ರೆ ಕಾಲುವೆ ನಿರ್ಮಾಣ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ದೊಡ್ಡವರ ಬಳಿ ಹೋಗ್ತಿಲ್ಲ, ಸಮಸ್ಯೆಯೇ ಇಲ್ಲದ ಕಡೆಯೇ ಬಂದು ತೆರವು ಮಾಡೋ ಅಗತ್ಯ ಏನಿದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಫರ್ನ್ಸ್ ಸಿಟಿ ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು, ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಒತ್ತುವರಿ ಮಾಡದಂತೆ ವಕೀಲರನ್ನು ಕರೆಸಿದರು. ನಿವಾಸಿಗಳು ಕೆಲ ಕಾಲ ಅಧಿಕಾರಿಗಳ ಬಳಿ ಬಂದು ಮನವಿ ಮಾಡಿಕೊಂಡರು. ಇನ್ನು ಅವರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕೂಡಲೇ ಘಟನಾ ಸ್ಥಳಕ್ಕೆ ಮಹಾದೇಪುರ ಪೊಲೀಸ್ ಅಧಿಕಾರಿಗಳು ಹಾಗೂ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಸಿಲಿಕಾನ್ ಸಿಟಿಯಲ್ಲಿ ಮತ್ತೆ JCB ಘರ್ಜನೆ; ಡೆಮಾಲಿಷನ್​ಗೆ ವಿರೋಧ.. BBMP ಮೇಲೆ ರೋಷಾವೇಶ

https://newsfirstlive.com/wp-content/uploads/2023/06/bng-53.jpg

Load More