/newsfirstlive-kannada/media/post_attachments/wp-content/uploads/2024/07/Kohli-Fire.jpg)
ಕೊಹ್ಲಿ ಛಲದಂಕ ಮಲ್ಲ. ಎದುರಾಳಿಗೆ ನಡುಕ ಹುಟ್ಟಿಸುವ ಆಟಗಾರ. ಎಷ್ಟೋ ಬಾರಿ ತಂಡಕ್ಕೆ ನೆರವಾಗುವ ಮೂಲಕ ಗೆಲುವಿನ ಗೆರೆ ದಾಟಿಸಿದ ಆಟಗಾರ. ಆದರೆ ಈ ಕಿಂಗ್​ ಕೊಹ್ಲಿಯನ್ನ ನನ್ನೊಂದಿಗೆ ಹೋಲಿಸಬೇಡಿ ಎಂದು ಟೀಂ ಇಂಡಿಯಾದ ಮಹಿಳಾ ಆಟಗಾರ್ತಿಯೊಬ್ಬರು ಹೇಳಿದ್ದಾರೆ.
ಕೊಹ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಸಾಧನೆ ಮೆರೆದಿದ್ದಾರೆ. ಇತಿಹಾಸ ಪುಟದಲ್ಲಿ ದಾಖಲಾಗಿದ್ದಾರೆ. ಎಲ್ಲಾ ಸ್ವರೂಪದ ವೇದಿಕೆಯಲ್ಲಿ ತಮ್ಮ ಹೆಸರನ್ನು ಅಚ್ಚಳಿದೆ ಉಳಿಯುವಂತೆ ಮಾಡಿದ್ದಾರೆ. ಆದರೆ ಅವರನ್ನು ನನ್ನೊಂದಿಗೆ ಹೋಲಿಸಬೇಡಿ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/Kohli-Batting.jpg)
ಇದನ್ನೂ ಓದಿ: ಪಾದಯಾತ್ರೆ ಹೊರಟ ಅಮ್ಮ-ಮಗಳಿಗೆ ಟಾಟಾ ಏಸ್​ ಡಿಕ್ಕಿ.. ದೇವರ ಪಾದ ಸೇರಿದ ತಾಯಿ, ಸಾವು ಬದುಕಿನ ಮಧ್ಯೆ ಮಗಳು
ವಿರಾಟ್​​ ಕೊಹ್ಲಿ 18 ನಂಬರ್​ನ ಜೆರ್ಸಿ ಬಳಸುತ್ತಿದ್ದು, ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್​​ ತಂಡದ ಬ್ಯಾಟರ್​​ ಸ್ಮೃತಿ ಮಂದಾನ ಕೂಡ 18 ನಂಬರ್​ನ ಜೆರ್ಸಿಯನ್ನು ಬಳಸುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಫ್ಯಾನ್ಸ್​ ಇಬ್ಬರನ್ನು ಹೋಲಿಕೆ ಮಾಡುತ್ತಿದ್ದಾರೆ. ಅದಕ್ಕೆ ಸ್ಮೃತಿ ಮಂದಾನ ದಯ ಮಾಡಿ ಅವರೊಂದಿಗೆ ಹೋಲಿ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: 81ನೇ ವಯಸ್ಸಿಗೆ ಎರಡನೇ ಮದುವೆಯಾದ ನಿವೃತ್ತ IPS​ ಅಧಿಕಾರಿ.. ಮತ್ತೊಂದು ಮದುವೆಯಾಗಲು ಕಾರಣ?
/newsfirstlive-kannada/media/post_attachments/wp-content/uploads/2024/06/Smriti_Mandhana.jpg)
ಕೊಹ್ಲಿ ಮತ್ತು ಸ್ಮೃತಿ ಮಂದಣ್ಣ ಐಪಿಎಲ್​ನಲ್ಲಿ ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದಾರೆ. ಇಬ್ಬರು ಒಂದೇ ನಂಬರ್​ನ ಜೆರ್ಸಿ ಬಳಸುತ್ತಿದ್ದಾರೆ. ಆದರೆ ಫ್ಯಾನ್ಸ್​ ಇಬ್ಬರ ಜೆರ್ಸಿ ನಂಬರ್​ ಅನ್ನು ಇಟ್ಟುಕೊಂಡು ಹೋಲಿಕೆ ಮಾಡಬೇಡಿ ಎಂದು ಮಹಿಳಾ ಬ್ಯಾಟರ್ ಹೇಳಿದ್ದಾರೆ.
ಇದನ್ನೂ ಓದಿ: ಅಮನ್​​ಗೂ ಕಾಡಿತ್ತು ತೂಕ! 10 ಗಂಟೆಯಲ್ಲಿ 4kg ಕರಗಿಸಿದ ‘ಕಂಚಿನ’ ಕುವರ
ಕೊಹ್ಲಿ ಶ್ರೇಷ್ಠ ಆಟಗಾರ, ಬಲಗೈ ಆಟಗಾರ. ಭಾರತೀಯ ಕ್ರಿಕೆಟ್​ಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಜನರು ಕೊಹ್ಲಿಯ ಜೊತೆಗೆ ಹೋಲಿಸುವುದು ಆಧಾರ ರಹಿತ ಎಂದಿದ್ದಾರೆ. ನನಗೆ ಹೋಲಿಕೆ ಮಾಡುವುದು ಇಷ್ಟವಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us