newsfirstkannada.com

Breaking News: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅರೆಸ್ಟ್​..!

Share :

25-08-2023

  ಶರಣಾಗಲು ಅವಕಾಶ ಮಾಡಿಕೊಟ್ಟ ಕೋರ್ಟ್​..!

  ಎಷ್ಟು ನಿಮಿಷ ಬಂಧನಕ್ಕೆ ಒಳಗಾಗಿದ್ದರು ಟ್ರಂಪ್​..?

  ಜಾಮೀನು ನೀಡುವಾಗ ಕೋರ್ಟ್ ವಿಧಿಸಿದ ಷರತ್ತು ಏನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ ಆರೋಪದ ಮೇಲೆ ಜಾರ್ಜಿಯಾ ರಾಜ್ಯದ ಫುಲ್ಟನ್ ಕೌಂಟಿಯಲ್ಲಿ ಬಂಧಿಸಲಾಗಿತ್ತು. 20 ನಿಮಿಷಗಳ ಕಾಲ ಬಂಧನಕ್ಕೆ ಒಳಗಾಗಿದ್ದ ಟ್ರಂಪ್ ಮತ್ತೆ ಬಿಡುಗಡೆಗೊಂಡರು.

ಟ್ರಂಪ್​ಗೆ ಶರಣಾಗುವ ಅವಕಾಶವನ್ನು ಕೋರ್ಟ್ ಮಾಡಿಕೊಟ್ಟಿತ್ತು. ಕೋರ್ಟ್​ ಆದೇಶದಂತೆ ಪ್ರಮುಖ ಆರೋಪಿ ಟ್ರಂಪ್ ಸೇರಿದಂತೆ ಒಟ್ಟು 19 ಜನರನ್ನು ನಿನ್ನೆ ಬಂಧಿಸಲಾಗಿದೆ. ಇಲ್ಲಿಯವರೆಗೆ ಟ್ರಂಪ್ ನಾಲ್ಕು ಬಾರಿ ಕೋರ್ಟ್​ಗೆ ಶರಣಾಗಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಶರಣಾಗಿದ್ದರು.

ಟ್ರಂಪ್ ಹೇಳಿದ್ದೇನು..?

ಫುಲ್ಟನ್ ಕೌಂಟಿಯಲ್ಲಿ ಬಂಧನಕ್ಕೆ ಒಳಗಾದ ನಂತರ ನಿಗದಿತ ದಾಖಲೆಗಳನ್ನು ಕೋರ್ಟ್​​ಗೆ ನೀಡಿದರು. ನಂತರ ಕೋರ್ಟ್​ ಟ್ರಂಪ್​​ಗೆ ಜಾಮೀನು ಮಂಜೂರು ಮಾಡಿತು. 20 ನಿಮಿಷಗಳ ಕಾಲ ಜೈಲಿನಲ್ಲಿದ್ದ ಮಾಜಿ ಅಧ್ಯಕ್ಷ ಮತ್ತೆ ಬಿಡುಗಡೆಗೊಂಡು ಹೊರಬಂದರು. ಅಲ್ಲಿಂದ ಅಟ್ಲಾಂಟಾದ ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ರಂಪ್ ಬಂದರು.

ಅಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಂಪ್.. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ಬಂಧನವು ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯ. ಅಮೆರಿಕದ ರಾಜಕೀಯ ಇತಿಹಾಸಕ್ಕೆ ಕರಾಳ ದಿನ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ನಡೆಸದ ಚುನಾವಣೆಯಲ್ಲಿ ಸವಾಲು ಹಾಕುವ ಎಲ್ಲಾ ಹಕ್ಕು ನನಗಿದೆ. ಮುಂದಿನ ವರ್ಷ ಚುನಾವಣೆ ಇರೋದ್ರಿಂದ ನನ್ನನ್ನು ತಡೆಯುವ ಹುನ್ನಾರ ನಡೆಯುತ್ತಿದೆ ಎಂದು ನ್ಯೂಜೆರ್ಜಿಗೆ ಹಾರಿದು.

ಷರತ್ತು ವಿಧಿಸಿ ಟ್ರಂಪ್​ಗೆ ಜಾಮೀನು..?

1.65 ಕೋಟಿ ಮೌಲ್ಯದ ಸ್ಯೂರಿಟಿ ಬಾಂಡ್​ ಸಲ್ಲಿಸಲು ಹೇಳಿದ ಕೋರ್ಟ್, ಹಲವು ಷರತ್ತುಗಳನ್ನು ವಿಧಿಸಿದೆ. ಸಾಕ್ಷಿಗಳನ್ನು ನಾಶ ಮಾಡಬಾರದು, ಯಾರಿಗೂ ಬೆದರಿಕೆ ಹಾಕಬಾರದು. ಪ್ರಕರಣದ ವಿಚಾರದಲ್ಲಿ ನಿಮಗೆ ಸಂಬಂಧ ಇಲ್ಲದರವರನ್ನು ಸಂಪರ್ಕಿಸುವಂತಿಲ್ಲ ಎಂದು ಕೋರ್ಟ್​ ಷರತ್ತುಗಳನ್ನು ವಿಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅರೆಸ್ಟ್​..!

https://newsfirstlive.com/wp-content/uploads/2023/08/Trump.jpg

Load More