newsfirstkannada.com

ಬಕ್ರೀದ್‌ಗೆ ಬಲಿಯಾಗ್ತಾನಾ ‘7 ಸ್ಟಾರ್‌ ಸುಲ್ತಾನ್‌’; ಡಾಲಿ ಧನಂಜಯ್​ ಚಿತ್ರದಲ್ಲಿ ನಟಿಸಿದ ಟಗರಿನ ಪರ ಭರ್ಜರಿ ಅಭಿಯಾನ

Share :

25-06-2023

    ಡಾಲಿ ಧನಂಜಯ್ ನಟನೆಯ ಟಗರು ಪಲ್ಯ ಚಿತ್ರದಲ್ಲಿ ಅಭಿನಯಿಸಿದ ಟಗರು

    ಟಗರು ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ವಿರೋಧ!

    ಬಕ್ರೀದ್ ಹಬ್ಬಕ್ಕೆ ಗುರಿಯಾದ 7 ಸ್ಟಾರ್ ಸುಲ್ತಾನ್‌ ಪರ ಭರ್ಜರಿ ಅಭಿಯಾನ

ಬಾಗಲಕೋಟೆ: ಡಾಲಿ ಧನಂಜಯ್ ನಟನೆಯ ‘ಟಗರು ಪಲ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 7 ಸ್ಟಾರ್ ಸುಲ್ತಾನ್​​, ಇದುವರೆಗೂ ಸಾಕಷ್ಟು ಕಾಳಗಳಲ್ಲಿ ಜಯಭೇರಿ ಬಾರಿಸಿ ಲಕ್ಷ, ಲಕ್ಷ ಬಹುಮಾನ, ಬೈಕ್, ಚಿನ್ನ ಸೇರಿದಂತೆ ಹಲವು ಉಡುಗೊರೆ ತನ್ನದಾಗಿಸಿಕೊಂಡಿದೆ. 7 ಸ್ಟಾರ್ ಸುಲ್ತಾನ್​ನನ್ನು ಬಾಗಲಕೋಟೆ ಜಿಲ್ಲೆ ತಾಲೂಕಿನ ಸುತಗುಂಡಾರ ಗ್ರಾಮದ ಯೂನಿಸ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ.

ಇದೀಗ ಈ ಟಗರಿನ ಮಾಲೀಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮೊಹಮ್ಮದ್ ಯುನಿಸ್ ಗಡೇದ್ ಅವರು ಈ ಟಗರನ್ನು ರಾಂಪುರ ಗ್ರಾಮದ ಬಸು ಎಂಬುವರಿಂದ ಖರೀದಿ ಮಾಡಿದ್ದರು. ಈ ಟಗರಿಗೆ ಬರೋಬ್ಬರಿ 1,88,500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಇದೀಗ ಮಾಲೀಕ ಯೂನಿಸ್ ಬಕ್ರೀದ್ ಹಬ್ಬಕ್ಕೆ ಟಗರನ್ನು ಬಲಿ ಕೊಡಲು ಮುಂದಾಗಿದ್ದಾರೆ. ಹೀಗಾಗಿ ಆ ಟಗರಿನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ.

ರಾಜ್ಯಾದ್ಯಂತ 34 ಕಣದಲ್ಲಿ ಭಾಗವಹಿಸಿದ ಟಗರು, ಸತತ 34ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 20 ಲಕ್ಷಕ್ಕೂ ಅಧಿಕ ಹಣ, 1 ಬುಲೆಟ್ ಬೈಕ್, 1 ಎಚ್​​ಎಫ್​​ ಡಿಲಕ್ಸ್, ಎಚ್​​ಎಫ್ ಹಂಡ್ರೆಡ್, ಒಂದೂವರೆ ತೊಲೆ (15 ಗ್ರಾಂ) ಬಂಗಾರ ಗೆದ್ದಿದೆ.

ಸದ್ಯ ಇನ್​​ಸ್ಟಾಗ್ರಾಮ್​​​ ರೀಲ್ಸ್​ ಹಾಗೂ ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟಗರಿನ ಮಾಲೀಕನಿಗೆ ಒತ್ತಾಯ ಮಾಡುತ್ತಿದ್ದಾರೆ. ಹರಕೆ ತೀರಿಸಲೇಬೇಕು ಅಂತಾ ಟಗರು ಮಾಲೀಕ ಹೇಳಿದ್ದಾರೆ.  ಈ ಬಗ್ಗೆ ವಿಡಿಯೋ ಮಾಡಿರುವ ಬಿಎಸ್​ಎಫ್​ ಯೋಧ ಸಂತೋಷ ಬಾವಿಕಟ್ಟಿ ಎಂಬವರು ಸಹ, ಟಗರು ಕುರುಬಾನಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಕ್ರೀದ್‌ಗೆ ಬಲಿಯಾಗ್ತಾನಾ ‘7 ಸ್ಟಾರ್‌ ಸುಲ್ತಾನ್‌’; ಡಾಲಿ ಧನಂಜಯ್​ ಚಿತ್ರದಲ್ಲಿ ನಟಿಸಿದ ಟಗರಿನ ಪರ ಭರ್ಜರಿ ಅಭಿಯಾನ

https://newsfirstlive.com/wp-content/uploads/2023/06/Bagalakote.jpg

Load More