newsfirstkannada.com

ಅಮೆರಿಕಾಗೆ ಹೋಗಲು ಮಾಸ್ಟರ್​​ ಪ್ಲಾನ್​​.. ದಿಢೀರ್​ ಮುದುಕನಾದ ಯುವಕ; ಏನಿದು ಮ್ಯಾಜಿಕ್​?

Share :

Published July 4, 2024 at 6:23am

  ಸಿಕ್ಕಿಕೊಂಡು ಲಕ್ಷ ಲಕ್ಷ ರೂಪಾಯಿಗಳನ್ನ ಕಳೆದುಕೊಂಡ ದಂಪತಿ

  ಏಜೆಂಟ್​ ಮೂಲಕ ದೇಶ ತೊರೆಯಲು ಮುಂದಾಗಿದ್ದ ಪತಿ, ಪತ್ನಿ

  24 ವರ್ಷಗಳಾದರೂ 67 ವರ್ಷದವರಂತೆ ಇವರು ಕಂಡಿದ್ದು ಹೇಗೆ?

ನವದೆಹಲಿ: ವೃದ್ಧರ ವೇಷ ಧರಿಸಿಕೊಂಡು ಕೆನಾಡಕ್ಕೆ ಪ್ರಯಾಣ ಮಾಡುತ್ತಿದ್ದ ಗಂಡ- ಹೆಂಡತಿಯನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಸಿಐಎಸ್​​ಎಫ್​ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇಬ್ಬರು ಹರೆಯದ ಗಂಡ ಹೆಂಡತಿಯಾಗಿದ್ದು ವೃದ್ಧರಂತೆ ಕಾಣುವ ವೇಷ ಧರಿಸಿಕೊಂಡು ವಿದೇಶಕ್ಕೆ ಪ್ರಯಾಣಿಸಲು ಮುಂದಾಗಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

ಗುರುಸೇವಕ್ ಸಿಂಗ್ (24) ಹಾಗೂ ಪತ್ನಿ ಅರ್ಚನಾ ಕೌರ್​ಳನ್ನ ಸಿಬ್ಬಂದಿ ಬಂಧಿಸಿದ್ದಾರೆ. ಇವರು ಇನ್ನೂ ಚಿಕ್ಕ ವಯಸ್ಸಿನಲ್ಲಿದ್ದು 67 ವರ್ಷದವರಂತೆ ಕಾಣುವ ಹಾಗೆ ತಮ್ಮ ಮುಖವನ್ನು ಸಲೂನ್​​ನಲ್ಲಿ ಮೇಕಪ್ ಮಾಡಿಸಿಕೊಂಡಿದ್ದರು. ಇನ್ನೊಬ್ಬರ ಹೆಸರಿನಲ್ಲಿ ಕೆನಾಡಕ್ಕೆ ತೆರಳಲೆಂದು ದೆಹಲಿಯ ಇಂದಿರಾಗಾಂಧಿ ಏರ್​​​ಪೋರ್ಟ್​​ಗೆ ಆಗಮಿಸಿದ್ದಾರೆ. ಪಾಸ್​ಪೋರ್ಟ್​ ಸೇರಿ ಇತರೆ ದಾಖಲೆ ತೋರಿಸಲು ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ದಾಖಲೆ ಪರಿಶಿಲಿಸುತ್ತಿದ್ದ ಅಧಿಕಾರಿಗಳು ಇವರನ್ನು ಸರಿಯಾಗಿ ಗಮನಿಸಿದ್ದಾರೆ. ಈ ವೇಳೆ ಇವರ ಮಾತಿನ ಧ್ವನಿ ಹಾಗೂ ದೇಹದ ವಯಸ್ಸಿಗೂ ಮ್ಯಾಚ್ ಆಗಿಲ್ಲ. ಇವರ ಮೈ ಚರ್ಮ ಸುಕ್ಕುಗಟ್ಟದೇ ಚೆನ್ನಾಗಿ ಇತ್ತು. ಹೀಗಾಗಿ ಇಬ್ಬರನ್ನ ಪ್ರತ್ಯೇಕ ಕೊಠಡಿ ಒಳಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿದಾಗ ಸತ್ಯ ಹೊರ ಬಂದಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್? 

ಇಬ್ಬರು ಆರೋಪಿಗಳು ಲಕ್ನೋದ ನಿವಾಸಿಗಳಾಗಿದ್ದು ದೆಹಲಿಯ ಮಹಿಪಾಲ್ಪುರದ ಹೋಟೆಲ್​ನಲ್ಲಿ ಒಂದು ವಾರ ಕಳೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಆರೋಪಿ ಗುರುಸೇವಕ್ ಸಿಂಗ್​ನನ್ನ ವಿಚಾರಣೆ ಮಾಡಲಾಗಿದ್ದು, ನಾನು ನನ್ನ ಪತ್ನಿ ಅಮೆರಿಕಕ್ಕೆ ಹೋಗಿ ಒಳ್ಳೆಯ ಜೀವನ ಮಾಡಬೇಕು ಎಂದುಕೊಂಡಿದ್ದೇವು. ಇದಕ್ಕಾಗಿ ಸ್ನೇಹಿತ ಪರಿಚಯಿಸಿದ್ದ ಜಗ್ಗಿ ಎನ್ನುವ ಏಜೆಂಟ್​ ಜೊತೆ ಟಚ್​​ನಲ್ಲಿದ್ದೇವೆ. 60 ಲಕ್ಷ ರೂಪಾಯಿ ಖರ್ಚಿನಲ್ಲಿ ಇನ್ನೊಬ್ಬರ ಹೆಸರಿನಲ್ಲಿ ಇವರನ್ನ ಕೆನಾಡಕ್ಕೆ ಕಳುಹಿಸಿ ಬಳಿಕ ಅಲ್ಲಿಂದ ಅಕ್ರಮವಾಗಿ ಅಮೆರಿಕಕ್ಕೆ ಕಳುಹಿಸಲು ಜಗ್ಗಿ ಭರವಸೆ ನೀಡಿದ್ದನು. ಹೀಗಾಗಿ ಗಂಡ, ಹೆಂಡತಿ ಸೇರಿ 30 ಲಕ್ಷ ರೂಪಾಯಿಗಳನ್ನು ಜಗ್ಗಿಗೆ ಕೊಟ್ಟು ಉಳಿದ ಹಣವನ್ನು ಅಮೆರಿಕ ತಲುಪಿದ ನಂತರ ಕೊಡುವುದಾಗಿ ಹೇಳಿದ್ದರು. ಜಗ್ಗಿ ಒಪ್ಪಂದದ ಪ್ರಕಾರ ರಶ್ವಿಂದರ್ ಸಿಂಗ್ ಸಹೋಟಾ ಹೆಸರಲ್ಲಿ ಪಾಸ್‌ಪೋರ್ಟ್ ವ್ಯವಸ್ಥೆ ಮಾಡಿ ವೃದ್ಧನ ಹಾಗೆ ಕಾಣುವಂತೆ ಮಾಡಲು 2 ಸಾವಿರ ರೂಪಾಯಿಗಳನ್ನ ಸಲೂನ್​ ಮಾಲೀಕ ಪಡೆದುಕೊಂಡಿದ್ದನು ಎಂದು ಆರೋಪಿ ಹೇಳಿದ್ದಾನೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

ಸದ್ಯ ಪೊಲೀಸರು ಉತ್ತರಾಖಂಡದ ರುದ್ರಪುರದಲ್ಲಿ ಆರೋಪಿ ಏಜೆಂಟ್ ಜಗ್ಗಿಯನ್ನು ಬಂಧಿಸಿದ್ದಾರೆ. ಜೊತೆಗೆ ಸಲೂನ್ ಮಾಲೀಕನನ್ನ ಅರೆಸ್ಟ್ ಮಾಡಲಾಗಿದೆ. ಜಗ್ಗಿ ಪದವಿ ಓದಿಕೊಂಡಿದ್ದು ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ಟ್ರು ಟಾಲ್ಕ್​​ ಇಮಿಗ್ರೇಶನ್ ಕಂಪನಿ ಸ್ಥಾಪಿಸಿಕೊಂಡಿದ್ದಾನೆ. ಇದರ ಮೂಲಕವೇ ಜನರನ್ನು ವಿದೇಶಕ್ಕೆ ಅಕ್ರಮವಾಗಿ ಕಳುಹಿಸುತ್ತಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾಗೆ ಹೋಗಲು ಮಾಸ್ಟರ್​​ ಪ್ಲಾನ್​​.. ದಿಢೀರ್​ ಮುದುಕನಾದ ಯುವಕ; ಏನಿದು ಮ್ಯಾಜಿಕ್​?

https://newsfirstlive.com/wp-content/uploads/2024/07/FAKE_PASSPORT_1.jpg

Load More