newsfirstkannada.com

ಇನ್ನೂ ನಿಂತಿಲ್ಲ WTC ಫೈನಲ್ ಸೋಲಿನ ಕಾರಣಗಳ ಹುಡುಕಾಟ: ಕೊಹ್ಲಿ ಮಧ್ಯೆ ತಂದು ‘ಇದೇ ಅಸಲಿ ಕಾರಣ’ ಎಂದ ಮಾಜಿ ಕ್ರಿಕೆಟರ್ಸ್​!

Share :

14-06-2023

    WTC ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು

    ಸೋಲು ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ವಿರುದ್ಧ ಅಸಮಾಧಾನ

    ಟೆಸ್ಟ್​ ಚಾಂಪಿಯನ್​ಶಿಪ್ ಸೋಲಿಗೆ ಕಾರಣರಾದ್ರಾ ಕಿಂಗ್​ ಕೊಹ್ಲಿ?

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಟೀಂ​ ಇಂಡಿಯಾ ಸೋಲದಕ್ಕೆ ಕಾರಣ ಏನು?. ಈ ಪ್ರಶ್ನೆಗೆ ಉತ್ತರದ ಹುಡುಕಾಟ ಜೋರಾಗಿ ನಡೆದಿದೆ. ಏಕ್ಸ್​​ಪರ್ಟ್​​ಗಳು, ಮಾಜಿ ಕ್ರಿಕೆಟರ್ಸ್​​ ಕಾರಣಗಳನ್ನ ಒಂದೊದಾಗಿ ಬಿಚ್ಚಿಡುತ್ತಿದ್ದಾರೆ. ಆದ್ರೆ, ಸೋಲಿನ ಅಸಲಿ ಕಾರಣ ಬೇರೆನೆ ಇದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಈಗ ಮುಗಿದ ಅಧ್ಯಾಯ. ಆಸ್ಟ್ರೇಲಿಯಾ ಚಾಂಪಿಯನ್​ ಆಗಿದ್ದೂ ಆಯಿತು. ಟೀಂ​ ಇಂಡಿಯಾ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದೂ ಆಯಿತು. ಆದರೂ ಸೋಲಿಗೆ ಕಾರಣ ಏನು ಅನ್ನೋದರ ಹುಡುಕಾಟ ಮಾತ್ರ ನಿಂತಿಲ್ಲ.

ತಂಡಕ್ಕೆ ಕಾಡ್ತಿದೆ ‘ಕ್ಯಾಪ್ಟನ್​ ಕೊಹ್ಲಿ’ಯ ಅಲಭ್ಯತೆ.!

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನದಾಟದಿಂದಲೇ ಆಟಗಾರರು ಸೋಲುತ್ತೀವಿ ಎಂದು ಮೆಂಟಲಿ ಫಿಕ್ಸ್​​ ಆದಂತಿತ್ತು. ಆಟಗಾರರಲ್ಲಿ ಅಗ್ರೆಷನ್​ ಅಂಶವೇ ಇರಲಿಲ್ಲ. ಈ ಕಾರಣದಿಂದ ಫೈನಲ್​ ಫೈಟ್​ನಲ್ಲಿ ಟೀಂ​ ಇಂಡಿಯಾ ಸಂಪೂರ್ಣ ಹಿನ್ನಡೆ ಅನುಭವಿಸಿತು. ಹೀಗಾಗಿಯೇ ಎಲ್ರೂ ಹೇಳ್ತಿರೋದು. ಟೀಂ​ ಇಂಡಿಯಾ ಮಾಜಿ ಕ್ಯಾಪ್ಟನ್​ ಕೊಹ್ಲಿಯನ್ನ ಮಿಸ್​ ಮಾಡಿಕೊಳ್ತಿದೆ ಎಂದು.

ಕೊಹ್ಲಿ ಕ್ಯಾಪ್ಟನ್​ ಆಗಿದ್ದಾಗ ತಂಡದ ಖದರ್​ ಬೇರೆ..!

ವಿರಾಟ್​ ಕೊಹ್ಲಿ ನಾಯಕನಾಗಿದ್ದಾಗ ಆನ್​ಫೀಲ್ಡ್​ನಲ್ಲಿ ಟೀಂ​ ಇಂಡಿಯಾ ಎನರ್ಜಿ ನೆಕ್ಟ್ಸ್​ ಲೆವೆಲ್​ನಲ್ಲಿ ಇರುತ್ತಾ ಇತ್ತು. ಯಾವುದೇ ಟೆಸ್ಟ್​ ಇರಲಿ, ಎದುರಾಳಿ ಯಾರೇ ಇರಲಿ, ಮೈದಾನ ಯಾವುದೇ ಇರಲಿ, ಡ್ರಾ ಮಾಡಿಕೊಳ್ಳೋ ಲೆಕ್ಕಾಚಾರ ಇರುತ್ತಾನೇ ಇರಲಿಲ್ಲ. ಗೆಲುವೊಂದೆ ತಂಡದ ಗುರಿಯಾಗಿತ್ತು. ಅಪ್ಪಿ-ತಪ್ಪಿ ಎದುರಾಳಿಗಳು ಕೆಣಕಿದ್ರೆ ಅಲ್ಲೇ ಡ್ರಾ ಅಲ್ಲೆ ಬಹುಮಾನವಂತೂ ಫಿಕ್ಸ್​ ಆಗಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್​​ನಲ್ಲಿ ಗೆದ್ದಿದ್ದೆ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​..!

ಟೀಂ​ ಇಂಡಿಯಾ ನಿರ್ಭಿತವಾಗಿ ಆಡುತ್ತಿತ್ತು

ಕೊಹ್ಲಿ ಉತ್ತಮ ನಾಯಕ. ಕೊಹ್ಲಿ ಮತ್ತು ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಂ​ ಇಂಡಿಯಾ ನಿರ್ಭಿತವಾಗಿ ಆಡುತ್ತಿತ್ತು. ಈ ಮೊದಲು ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾದಲ್ಲೂ ಆಡಿ ತೋರಿಸಿದೆ. ಆ ಸಮಯದಲ್ಲಿ ಮ್ಯಾಂಚೆಸ್ಟರ್​​ನಲ್ಲಿ ಟೆಸ್ಟ್​ ನಡೆದಿದ್ರೆ, ಇಂಗ್ಲೆಂಡ್​ನಲ್ಲೂ ಸರಣಿ ಗೆಲ್ಲುತ್ತಿದ್ದರು.

ಸೌರವ್​ ಗಂಗೂಲಿ, BCCI ಮಾಜಿ ಅಧ್ಯಕ್ಷ

ಕೊಹ್ಲಿ ದಿಢೀರ್​ ನಿವೃತ್ತಿ, ಬಿಸಿಸಿಐ ಕಕ್ಕಾಬಿಕ್ಕಿ..!

ಹೌದು.. ಕಳೆದ ಸೌತ್​ ಆಫ್ರಿಕಾ ಟೂರ್​​ ಬೆನ್ನಲ್ಲೇ ಟೆಸ್ಟ್​ ಕ್ಯಾಪ್ಟನ್ಸಿ ಪಟ್ಟ ತ್ಯಜಿಸಿದ್ರು. ಕೊಹ್ಲಿ ಅಂದು ಪಟ್ಟ ತ್ಯಜಿಸಿದ್ದೇ ಇಂದು ಟೀಂ​ ಇಂಡಿಯಾ ಹಿನ್ನಡೆಗೆ ಕಾರಣವಾಗುತ್ತಿದೆ. ಯಾಕಂದ್ರೆ, ಕೊಹ್ಲಿ ನಿವೃತ್ತಿಗೆ ಬಿಸಿಸಿಐ ಸಿದ್ಧವೇ ಆಗಿರಲಿಲ್ಲವಂತೆ.

ಕೊಹ್ಲಿ ನಿವೃತ್ತಿಗೆ BCCI ಸಿದ್ಧವಾಗಿರಲಿಲ್ಲ

ವಿರಾಟ್​ ಕೊಹ್ಲಿ ನಾಯಕತ್ವ ತ್ಯಜಿಸುತ್ತಾರೆ ಅನ್ನೋದಕ್ಕೆ ನಾವು ಸಿದ್ಧರಾಗಿರಲಿಲ್ಲ. ಸೌತ್​ ಆಫ್ರಿಕಾ ಪ್ರವಾಸ ಮುಗಿದ ಬಳಿಕ ಇದೊಂದು ಅನಿರೀಕ್ಷಿತ ಘಟನೆಯಾಗಿತ್ತು. ಯಾಕೆ ನಾಯಕತ್ವ ಬಿಟ್ಟೆ ಅನ್ನೋದನ್ನ ಕೊಹ್ಲಿ ಮಾತ್ರವೇ ಹೇಳಬೇಕು. ಈಗ ಅದರ ಬಗ್ಗೆ ಮಾತಾಡೋಕೆ ಏನು ಇಲ್ಲ. ಸೆಲೆಕ್ಟರ್ಸ್​ ನೂತನ ನಾಯಕನನ್ನ ಆಯ್ಕೆ ಮಾಡಬೇಕಿತ್ತು. ಇದಕ್ಕೆ ರೋಹಿತ್​ ಶರ್ಮಾ ಆ ಸಮಯದಲ್ಲಿ ಉತ್ತಮ ಆಯ್ಕೆಯಾಗಿದ್ರು.

ಸೌರವ್​ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ

ಕೊಹ್ಲಿಯೇ ಭಾರತದ ಬೆಸ್ಟ್​ ಕ್ಯಾಪ್ಟನ್​..!

ಕೊಹ್ಲಿ ಪಟ್ಟ ತ್ಯಜಿಸಿದ ಬಳಿಕ ಗದ್ದುಗೆಗೇರಿದ ರೋಹಿತ್​ ಶರ್ಮಾ ಸಾಮರ್ಥ್ಯವೇ ಇಲ್ಲ ಅಂತಾ ಹೇಳುತ್ತಿಲ್ಲ. ಆದ್ರೆ, ಕೊಹ್ಲಿಯನ್ನ ಮ್ಯಾಚ್​ ಮಾಡೋಕೆ ಆಗಲ್ಲ. ಈಗಿನ ರೋಹಿತ್​ ಮಾತ್ರವಲ್ಲ. ಈ ಹಿಂದಿನ ಯಾವ ನಾಯಕರಿಂದಲೂ ಇದು ಆಗಿಲ್ಲ.

ಟೀಂ​ ಇಂಡಿಯಾ ಟೆಸ್ಟ್​ ಕ್ಯಾಪ್ಟನ್ಸ್​

ಟೀಂ​ ಇಂಡಿಯಾ ಪರ ಧೋನಿ ಅತಿ ಹೆಚ್ಚು ಟೆಸ್ಟ್​​ನಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. 60 ಟೆಸ್ಟ್​ ಪಂದ್ಯಗಳಲ್ಲಿ ನಾಯಕನಾದ ಧೋನಿ 27ರಲ್ಲಿ ಜಯ ಸಾಧಿಸಿದ್ರೆ, 18 ಪಂದ್ಯಗಳಲ್ಲಿ ಸೋತಿದ್ದು, 15ರಲ್ಲಿ ಡ್ರಾ ಸಾಧಿಸಿದ್ದಾರೆ. ವಿರಾಟ್​ ಕೊಹ್ಲಿ 57 ಪಂದ್ಯಗಳಲ್ಲಿ ತಂಡದ ನಾಯಕನಾಗಿದ್ದು, 33 ಗೆಲುವು ಸಾಧಿಸಿ, 14ರಲ್ಲಿ ಸೋತು, 10 ಪಂದ್ಯ ಡ್ರಾ ಮಾಡಿಕೊಂಡಿದ್ರು. 49 ಪಂದ್ಯಗಳಲ್ಲಿ ನಾಯಕನಾಗಿದ್ದ ಗಂಗೂಲಿ 21 ಪಂದ್ಯ ಗೆದ್ದು 13 ಸೋಲುಂಡು, 15 ಪಂದ್ಯದಲ್ಲಿ ಡ್ರಾ ಸಾಧಿಸಿದ್ರು. ಇನ್ನು, ಮೊಹಮ್ಮದ್​ ಅಜರುದ್ದೀನ್​ 47 ಪಂದ್ಯಗಳಲ್ಲಿ ತಂಡ ಮುನ್ನಡೆಸಿ ತಲಾ 14 ಪಂದ್ಯಗಳಲ್ಲಿ ಸೋಲು-ಗೆಲುವನ್ನ ಕಂಡಿದ್ದು, 19 ಪಂದ್ಯದಲ್ಲಿ ಡ್ರಾ ಸಾಧಿಸಿದ್ದರು.

ಜಗಮೆಚ್ಚಿದ ನಾಯಕ ವಿರಾಟ್​ ಕೊಹ್ಲಿ..!

ನಾಯಕನಾಗಿದ್ದ ಸಂದರ್ಭದಲ್ಲಿ ಕೊಹ್ಲಿಯನ್ನ, ಕೊಹ್ಲಿಯ ವರ್ತನೆಯನ್ನ ಅದೆಷ್ಟೋ ಜನ ಟೀಕಿಸಿದ್ರು. ಆದ್ರೆ, ಈಗ ಎಲ್ರಿಗೂ ವಿರಾಟ್​ ಕೊಹ್ಲಿನೇ ಬೇಕಾಗಿದೆ. ಆಸೀಸ್​ ಮಾಜಿ ಕೋಚ್​ ಜಸ್ಟಿನ್​ ಲ್ಯಾಂಗರ್​​, ಫೈನಲ್​ ಫೈಟ್​ನ ಮೊದಲ ದಿನವೇ ಕೊಹ್ಲಿ ಒಬ್ಬ ಅದ್ಭುತ ನಾಯಕ ಎಂದು ಉದ್ಘಾರ ತೆಗೆದಿದ್ರು. ಇನ್ನು ಇಂಗ್ಲೆಂಡ್​​ ಮಾಜಿ ನಾಯಕ ಇಯಾನ್​ ಮಾರ್ಗನ್​ ಟೆಸ್ಟ್​ ಕ್ರಿಕೆಟ್​​ ಈಗ ವಿರಾಟ್​ ಕೊಹ್ಲಿಯಂತ ನಾಯಕನನ್ನ ಕಳೆದುಕೊಂಡಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಟೀಂ​ ಇಂಡಿಯಾ ಫ್ಯಾನ್ಸ್​​ ಅಂತೂ ಕ್ಯಾಪ್ಟನ್​​ ಕೊಹ್ಲಿ WE MIS YOU ಅಂತಾ ಟ್ರೆಂಡ್​ ಸೃಷ್ಠಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇನ್ನೂ ನಿಂತಿಲ್ಲ WTC ಫೈನಲ್ ಸೋಲಿನ ಕಾರಣಗಳ ಹುಡುಕಾಟ: ಕೊಹ್ಲಿ ಮಧ್ಯೆ ತಂದು ‘ಇದೇ ಅಸಲಿ ಕಾರಣ’ ಎಂದ ಮಾಜಿ ಕ್ರಿಕೆಟರ್ಸ್​!

https://newsfirstlive.com/wp-content/uploads/2023/06/VIRAT_KOHLI-4.jpg

Load More