newsfirstkannada.com

ಪೋಷಕರೇ ಹುಷಾರ್​​.. ನಿಮ್ಮ ಮಕ್ಕಳು ಬೀದಿಯಲ್ಲಿ ಆಟ ಆಡುವಾಗ ಗಮನವಿರಲಿ!

Share :

09-09-2023

    ಎಲ್ಲಾ ಪೋಷಕರು ಓದಲೇಬೇಕಾದ ಸ್ಟೋರಿ ಇದು

    ಯಾವುದೇ ಕಾರಣಕ್ಕೂ ಮಕ್ಕಳ ನಿರ್ಲಕ್ಷ್ಯ ಮಾಡಬೇಡಿ

    ಮಕ್ಕಳು ಬೀದಿಯಲ್ಲಿ ಆಟ ಆಡುವಾಗ ಗಮನ ಹರಿಸಿ..!

ಹೈದರಾಬಾದ್​: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇದರಿಂದ ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳಿಂದ ಹಿಡಿದು ಶಾಲೆಗೆ ಹೋಗುವ ವಿದ್ಯಾರ್ಥಿಗಳವರೆಗೂ ಯಾವ ಸಂದರ್ಭದಲ್ಲೂ ಬೇಕಾದ್ರೂ ನಾಯಿ ಅಟ್ಯಾಕ್​ ಮಾಡಬಹುದು ಎಂದು ಭಯದಲ್ಲೇ ಆಟವಾಡುತ್ತಾರೆ. ಇಂಥದ್ದೊಂದು ಘಟನೆ ಈಗ ನಡೆದಿದೆ.

ಪುಟ್ಟ ಮಗುವೊಂದು ತನ್ನ ಪಾಡಿಗೆ ತಾನು ರೋಡಲ್ಲಿ ಆಟ ಆಡುತ್ತಿತ್ತು. ಈ ವೇಳೆ ಏಕಾಏಕಿ ಬೀದಿ ನಾಯಿ ಒಂದು ಅಟ್ಯಾಕ್​ ಮಾಡಿದೆ. ಈ ಘಟನೆ ನಡೆದಿದ್ದು ಕರ್ನಾಟಕದಲ್ಲಿ ಅಲ್ಲ, ಬದಲಿಗೆ ತೆಲಂಗಾಣದ ಹೈದರಾಬಾದ್ ಅನ್ನೋ ಮಹಾ ನಗರದಲ್ಲಿ!

ಮೂವರು ಮಕ್ಕಳು ತಮ್ಮ ಪಾಡಿಗೆ ತಾವು ಬೀದಿಯಲ್ಲೇ ಆಟ ಆಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಬೀದಿ ನಾಯಿ ಒಂದು ಮಗುವಿನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಕೂಡಲೇ ಎಚ್ಚೆತ್ತ ಮಹಿಳೆ ಒಬ್ಬರು ನಾಯಿಯಿಂದ ಮಗುವನ್ನು ಬಿಡಿಸಲು ಯತ್ನಿಸಿದ್ದಾರೆ.

ಎಷ್ಟೇ ಪ್ರಯತ್ನಿಸಿದ್ರೂ ಬಿಡದ ನಾಯಿ ಮಹಿಳೆ ಮೇಲೂ ಅಟ್ಯಾಕ್​ ಮಾಡಿದೆ. ಕೊನೆಗೂ ಹೇಗೋ ಕಷ್ಟಪಟ್ಟು ನಾಯಿಯಿಂದ ಮಹಿಳೆ ಮಗುವನ್ನು ಕಾಪಾಡಿದ್ದಾಳೆ. ಸದ್ಯ ಮಗು ಮತ್ತು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು, ಈ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಪೋಷಕರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ಮಕ್ಕಳು ಏನು ಮಾಡುತ್ತಿದ್ದಾರೆ? ಎಲ್ಲಿ ಆಟ ಆಡುತ್ತಿದ್ದಾರೆ? ಅನ್ನೋ ಜವಾಬ್ದಾರಿ ಪೋಷಕರಿಗೆ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್​​.. ನಿಮ್ಮ ಮಕ್ಕಳು ಬೀದಿಯಲ್ಲಿ ಆಟ ಆಡುವಾಗ ಗಮನವಿರಲಿ!

https://newsfirstlive.com/wp-content/uploads/2023/07/China-Childrens.jpg

Load More