newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌.. ಆರೋಪಿಗಳ ಜೊತೆ ಡಾಲಿ ಧನಂಜಯ್‌ ವಿಡಿಯೋ ವೈರಲ್‌; ಏನಿದರ ಕಥೆ?

Share :

Published July 3, 2024 at 4:06pm

  ನಟ ಡಾಲಿ ಧನಂಜಯ್ ಜೊತೆ ಆರೋಪಿಗಳಾದ ಜಗ್ಗ, ಅನು

  ಚಿತ್ರದುರ್ಗದಲ್ಲಿ ದರ್ಶನ್ ಗ್ಯಾಂಗ್‌ ಭೇಟಿಯಾಗಿದ್ದ ಡಾಲಿ ಧನಂಜಯ್

  ಕೊಲೆ ಕೇಸ್‌ನಲ್ಲಿ ಭಾಗಿಯಾದ ಆರೋಪಿಗಳ ಜೊತೆ ಸ್ಟಾರ್ ನಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಇಡೀ ಸ್ಯಾಂಡಲ್‌ವುಡ್‌ ಅನ್ನೇ ಶೇಕ್ ಮಾಡಿದೆ. ಆರೋಪಿಗಳಾದ ದರ್ಶನ್ ಗ್ಯಾಂಗ್ ಕಂಬಿ ಹಿಂದೆ ಬಂಧಿಯಾಗಿದ್ದಾರೆ. ಪೊಲೀಸರು ಈ ಪ್ರಕರಣದ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ್ದು, ಚಾರ್ಜ್‌ಶೀಟ್ ಹಾಕಲು ರೆಡಿಯಾಗುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ಸಂಚಲನ ಸೃಷ್ಟಿಸುತ್ತಿರುವಾಗಲೇ ದರ್ಶನ್ ಅಭಿಮಾನಿಗಳ ಮತ್ತಷ್ಟು ವಿಡಿಯೋಗಳು ಬಹಿರಂಗವಾಗಿದೆ. ಇದೀಗ ನಟ ಡಾಲಿ ಧನಂಜಯ್ ಜೊತೆ ಇರುವ ಆರೋಪಿಗಳ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ! 

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅನ್ನು ಕಿಡ್ನಾಪ್ ಮಾಡಿದ್ದ ಆಟೋಗೆ ಡಾಲಿ ಧನಂಜಯ್‌ ಅವರು ದರ್ಶನ್ ಅವರ ಪೋಸ್ಟರ್ ಹಚ್ಚಿದ್ದಾರೆ. ಆರೋಪಿಗಳಾದ ಜಗ್ಗ @ ಜಗದೀಶ್, ಅನು @ ಅನುಕಿರಣ್ ಜೊತೆ ನಟ ಭಯಂಕರ ಡಾಲಿ ಧನಂಜಯ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮಧ್ಯೆದಲ್ಲಿ ಆಟೋ ನಿಲ್ಲಿಸಿಕೊಂಡು ಡೆವಿಲ್‌ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾದ ಆರೋಪಿಗಳು ಇದ್ದಾರೆ.

ಡಾಲಿ ಧನಂಜಯ್‌ ಅವರು ಪೋಸ್ಟರ್‌ ಬಿಡುಗಡೆ ಮಾಡಿದ್ದ ಆಟೋದಲ್ಲೇ ಆರೋಪಿಗಳು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಡಾಲಿ ಪೋಸ್ಟರ್ ಬಿಡುಗಡೆ ಮಾಡಿದ್ದ ಈ ವಿಡಿಯೋ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌.. ಆರೋಪಿಗಳ ಜೊತೆ ಡಾಲಿ ಧನಂಜಯ್‌ ವಿಡಿಯೋ ವೈರಲ್‌; ಏನಿದರ ಕಥೆ?

https://newsfirstlive.com/wp-content/uploads/2024/07/Darshan-Dolly-Danjay.jpg

Load More