newsfirstkannada.com

×

ಹೇರ್ ಟ್ರಿಮ್​ ಮಾಡಿಸಿಕೊಳ್ಳಲು ಹೋದಾಗ ನಾಯಿ ಮರಿ ನಾಲಿಗೆಯೇ ಕಟ್‌; ಅಸಲಿಗೆ ಆಗಿದ್ದೇನು?

Share :

Published September 27, 2024 at 11:26pm

    ಶ್ವಾನ ಪ್ರಿಯರಿಗೆ ಇಲ್ಲಿದೆ ದೊಡ್ಡ ಶಾಕಿಂಗ್ ನ್ಯೂಸ್.. ನೀವೂ ಎಚ್ಚರ!

    ಮನೆ ತುಂಬಾ ಮುದ್ದಾಗಿ ಓಡಾಡುತ್ತಿದ್ದ ಶ್ವಾನದ ಸ್ಥಿತಿ ಹೇಳತೀರದು

    ಸಲೂನ್ ಮಹಿಳೆ ಮಾಡಿದ ಮಹಾ ಎಡವಟ್ಟಿಗೆ ಸಿಡ್ಜ್ ಶ್ವಾನ ವಿಲವಿಲ!

ಇವತ್ತಿನ ಕಾಲದಲ್ಲಿ ಕಪಲ್‌ ಮೈಂಡ್‌ಸೆಟ್‌ ಬದಲಾಗಿ ಬಿಟ್ಟಿದೆ. ಅವರಿಗೆ ಮಗು ಬೇಡವೇ ಬೇಡ. ಆದ್ರೆ, ಒಂದು ಪೆಟ್‌ ಬೇಕೇ ಬೇಕು. ಅವರ ಪ್ರೀತಿ ಎಲ್ಲವೂ ಆ ಸಾಕು ಪ್ರಾಣಿಯ ಮೇಲೆ ಇರುತ್ತೆ. ಅಗಾಧವಾದಂತಹ ಪ್ರೀತಿಯನ್ನ ಸಾಕು ಪ್ರಾಣಿಗಳಿಗೆ ತೋರಿಸೋ ಸಂದರ್ಭ ಇವತ್ತಿಗೆ ಸೃಷ್ಟಿಯಾಗಿದೆ. ಆ ಮನೆಯಲ್ಲಿ ಮಕ್ಕಳು ಇದ್ದಾರೆ, ಒಂದು ಶ್ವಾನವೂ ಇತ್ತು. ಆದ್ರೀಗ ಆ ಶ್ವಾನವನ್ನು ನೋಡಿ ಇಡೀ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಅಪಾರ್ಟ್ಮೆಂಟ್​​ನಲ್ಲಿ ನಾಯಿ ಸಾಕಲು ಹೊಸ ರೂಲ್ಸ್​ ಜಾರಿ

ಸಾಂದರ್ಭಿಕ ಚಿತ್ರ

ನಾಯಿ ಎಂದರz ಯಾರಿಗೆ ಇಷ್ಟ ಇಲ್ಲ ಹೇಳಿ. ಈಗಂತೂ ದಂಪತಿ ಮಕ್ಕಳು ಮಾಡಿಕೊಳ್ಳುವ ಬದಲು ನಾಯಿ ಮರಿಯನ್ನೇ ಮಗು ಅಂತ ಸಾಕುತ್ತಾರೆ. ನೂರಕ್ಕೆ 90ರಷ್ಟು ಜನರು ತಮ್ಮ ತಮ್ಮ ಮನೆಯಲ್ಲಿ ಶ್ವಾನವನ್ನು ಸಾಕುತ್ತಿದ್ದಾರೆ. ಅದರಲ್ಲೂ ಹೈಬ್ರೀಡ್ ನಾಯಿಗಳಿಗೆ ಮನುಷ್ಯರಂತೆ ಆರೈಕೆ ಮಾಡವುದು ಹೆಚ್ಚಾಗಿ ಬಿಟ್ಟಿದೆ. ಆದರೆ ಇಲ್ಲಿ ಶ್ವಾನ ಪ್ರಿಯರು ಗಮನಿಸಲೇಬೇಕಾದ ಸ್ಟೋರಿಯಾಗಿದೆ.

ಹೌದು, ಮಹಿಳೆಯೊಬ್ಬಳು ತನ್ನ ಮುದ್ದಾದ ಶ್ವಾನವನ್ನು ಸೆಲೂನ್​ಗೆ ಹೇರ್ ಕಟ್ ಮಾಡಲು ಕರೆದುಕೊಂಡು ಹೋಗಿದ್ದಾಳೆ. ಆದರೆ ಇಲ್ಲೇ ನೋಡಿ ಆಗಿದ್ದು ಎಡವಟ್ಟು. ಹೀಗೆ ಸೆಲೂನ್ ಮಹಿಳೆ ಮಾಡಿದ ಎಡವಟ್ಟಿಗೆ​ ಶ್ವಾನ ಮಾಲೀಕನಿಗೆ ಆಘಾತವಾಗಿದೆ. ಏಕೆಂದರೆ ಸ್ಪಾದಲ್ಲಿ ಮಹಿಳೆ ಶ್ವಾನದ ಕೂದಲಿನ ಜೊತೆಗೆ ನಾಯಿಯ ನಾಲಗೆಯನ್ನು ಕೂಡ ಕತ್ತರಿಸಿ ಬಿಟ್ಟಿದ್ದಾಳೆ. ಈ ಆಘಾತಕಾರಿ ಘಟನೆ ನಡೆದಿದ್ದು ಮಧ್ಯ ಪ್ರದೇಶ ಭೋಪಾಲ್‌ನಲ್ಲಿ.

ಮಾಲೀಕ ತನ್ನ ಶ್ವಾನ ಕೂದಲನ್ನು ಕಟ್​ ಮಾಡಿಸಲೇಂದು ಡಾಗ್ ಸ್ಪಾ​ಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಮಹಿಳೆ ಕಣ್ತಪ್ಪಿನಿಂದ ಶಿಟ್ಜು (Shih Tzu) ತಳಿಯ ಶ್ವಾನದ ಕೂದಲಿನ ಜೊತೆಗೆ ನಾಲಿಗೆಯನ್ನು ಸಹ ಕತ್ತರಿಸಿದ್ದಾಳೆ. ಈ ಘಟನೆಯ ನಂತರ ಮಹಿಳೆ ಪತಿ ಕ್ಷಮೆ ಕೇಳುವ ಬದಲು ಶ್ವಾನದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಲೂನ್ ಮಾಲೀಕರ ವಿರುದ್ಧ ಅಯೋಧ್ಯೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇರ್ ಟ್ರಿಮ್​ ಮಾಡಿಸಿಕೊಳ್ಳಲು ಹೋದಾಗ ನಾಯಿ ಮರಿ ನಾಲಿಗೆಯೇ ಕಟ್‌; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/dog-.jpg

Load More