newsfirstkannada.com

ಸಿಲಿಕಾನ್ ಸಿಟಿಯವರಿಗೆ ಗುಡ್​ ನ್ಯೂಸ್​; ರಾಜಧಾನಿ ರಸ್ತೆಗಳಲ್ಲಿ ಮತ್ತೆ ಓಡಾಡಲಿವೆ ಡಬಲ್ ಡೆಕ್ಕರ್ ಬಸ್​ಗಳು

Share :

01-09-2023

  ಹೊರ ವರ್ತುಲಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ

  ಡಬಲ್ ಡೆಕ್ಕರ್ ಬಸ್​​‌ಗಳ ಖರೀದಿಗೆ ಹೆಚ್ಚಿನ ಒತ್ತು!

  ಡಬಲ್​ ಡೆಕ್ಕರ್​​​ ಬಸ್​ ವಿಶೇಷತೆಯೇನು ಗೊತ್ತಾ..?

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ 1970 ಮತ್ತು 80ರ ಕಾಲದಲ್ಲಿ ಡಬಲ್​ ಡೆಕ್ಕರ್​ ಬಸ್ ಸೇವೆ ಆರಂಭ ಮಾಡಿತ್ತು. ​​ಶಿವಾಜಿನಗರ, ಗಾಂಧಿ ಬಜಾರ್, ಶ್ರೀನಗರ, ಕೆ.ಆರ್ .ಮಾರ್ಕೆಟ್​​ನಿಂದ ಮೆಜೆಸ್ಟಿಕ್​ಗೆ ಡಬಲ್​ ಡೆಕ್ಕರ್​ ಬಸ್​​ಗಳು ಓಡಾಡುತ್ತಿದ್ದವು. ಆದ್ರೆ ಕಾಲ ಕಳೆದಂತೆ ನಾನಾ‌ಕಾರಣಗಳಿಂದ 1997ರಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ನಗರದಲ್ಲಿ ಡಬಲ್​ ಡೆಕ್ಕರ್​ ಬಸ್​​ ಸಂಚರಿಸ್ತಿರುವಾಗ ರಸ್ತೆಗಳ ವಿಸ್ತೀರ್ಣ ಅಡ್ಡಿಯಾಗಿತ್ತು. ಅಲ್ಲದೆ ರಸ್ತೆಗಳ ಮೇಲ್ಭಾಗದಲ್ಲಿ ತಂತಿಗಳ ಸಂಖ್ಯೆ ಹೆಚ್ಚಾದ್ದರಿಂದ ಬಸ್​ ಓಡಾಟಕ್ಕೆ ತೊಂದರೆಯಾಗಿತ್ತು. ಮತ್ತೊಂದು ಕಡೆ ಡಬಲ್​ ಡೆಕ್ಕರ್​ ಬಸ್​ಗಳ ನಿರ್ವಹಣೆ ಕೊರತೆ, ನಗರೀಕರಣ ಬಸ್​ ಸಂಚಾರಕ್ಕೆ ಅಡ್ಡಿ ಉಂಟಾದ್ದರಿಂದ 1997ರಲ್ಲಿ ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು.

ಆದ್ರೆ ಇದೀಗ ಪ್ರಯಾಣಿಕರ ಬೇಡಿಕೆ ಮೇರೆಗೆ ಮತ್ತೆ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಸಲು ಪ್ಲ್ಯಾನ್ ನಡೆಯುತ್ತಿದೆ. 10 ಬಸ್ ಖರೀದಿಗೆ 15 ದಿನದಲ್ಲಿ ಟೆಂಡರ್ ಕರೆಯಲು ತಯಾರಿ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಬಿಡ್ ಕರೆಯಲು ಬಿಎಂಟಿಸಿ ತಯಾರಿ ನಡೆಸಿದೆ. ಈ ಬಾರಿ ಚಾವಣಿ ಮುಚ್ಚಿರುವ ಡಬಲ್​ ಡೆಕ್ಕರ್​ ಬಸ್​​ಗಳ ಖರೀದಿಗೆ ಬಿಎಂಟಿಸಿ ಪ್ಲ್ಯಾನ್​ ನಡೆಸಿದೆ. ಹೆಚ್ಚಾಗಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್​​‌ಗಳ ಖರೀದಿಗೆ ಒತ್ತು ನೀಡಲಾಗಿದೆ.

ಪ್ರತಿ ಬಸ್​​ಗೆ 2.2 ಕೋಟಿ ವೆಚ್ಚ ತಗಲುವ ಸಾಧ್ಯತೆ ಇದ್ದು, ಪ್ರತಿ ಡಬಲ್ ಡೆಕ್ಕರ್ ಬಸ್​​ಗಳಲ್ಲಿ 90 ಆಸನಗಳ ಸಾಮರ್ಥ್ಯ ಇರಲಿದೆ. ಇನ್ನು ಹೊರ ವರ್ತುಲಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ನಡೆಸಲಿದ್ದು, ಈಗಾಗಲೇ ಡಬಲ್ ಡೆಕ್ಕರ್ ಸಂಚಾರಿಸಬೇಕಾದ ರಸ್ತೆ ಸರ್ವೇಯನ್ನ ಬಿಎಂಟಿಸಿ ನಡೆಸಿದೆ. ದಶಕಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ದಿ ಮೋಸ್ಟ್ ಅಟ್ರ್ಯಾಕ್ಷನ್​ಗೆ ಕಾರಣವಾಗಿದ್ದ ಡಬಲ್ ಡೇಕರ್ ಬಸ್​​ಗಳು ಮತ್ತೆ ರಸ್ತೆಗಿಳಿಯೋದ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿಯವರಿಗೆ ಗುಡ್​ ನ್ಯೂಸ್​; ರಾಜಧಾನಿ ರಸ್ತೆಗಳಲ್ಲಿ ಮತ್ತೆ ಓಡಾಡಲಿವೆ ಡಬಲ್ ಡೆಕ್ಕರ್ ಬಸ್​ಗಳು

https://newsfirstlive.com/wp-content/uploads/2023/08/Double_Decker_Bus.jpg

Load More