newsfirstkannada.com

ರಾಜ್ಯದ ಅನ್ನದಾತರ ಕೂಗಿಗೆ ಡೋಂಟ್ ಕೇರ್.. ಇವತ್ತೂ ಕೂಡ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ..!

Share :

18-08-2023

    ಇವತ್ತು 13,145 ಕ್ಯೂಸೆಕ್ ನೀರು ಬಿಡುಗಡೆ

    ರೈತರ ಪ್ರತಿಭಟನೆಗೂ ಕ್ಯಾರೇ ಎನ್ನದ ಸರ್ಕಾರ

    KRS ಡ್ಯಾಂನಲ್ಲಿ ಇವತ್ತು ನೀರು ಎಷ್ಟಿದೆ..?

ಮಂಡ್ಯ: ಕೋರ್ಟ್ ಆದೇಶಕ್ಕೂ‌ ಮುನ್ನವೇ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹೋಗುತ್ತಿರುವ ಹೊರ ಹರಿವು ನೀರಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ತಮಿಳುನಾಡಿಗೆ ನೀರಿನ ಪ್ರಮಾಣ ಹೆಚ್ಚಳ ಆಗುತ್ತಿದೆ. ಕಾವೇರಿ ಕೊಳ್ಳದ ಅನ್ನದಾತರು ನೀರು ಬಿಡಬೇಡ ಎಂದು ಕೂಗಿಕೊಳ್ಳುತ್ತಿದ್ದಾರೆ. ಹೀಗಿದ್ದೂ ಕ್ಯಾರೇ ಮಾಡದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸುತ್ತಿದೆ.

ನಿನ್ನೆ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಇಂದು ಡ್ಯಾಂನಿಂದ ತಮಿಳುನಾಡಿಗೆ 13,145 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ನಿನ್ನೆಯಷ್ಟೇ ಕೆಆರ್‌ಎಸ್‌ನಲ್ಲಿ ರೈತ ಸಂಘಟನೆ ಪ್ರತಿಭಟನೆ ನಡೆಸಿತ್ತು. ತಮಿಳುನಾಡಿಗೆ ನೀರು ಬಿಡುತ್ತಿರೋದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದರು. ಕೆಆರ್‌ಎಸ್ ಡ್ಯಾಂನ ಮುಖ್ಯ ದ್ವಾರದ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತರು ಪ್ರತಿಭಟಸಿದ್ದರು.

ಇನ್ನು ತಮಿಳು ನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ನೀರಿನ ಮಟ್ಟ ದಿನೇ ದಿನೆ ಇಳಿಕೆ ಆಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 108.86 ಅಡಿ ನೀರು ಸಂಗ್ರಹ ಆಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 30.590 ಟಿಎಂಸಿ ನೀರು ಇದೆ.

KRS ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿಗಳು
  • ಇಂದಿನ ಮಟ್ಟ: 108.86 ಅಡಿಗಳು
  • ಗರಿಷ್ಠ ಸಾಂದ್ರತೆ: 49.452 ಟಿಎಂಸಿ
  • ಇಂದಿನ ಸಾಂದ್ರತೆ: 30.590 ಟಿಎಂಸಿ
  • ಒಳ ಹರಿವು: 2219 ಕ್ಯೂಸೆಕ್
  • ಹೊರ ಹರಿವು: 15,611 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಅನ್ನದಾತರ ಕೂಗಿಗೆ ಡೋಂಟ್ ಕೇರ್.. ಇವತ್ತೂ ಕೂಡ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ..!

https://newsfirstlive.com/wp-content/uploads/2023/06/KRS-Dam-1.jpg

Load More