ವಿಜಯನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಕತ್ತೆ ಹಾಲು ಮಾರಾಟಕ್ಕೆ ಬಿತ್ತು ಬ್ರೇಕ್
ನ್ಯೂಸ್ ಫಸ್ಟ್ ವರದಿಯಿಂದ ಎಚ್ಚೆತ್ತ ವಿಜಯನಗರ ಜಿಲ್ಲಾಡಳಿತದಿಂದ ಕ್ರಮ
ಕತ್ತೆ ಹಾಲು ಮಾರಾಟ ಮಾಡುವ ಕಚೇರಿಗೆ ಬೀಗ ಹಾಕಿದ್ದು ಯಾಕೆ?
ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಹಾಲು ಮಾರಾಟ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಯಾವ ಮಟ್ಟಿಗಿನ ಜನಪ್ರಿಯತೆ ಅಂದ್ರೆ ಜಿಲ್ಲೆಯ ಯುವಕರು ಬೇರೆ ಕೆಲಸಗಳನ್ನು ಬಿಟ್ಟು ಕತ್ತೆ ಕಾಯುವುದನ್ನೇ ಕಾಯಕ ಮಾಡಿಕೊಂಡಿದ್ದರು. ಈ ಕತ್ತೆ ಹಾಲು ಹಾಗೂ ಜೆನ್ನಿ ಕಂಪನಿ ಹೇಗೆ ಜನರಿಗೆ ಮೋಸ ಮಾಡುತ್ತಿದೆ ಎನ್ನುವುದರ ಬಗ್ಗೆ ನ್ಯೂಸ್ ಫಸ್ಟ್ ಚಾನೆಲ್ ಸಂಪೂರ್ಣವಾಗಿ ವರದಿ ಮಾಡಿತ್ತು. ಅದರ ಫಲಶ್ರುತಿಯಾಗಿ ಈಗ ವಿಜಯನಗರ ಜಿಲ್ಲಾಡಳಿತ ಜೆನ್ನಿ ಮಿಲ್ಕ್ ಕಂಪನಿಯ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಕ್ಲೋಸ್ ಮಾಡಿಸಿದೆ.
ಇದನ್ನೂ ಓದಿ: ಕತ್ತೆಯೇ ಅದೃಷ್ಟ.. ಸಂಬಳ ಬರೋ ಕೆಲಸ ಬಿಟ್ಟು ಕತ್ತೆ ಕಾಯ್ತಿದ್ದಾರೆ ಜನ; ಇವ್ರ ಸಂಪಾದನೆ ಎಷ್ಟು ಗೊತ್ತಾ?
ಜೆನ್ನಿ ಮಿಲ್ಕ್ ಕಂಪನಿಯ ಹೆಡ್ ಆಫೀಸ್ಗೆ ದಾಳಿಯಿಟ್ಟ ಅಧಿಕಾರಿಗಳು ಸತತ ಒಂದು ಗಂಟೆ ಕಾಲ ತಪಾಸಣೆ ನಡೆಸಿದ್ದಾರೆ. ಟ್ರೇಡಿಂಗ್ ಕಂಪನಿ ಲೈಸೆನ್ಸ್ ಪಡೆಯದಿರುವುದು ಕಂಡು ಬಂದಿದ್ದರಿಂದ ಕಚೇರಿಗೆ ಬಂದ್ ಮಾಡಿ ಸೀಲ್ ಹಾಕಿಸಿದ್ದಾರೆ ಅಧಿಕಾರಿಗಳು. ನಗರಾಭಿವೃದ್ಧಿ ಕೋಶಾಧಿಕಾರಿ ಮನೋಹರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ನೇತೃತ್ವದಲ್ಲಿ ಜೆನ್ನಿ ಕಂಪನಿಗೆ ಬಂದ ಅಧಿಕಾರಿಗಳು ಹೆಡ್ ಆಫೀಸ್ನ್ನು ಕ್ಲೋಸ್ ಮಾಡಿಸಿದ್ದಾರೆ.
ಇದನ್ನೂ ಓದಿ: ನ್ಯಾಕ್ ಸಂಸ್ಥೆಗೆ 30ನೇ ವರ್ಷದ ಸಂಭ್ರಮ.. ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಗುಣಗಾನ
ರೈತರಿಂದ 3 ಲಕ್ಷ ರೂಪಾಯಿ ಹಣ ಪಡೆದು ಕತ್ತೆ ನೀಡಿ, ಕತ್ತೆ ಹಾಲು ಖರೀದಿಸುತ್ತಿತ್ತು ಜೆನ್ನಿ ಮಿಲ್ಕ್ ಕಂಪನಿ. 1 ಲೀಟರ್ ಹಾಲಿಗೆ ಬರೋಬ್ಬರಿ 2300 ರೂಪಾಯಿ ನೀಡಿ ಹಾಲು ಖರೀದಿ ಮಾಡುತ್ತಿತ್ತು. ಜೆನ್ನಿ ಮಿಲ್ಕ್ ಕಂಪನಿ ಮೂಲತಃ ಆಂಧ್ರದ ಅನಂತಪುರದ ಕಂಪನಿ, ಕಳೆದ ಮೂರು ತಿಂಗಳಿನಿಂದ ಕರ್ನಾಟಕದ ನಾನಾ ಭಾಗಗಳಲ್ಲಿ ಕಾರ್ಯನಿರ್ವಹಿಸುವಂತೆಯೇ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿಯೂ ಕಾರ್ಯನಿರ್ವಹಿಸುತ್ತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ