newsfirstkannada.com

×

ಶಾಲಾ ಮಕ್ಕಳ ಹೆಬ್ಬುಲಿ ಕಟ್ಟಿಂಗ್​ನಿಂದ ಬೇಸತ್ತ ಶಿಕ್ಷಕ! ಪತ್ರ ಬರೆದು ಮನವಿ ಮಾಡಿದ್ದು ಯಾರಿಗೆ ಗೊತ್ತಾ?

Share :

Published September 6, 2023 at 2:18pm

Update September 6, 2023 at 2:30pm

    ಹೆಬ್ಬುಲಿ ಕಟ್ಟಿಂಗ್​ ಮಾಡಿದರೆ ನಮಗೆ ಹಿಂಸೆ ಆಗುತ್ತದೆ

    ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಬರೆದ ಮನವಿ ಪತ್ರ ವೈರಲ್​

    ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಶಿಕ್ಷಕ

ಚಾಮರಾಜನಗರ: ಶಿಕ್ಷಕನೋರ್ವ ಶಾಲಾ ಮಕ್ಕಳಿಗೆ ಹೆಬ್ಬುಲಿ ಕಟ್ಟಿಂಗ್​ ಮಾಡ್ಬೇಡಿ ಎಂದು ಬರೆದು ಪತ್ರವೊಂದು ವೈರಲ್​ ಆಗಿದೆ. ಶಿಕ್ಷಕ ಶಾಂತರಾಜು ಎಂಬವರು ಹೀಗೆಂದು ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಕೊಳ್ಳೇಗಾಲದ ಬಾಪುನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಶಾಂತರಾಜು, ಮಕ್ಕಳು ನಿಮ್ಮಲ್ಲಿಗೆ ಬಂದು ಹೆಬ್ಬುಲಿ ಕಟ್ಟಿಂಗ್ ಮಾಡಿ ಎಂದರೆ ದಯವಿಟ್ಟು ಮಾಡಬೇಡಿ. ಈ ಬಗ್ಗೆ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಹೇಳಿದರೂ ಕೇಳುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂತಹ ಕಟ್ಟಿಂಗ್ ಮಾಡಿಸಿಕೊಂಡು ಬಂದರೆ ನಮಗೆ ಹಿಂಸೆ ಆಗುತ್ತದೆ ಎಂದು ಶಿಕ್ಷಕ ಶಾಂತರಾಜು ಹೇಳಿದ್ದಾರೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಿಚ್ಚನ ಹೆಬ್ಬುಲಿ ಸಿನಿಮಾ

ಹೆಬ್ಬುಲಿ ಬಾದ್​ಷಾ ಕಿಚ್ಚ ನಟನೆಯ ಸಿನಿಮಾ. 2017ರಲ್ಲಿ ತೆರೆಕಂಡ ಸಿನಿಮಾ ಇದಾಗಿದ್ದು, ಸುದೀಪ್​ ಜೊತೆಗೆ ನಾಯಕಿಯಾಗಿ ಅಮಲ ಪೌಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ಕಿಚ್ಚ ಭಿನ್ನವಾಗಿ ಕಾಣಿಸಿಕೊಂಡಿದಲ್ಲದೆ, ಅವರ ಹೇರ್​ ಸ್ಟೈಲ್​ ಕೂಡ ಟ್ರೆಂಡಿಂಗ್​ ಆಗಿತ್ತು. ಅನೇಕ ಫ್ಯಾನ್ಸ್​ ಕಿಚ್ಚನ ಹೆಬ್ಬುಲಿ ಸಿನಿಮಾದ ಕಟ್ಟಿಂಗ್​ ಅನ್ನು ಅನುಸರಿಸಿದ್ದರು. ಈಗಲೂ ಸಹ ಹೆಬ್ಬುಲಿ ಕಟ್ಟಿಂಗ್​ ಟ್ರೆಂಡಿಂಗ್​ನಲ್ಲಿದೆ. ಮಕ್ಕಳು, ಯುವಕರೆನ್ನದೆ ಈ ಸ್ಟೈಲ್​ನಲ್ಲಿ ಹೇರ್​ ಕಟ್ಟಿಂಗ್​ ಮಾಡಿಸಿಕೊಳ್ಲುವವರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ಮಕ್ಕಳ ಹೆಬ್ಬುಲಿ ಕಟ್ಟಿಂಗ್​ನಿಂದ ಬೇಸತ್ತ ಶಿಕ್ಷಕ! ಪತ್ರ ಬರೆದು ಮನವಿ ಮಾಡಿದ್ದು ಯಾರಿಗೆ ಗೊತ್ತಾ?

https://newsfirstlive.com/wp-content/uploads/2023/09/kiccha-Sudeep.jpg

Load More