newsfirstkannada.com

Video: ರೇಬಿಸ್​ ಕಾಯಿಲೆಗೆ ತುತ್ತಾದ 14 ವರ್ಷದ ಬಾಲಕ.. ತಂದೆ ತೊಡೆಯ ಮೇಲೆ ನರಳಿ ಪ್ರಾಣ ಬಿಟ್ಟ

Share :

06-09-2023

    ರೇಬಿಸ್​​ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ 14ರ ಬಾಲಕ

    ನೆರೆಮನೆಯ ನಾಯಿ ಕಚ್ಚಿರೋದನ್ನು ಹೇಳದೆ ಮುಚ್ಚಿಟ್ಟಿದ್ದ ಬಾಲಕ

    ನರಳುತ್ತಾ, ಕೂಗುತ್ತಾ ತಂದೆಯ ತೊಡೆಯ ಮೇಲೆಯೇ ಮಗನ ಸಾವು

ಉತ್ತರಪ್ರದೇಶ: ಇಲ್ಲಿನ ಗಾಜಿಯಾಬಾದ್​​ನಲ್ಲಿ ರೇಬಿಸ್​ ಖಾಯಿಲೆಗೆ 14 ವರ್ಷದ ಬಾಲಕ ಶಹವೇಜ್ ಬಲಿಯಾಗಿದ್ದಾನೆ. ಕಳೆದ 45 ದಿನಗಳ ಹಿಂದೆ ನೆರೆಮನೆಯ ನಾಯಿಯೊಂದು ಈ ಬಾಲಕನಿಗೆ ಕಚ್ಚಿತ್ತು. ಆದ್ರೆ ಬಾಲಕ ಭಯದಿಂದ ಈ ಬಗ್ಗೆ ಪೋಷಕರಿಗೆ ತಿಳಿಸದೆ ಮುಚ್ಚಿಟ್ಟಿದ್ದ. ಆದರೆ ದಿನ ಕಳೆದಂತೆ ಬಾಲಕನ ವಿಚಿತ್ರ ವರ್ತನೆ ಹಾಗೂ ನಾಯಿಯಂತೆ ಬೊಗಳುವುದನ್ನ ಕಂಡ ಪೋಷಕರು ಭಯಪಟ್ಟು ವೈದ್ಯರನ್ನ ಸಂಪರ್ಕಿಸಿದ್ದಾರೆ.

ದೆಹಲಿಯ ಏಮ್ಸ್ ಸೇರಿದಂತೆ ಎಲ್ಲಾ ಪ್ರಸಿದ್ದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ವೈದ್ಯರು ಬಾಲಕನಿಗೆ ರೇಬಿಸ್​ ತಗುಲಿರೋದು ಪತ್ತೆ ಹಚ್ಚಿದ್ದಾರೆ. ಆದರೆ ಸಮಯ ಮೀರಿದ್ದರಿಂದ ವೈದ್ಯರಿಗೆ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇನ್ನು ಬಾಲಕ ಶಹವೇಜ್ ಅಂಬ್ಯುಲೆನ್ಸ್ ನಲ್ಲಿ ತಂದೆ ಯಾಕೂಬ್ ತೊಡೆಯ ಮೇಲೆ ಪ್ರಾಣ ಬಿಟ್ಟಿದ್ದಾನೆ. ಉತ್ತರ ಪ್ರದೇಶದ ಬುಲಂದ್ ಶಹರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಅಳುತ್ತಾ, ನರಳುತ್ತಾ ಶಹವೇಜ್ ಕೊನೆಯುಸಿರೆಳೆದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರೇಬಿಸ್​ ಕಾಯಿಲೆಗೆ ತುತ್ತಾದ 14 ವರ್ಷದ ಬಾಲಕ.. ತಂದೆ ತೊಡೆಯ ಮೇಲೆ ನರಳಿ ಪ್ರಾಣ ಬಿಟ್ಟ

https://newsfirstlive.com/wp-content/uploads/2023/09/Dog-bite.jpg

Load More