ಶಕ್ತಿ ಯೋಜನೆ ಎಫೆಕ್ಟ್.. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ಹಾವಳಿ
ನಿಲ್ದಾಣದಲ್ಲಿ ನೂಕುನುಗ್ಗಲು.. ಬಸ್ ಬಾಗಿಲನ್ನೇ ಮುರಿದ ನಾರಿ 'ಶಕ್ತಿ'..!
ಕಂಡಕ್ಟರ್ ದಿಕ್ಕು ತೋಚದೆ ಪೆಚ್ಚು ಮೊಖ ಹಾಕಿ ನಿಂತಿದ್ದ ಫೋಟೋ ವೈರಲ್
ಚಾಮರಾಜನಗರ: ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಿಗೆ ತಟ್ಟಿದೆ. ಸರ್ಕಾರಿ ಬಸ್ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಹಿಳೆಯರ ಬಸ್ ಹತ್ತುತ್ತಿದ್ದಾಗ ನೂಕುನುಗ್ಗಲು ಉಂಟಾಗಿ ಬಸ್ ಬಾಗಿಲನ್ನೇ ಮುರಿದಿರೋ ಘಟನೆ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಅಧಿಕ ಪ್ರಯಾಣಿಕರಿಂದ ಕೂಡಿದ್ದರಿಂದ ನಾ ಮುಂದು ತಾ ಮುಂದು ಎಂದು ಮಹಿಳಾ ಮಣಿಗಳು ಬಸ್ ಹತ್ತುತ್ತಿದ್ದರು. ಇದೇ ವೇಳೆ ಬಸ್ನ ಬಾಗಿಲನ್ನೇ ಮುರಿದು ಹಾಕಿದ್ದಾರೆ. ಇದನ್ನು ನೋಡಿದ ಬಸ್ ಕಂಡಕ್ಟರ್ ಸಪ್ಪೆ ಮೊಖ ಹಾಕಿಕೊಂಡು ನಿಂತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಹಿನ್ನೆಲೆ ನೂಕುನುಗ್ಗಲಿನಲ್ಲಿ ಬಸ್ ಡೋರ್ ಮುರಿದು ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲನ್ನೇ ಮುರಿದು ಹಾಕಲಾಗಿದೆ. ಕೊನೆಗೆ ಪಾಪ ಬಸ್ ಕಂಡೆಕ್ಟರ್ ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿ ನಿಂತಿದ್ದಾರೆ.… pic.twitter.com/05bYMryahw
— NewsFirst Kannada (@NewsFirstKan) June 17, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ