newsfirstkannada.com

ಡೆವಿಲ್ ಸಿನಿಮಾ ರಿಲೀಸ್ ಆಗೋದು ಡೌಟಾ? ನಿರ್ಮಾಪಕರಿಗೆ ಢವಢವ; ಫಿಲ್ಮಂ ಚೇಂಬರ್ ಹೇಳಿದ್ದೇನು?

Share :

Published July 6, 2024 at 8:35pm

    2011ರಲ್ಲಿ ಸಾರಥಿ ರಿಲೀಸ್ ಆಗಲು ಸಂಕಷ್ಟ ಎದುರಾಗಿತ್ತು

    ಈಗ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಕಥೆ ಏನು?

    ಸ್ಯಾಂಡಲ್‌ವುಡ್‌ನಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗುತ್ತಾ?

ಡೆವಿಲ್.. ದರ್ಶನ್ ಹೀರೋ ಆಗಿ ನಟಿಸ್ತಿರುವ ಸಿನಿಮಾ. ಮಿಲನಾ ಪ್ರಕಾಶ್ ನಿರ್ದೇಶನ, ಜಯಮ್ಮ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್‌ ಸಿನಿಮಾ. ದರ್ಶನ್ ಅಭಿಮಾನಿಗಳ ಪಾಲಿನ ಬಹು ನಿರೀಕ್ಷಿತ ಚಿತ್ರ. ಎಲ್ಲವೂ ಅಂದುಕೊಂಡಂತೆ ಆಗಿದಿದ್ರೆ ಇವತ್ತು ಡೆವಿಲ್ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಆದ್ರೆ, ನಟ ದರ್ಶನ್ ಇದೀಗ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​ಗೆ ಕೊಟ್ಟ ಹಣದ ರಹಸ್ಯ ಬಯಲು -ಮೋಹನ್​ ರಾಜ್​ ಸ್ಫೋಟಕ ಹೇಳಿಕೆ 

ಈ ಮಧ್ಯೆ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಕಥೆ ಏನು? ಸಿನಿಮಾ ಮೇಲೆ ಕೋಟಿ ಕೋಟಿ ಸುರಿದ ನಿರ್ಮಾಪಕರ ಕತೆ ಏನು? ಡೆವಿಲ್ ಸಿನಿಮಾ ರಿಲೀಸ್ ಆಗುತ್ತಾ? ಅನ್ನೋ ಚರ್ಚೆಗಳು ಶುರುವಾಗಿದೆ.

ಅದು 2011.. ಸೂಪರ್ ಹಿಟ್ ಆಗಿದ್ದ ‘ಸಾರಥಿ’ ಸಿನಿಮಾ!
‘ಸಾರಥಿ’ ತರಹನೇ ಹಿಟ್ ಆಗುತ್ತಾ ‘ಡೆವಿಲ್’ ಸಿನಿಮಾ?
2011ರಲ್ಲಿ ನಟ ದರ್ಶನ್ ಅವರು ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಜೈಲು ಪಾಲಾಗಿದ್ದರು. ತಿಂಗಳುಗಳ ಕಾಲ ಜೈಲೂಟ ತಿಂದು ಆಚೆ ಬಂದಿದ್ದರು. ಬಳಿಕ ರಿಲೀಸ್ ಆದಂತಹ ಸಿನಿಮಾ ಅಂದ್ರೆ ಅದು ಸಾರಥಿ.
ಅಂದು ದರ್ಶನ್ ಜೈಲಿನಿಂದ ಆಚೆ ಬಂದ್ಮೇಲೆ ಪುರ್ನಜನ್ಮ ಕೊಟ್ಟಂತಹ ಸಿನಿಮಾ ಸಾರಥಿ ಅಂದ್ರೆ ತಪ್ಪಲ್ಲ. 2011ರಲ್ಲಿ ಸಾರಥಿ ಸಿನಿಮಾ ಅಷ್ಟು ಸುಲಭವಾಗಿ ರಿಲೀಸ್ ಆಗಿರಲಿಲ್ಲ. ಸಿನಿಮಾ ಬಿಡುಗಡೆಯಾಗೋದೇ ಡೌಟ್ ಅನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಸಿನಿಮಾ ಗೆಲ್ಲುತ್ತೋ? ಇಲ್ಲವೋ? ಅನ್ನೋ ಡೌಟ್ ಶುರುವಾಗಿತ್ತು. ಈ ನಡುವೆನೇ ಸಾರಥಿ ಸಿನಿಮಾ ಬಿಡುಗಡೆಯಾಗಿ ದರ್ಶನ್​ಗೆ ಅಭಿಮಾನಿಗಳು ಹಾರೈಸಿದ್ದರು.

ಇದನ್ನೂ ಓದಿ: ‘ತಿಮ್ಮಿ ಥರಾ ಇದ್ಲು.. ಪವಿತ್ರಾ ಟ್ರ್ಯಾಪ್​ಗೆ ದರ್ಶನ್​ ತಗ್ಲಾಕೊಂಡ್ರು’ ನಿರ್ದೇಶಕಿ ಚಂದ್ರಕಲಾ ಬಿಚ್ಚಿಟ್ರು ಅಚ್ಚರಿಯ ಮಾಹಿತಿ 

ಇದೀಗ ದರ್ಶನ್ ಜೈಲು ಪಾಲಾಗಿರೋದ್ರಿಂದ ಡೆವಿಲ್ ನಿರ್ಮಾಪಕರಿಗೆ ತೊಂದರೆಯಾಗಿದೆ. ನಿರ್ಮಾಪಕರ ಉಳಿವಿಗಾಗಿ ಡೆವಿಲ್ ಸಿನಿಮಾಗೆ ಒಳ್ಳೆಯದು ಆಗ್ಬೇಕು. ಡೆವಿಲ್ ನಿರ್ದೇಶಕ ಮಿಲನಾ ಪ್ರಕಾಶ್​ಗೆ ಎಲ್ಲಾ ತರಹದಲ್ಲೂ ಸಪೋರ್ಟ್ ಮಾಡ್ತೀವಿ ಎಂದು ಫಿಲ್ಮಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ.

ದರ್ಶನ್​ನ ನಂಬಿ ಕೋಟಿ ಕೋಟಿ ಹಣ ಹಾಕಿದ್ದ ನಿರ್ಮಾಪಕರಿಗೆ ಇದೀಗ ದಾರಿ ಕಾಣದಾಗಿದೆ. ಆದಷ್ಟು ಬೇಗ ದರ್ಶನ್ ಕೊಲೆ ಕೇಸ್​ನಿಂದ ಹೊರಗೆ ಬರಲಿ. ಸಿನಿಮಾ ಮುಗಿಸಿಕೊಡಲಿ ಅಂತಾ ​ ಚಿತ್ರತಂಡ ದೇವರಲ್ಲಿ ಬೇಡಿಕೊಳ್ತಿದೆ. ಸಾರಥಿ ರೀತಿನೇ ಡೆವಿಲ್ ಸಿನಿಮಾ ಹಿಟ್ ಆಗುತ್ತಾ? ಜನರು ಮತ್ತೊಮ್ಮೆ ದರ್ಶನ್​ಗೆ ಆಶೀರ್ವಾದ ಮಾಡ್ತಾರಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೆವಿಲ್ ಸಿನಿಮಾ ರಿಲೀಸ್ ಆಗೋದು ಡೌಟಾ? ನಿರ್ಮಾಪಕರಿಗೆ ಢವಢವ; ಫಿಲ್ಮಂ ಚೇಂಬರ್ ಹೇಳಿದ್ದೇನು?

https://newsfirstlive.com/wp-content/uploads/2024/07/Devil-Darshan.jpg

Load More