ಸೋಷಿಯಲ್ ಮೀಡಿಯಾದಲ್ಲಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದ
ಆ ಕಾಮೆಂಟ್ ಇವತ್ತು ಬನ್ನಿ ಎನ್ನುವ ನಾಯಿಯ ಬದುಕೇ ಬದಲಿಸಿದೆ
ಬನ್ನಿ ಈಗ ಮರ್ಸಿಡಿಸ್ ಬೆಂಜ್ನಲ್ಲಿ ಸಖತ್ ಆಗಿ ರೌಂಡ್ ಹಾಕುತ್ತಿದ್ದಾನೆ
ಸೋಷಿಯಲ್ ಮೀಡಿಯಾ ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಕೇವಲ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವುದಲ್ಲದೇ ಕೆಲವು ಸಖತ್ ಆಗಿರುವ ಐಡಿಯಾಗಳು ಕೆಲವೊಮ್ಮೆ ವೈರಲ್ ಆಗುತ್ತವೆ. ಇಂತಹದ್ದನ್ನೇ ಬಳಸಿಕೊಂಡ ಪ್ರಾಣಿ ರಕ್ಷಣಾ ಟೀಮ್, ಮರ್ಸಿಡಿಸ್ ಬೆಂಜ್ ಕಂಪನಿಯ ಸಂಪರ್ಕ ಮಾಡಿದೆ. ಇಷ್ಟೆ ಅಲ್ಲದೇ, ಬೆಂಜ್ ಕಂಪನಿಯು ಬೀದಿ ನಾಯಿಗೆ ಮತ್ತೊಂದು ಬದುಕು ಕಲ್ಪಿಸಿಕೊಟ್ಟಿದೆ.
ಏನೆಂದು ಕಾಮೆಂಟ್ ಮಾಡಿದ್ದನು..?
ದೀ ಅನಿಮಲ್ ಪ್ಯಾಡ್ ಎನ್ನುವ ನಾಯಿ ರಕ್ಷಣಾ ಟೀಮ್ ಬೀದಿ ನಾಯಿವೊಂದನ್ನು ರಕ್ಷಣೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಿದ್ದಲ್ಲದೇ ಅದಕ್ಕೆ ಬನ್ನಿ ಎಂದು ನಾಮಕರಣ ಮಾಡಿದೆ. ಆದ್ರೆ ಅವರಿಗೆ ಬನ್ನಿಯ ಹಿಂದಿನ 2 ಕಾಲುಗಳು ಇಲ್ಲದ್ದಕ್ಕೆ ಏನು ಮಾಡಬೇಕು ಅನ್ನೋದು ಸವಾಲಾಗಿದೆ. ಹೀಗಾಗಿ ಆ ನಾಯಿಯ ವಿಡಿಯೋ ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋಗೆ ವ್ಯಕ್ತಿಯೊಬ್ಬರು This dog deserves the mercedes Benz of wheelchairs! ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದರು.
ಬನ್ನಿ ಬೆಂಜ್ನಲ್ಲಿ ಸುತ್ತಾಟ..ಫುಲ್ ಖುಷ್..!
ಈ ಕಾಮೆಂಟ್ ಅನ್ನು ಸಿರೀಯಸ್ ಆಗಿ ತೆಗೆದುಕೊಂಡ ನಾಯಿ ರಕ್ಷಣಾ ಟೀಮ್ ಕಾರಿನಲ್ಲಿ ಬನ್ನಿ ಜತೆಗೆ ಬೆಂಜ್ ಕಂಪನಿಗೆ ಹೋಗಿ ಸಿಬ್ಬಂದಿಯನ್ನ ಸಂಪರ್ಕ ಮಾಡಿ ಬನ್ನಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡ ಬೆಂಜ್ ಕಂಪನಿಯು ಆರಾಧ್ಯ ಪೂಚ್ ಬ್ರ್ಯಾಂಡ್‌ನಿಂದ ವಿಶೇಷ ಗಾಲಿ ಕುರ್ಚಿಯನ್ನು ಪಡೆದುಕೊಂಡಿದೆ. ಸಖತ್ ಆಗಿರುವ ವ್ಹೀಲ್ಚೇರ್ ಖರೀದಿಸಿ ಬನ್ನಿಗೆ ಗಿಫ್ಟ್ ಮಾಡಿದ್ದಾರೆ. ಈ ವ್ಹೀಲ್ಚೇರ್ಗೆ ಬನ್ನಿ ಬೆಂಜ್ ಎಂದು ಹೆಸರಿಡಲಾಗಿದೆ.
ಸದ್ಯ ಮರ್ಸಿಡಿಸ್ ಬೆಂಜ್ ಕಂಪನಿಯಿಂದ ಹೊಸ ವ್ಹೀಲ್ ಚೇರ್ ಅನ್ನು ಪಡೆದಿರುವ ಬನ್ನಿ ಫುಲ್ ಖುಷಿ, ಖುಷಿಯಾಗಿ ಅದರಲ್ಲೇ ರೋಡ್, ರೋಡ್ ಅಲ್ಲಿ ಸುತ್ತಾಡುತ್ತಿದ್ದಾನೆ. ಎರಡು ಕಾಲು ಇಲ್ಲ ಎನ್ನುವ ಆಲೋಚನೆಯೇ ಇಲ್ಲದಂತಹ ಸಂತಸದಲ್ಲಿ ತೇಲುತ್ತಿದ್ದಾನೆ. ನೋಡಿ ತಮಾಷೆಯಾಗಿ ವಿಡಿಯೋಗೆ ಮಾಡಿರೋ ಒಂದು ಕಾಮೆಂಟ್ ಒಂದು ಜೀವದ ಬದುಕೇ ಬದಲಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
View this post on Instagram