newsfirstkannada.com

ಆ 3 ಸೆಕ್ಷನ್‌.. 10 ಸಾಕ್ಷಿ? ಬೇಲ್ ಸಿಗೋದು ಡೌಟ್‌? ಡೆಡ್ಲಿ ಮರ್ಡರ್ ಕೇಸ್‌ನಲ್ಲಿ ದರ್ಶನ್​ಗೆ ಜೈಲು ಫಿಕ್ಸಾ?

Share :

Published June 13, 2024 at 9:20pm

  ಹತ್ಯೆ ಜಾಗದಲ್ಲಿ ದರ್ಶನ್ ಇದ್ದರು ಎಂಬುದಕ್ಕೆ ಸಿಕ್ಕಿದೆ ಪ್ರಬಲ ಸಾಕ್ಷಿ?

  ಪೊಲೀಸ್ ತನಿಖಾ ಬತ್ತಳಿಕೆ ಸೇರುತ್ತಿರೋ ಸಾಕ್ಷಿಗಳು ಯಾವುವು?

  ಆ 10 ಪ್ರಬಲ ಸಾಕ್ಷಿಗಳೇ ದರ್ಶನ್‌ಗೆ ಜೈಲಿನ ದಾರಿ ತೋರಿಸುತ್ವಾ?

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಡೆಡ್ಲಿ ಮರ್ಡರ್‌ ಕೇಸ್‌ನಲ್ಲಿ ದರ್ಶನ್​​ಗೆ ಜೈಲೂಟ ಫಿಕ್ಸಾ? ಲಾಕ್ ಆಗಿರೋ ದರ್ಶನ್‌ಗೆ ಜೀವಾವಧಿ ಶಿಕ್ಷೆಯಾಗುತ್ತಾ? ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರೋ ದರ್ಶನ್‌ ಮತ್ತೆ ಆಚೆ ಬರೋದೆ ಡೌಟಾ? ಸ್ಯಾಂಡಲ್‌ವುಡ್ ದಾಸನಿಗೆ ಬೇಲ್ ಕೂಡ ಸಿಗೋದಿಲ್ವಾ? ಎಲ್ಲರನ್ನೂ ಕಾಡುತ್ತಿರೋ ಇದೊಂದು ಪ್ರಶ್ನೆಗೆ ಉತ್ತರ ಹೇಳೋದು ಪೊಲೀಸರ ತನಿಖಾ ವ್ಯೂಹ. ಹಾಗಾದ್ರೆ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧದ ಬರ್ಬರ ಕೊಲೆ ಆರೋಪದ ಕೇಸ್‌ನಲ್ಲಿ ಪ್ರಬಲ ಸಾಕ್ಷಿಗಳು ಸಿಕ್ಕಿವೆಯಾ? ಪೊಲೀಸರ ತನಿಖೆಯಲ್ಲಿ ಸಿಕ್ಕಿರೋ ಆ ಸಾಕ್ಷಿಗಳೇ ದರ್ಶನ್ ಜೈಲು.. ಬೇಲು.. ಖುಲಾಸೆಯ ಭವಿಷ್ಯ ನಿರ್ಧರಿಸಿತ್ವಾ? ಈ ಎಲ್ಲಾ ರೋಚಕ ಪ್ರಶ್ನೆಗಳ ಶಾಕಿಂಗ್ ಉತ್ತರ ಇಲ್ಲಿದೆ ನೋಡಿ.

ಇದನ್ನೂ ಓದಿ: ‘ನನಗೂ ನೋವಾಗುತ್ತೆ’- ಅಪ್ಪನಿಗೆ ಬೈದಿದ್ದಕ್ಕೆ ಆಕ್ರೋಶ ಹೊರಹಾಕಿದ ದರ್ಶನ್‌ ಮಗ ವಿನೀಶ್‌ 

ಮರ್ಡರ್ ಕೇಸ್‌ನಲ್ಲಿ ಲಾಕ್ ಆಗಿರೋ ಸ್ಯಾಂಡಲ್‌ವುಡ್ ದಾಸ, ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ನೀಡುವಂತೆ ಮರಣದಂಡನೆ ವಿಧಿಸುವಂತೆ ಆಕ್ರೋಶದ ಜ್ವಾಲಾಮುಖಿಯೇ ಸ್ಫೋಟಗೊಂಡಿದೆ. ದರ್ಶನ್ ಗ್ಯಾಂಗ್ ಮತ್ತು ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿರೋ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕೋದಕ್ಕೆ ಅಖಾಡಕ್ಕೆ ಧುಮುಕಿದ್ರೆ, ಇತ್ತ ದರ್ಶನ್ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ಚಿತ್ರದುರ್ಗ, ಮಂಡ್ಯ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ವಿವಿಧ ಸಂಘಟನೆಗಳು ದರ್ಶನ್‌ಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ಮರ್ಡರ್ ಕೇಸ್‌ನಲ್ಲಿ ದರ್ಶನ್ ಸಮೇತ 13 ಮಂದಿಯನ್ನು ಅಂದರ್ ಮಾಡಲಾಗಿದೆ. ನ್ಯಾಯಾಲಯ 6 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ. ಈ ಕೇಸ್‌ನಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ರೆ, ದರ್ಶನ್ ಎ2 ಮೇಲ್ನೋಟಕ್ಕೆ ದರ್ಶನ್ ವಿರುದ್ಧದ ಆರೋಪಗಳಿಗೆ ಪ್ರಬಲವಾದ ಸಾಕ್ಷಿಗಳಿವೆ. ದರ್ಶನ್ ಪರ್ಮನೆಂಟಾಗಿ ಜೈಲೂಟ ಮಾಡೋದು ಫಿಕ್ಸ್ ಎಂಬ ಚರ್ಚೆಗಳು ಶುರುವಾಗಿವೆ. ಆದ್ರೆ.. ದರ್ಶನ್‌ಗೆ ಜೈಲಾ? ಖುಲಾಸೆಯಾ? ಎಂಬ ಭವಿಷ್ಯ ಬರೆಯಲಿರೋದು ಕೇಸ್‌ನಲ್ಲಿ ಕಲೆ ಹಾಕಲಾಗ್ತಿರೋ ಸಾಕ್ಷ್ಯಗಳು. ಆ ಸಾಕ್ಷ್ಯಗಳು ಸ್ಟ್ರಾಂಗ್ ಆದ್ರಷ್ಟೇ ದರ್ಶನ್‌ ಕಂಬಿ ಎಣಿಸೋದು ಫಿಕ್ಸ್ ಆಗುತ್ತೆ. ಹಾಗಾದ್ರೆ, ದರ್ಶನ್‌ ಅಂಡ್ ಗ್ಯಾಂಗ್ ವಿರುದ್ಧದ ಕೊಲೆ ಕೇಸ್‌ನಲ್ಲಿ ಸಾಕ್ಷ್ಯಗಳು ಸ್ಟ್ರಾಂಗ್ ಇವೆಯಾ? ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದ್ರೆ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ದಾಖಲಾಗಿರೋ ಸೆಕ್ಷನ್‌ಗಳು ಯಾವುವು ಅನ್ನೋ ವಿವರ ಇಲ್ಲಿದೆ.

ದರ್ಶನ್‌ಗೆ ಜೈಲು ಫಿಕ್ಸಾ?
ಕೊಲೆ ಆರೋಪ – ಐಪಿಸಿ ಸೆಕ್ಷನ್ 302
ಸಾಕ್ಷ್ಯ ನಾಶ ಆರೋಪ – ಐಪಿಸಿ ಸೆಕ್ಷನ್ 201

ದರ್ಶನ್‌ ವಿರುದ್ಧ ಎರಡು ಸ್ಟ್ರಾಂಗ್ ಸೆಕ್ಷನ್‌ಗಳನ್ನು ಹಾಕಲಾಗಿದೆ. ಮೊದಲನೆಯದು ಕೊಲೆ ಆರೋಪದ ಕೇಸ್. ಪಟ್ಟಣಗೆರೆ ಗೋಡೌನ್‌ನಲ್ಲಿ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ಕೂಡಿಟ್ಟು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಂದಿರೋ ಆರೋಪದ ಅಡಿ ಹಾಕಲಾಗಿರೋ ಸೆಕ್ಷನ್ ಇದು.

ಜೊತೆಗೆ, ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ಡೆಡ್‌ಬಾಡಿಯನ್ನು ಎಸೆದು, ಸಹಚರರಿಗೆ ಹಣದ ಆಮಿಷವೊಡ್ಡಿ ಸಾಕ್ಷಿ ನಾಶ ಮಾಡಿದ ಆರೋಪದ ಅಡಿಯಲ್ಲಿ ಸೆಕ್ಷನ್ 201 ಹಾಕಲಾಗಿದೆ. ಈ ಎರಡು ಸೆಕ್ಷನ್‌ಗಳ ಬಳಿಕ ಇನ್ನೂ ಎರಡ್ಮೂರು ಸೆಕ್ಷನ್‌ಗಳ ಕಾನೂನು ಕುಣಿಕೆ ದರ್ಶನ್‌ ಕೊರಳಿಗೆ ಸುತ್ತಿಕೊಳ್ಳುತ್ತೆ ಎನ್ನಲಾಗ್ತಿದೆ. ಅದರಲ್ಲಿ ಪ್ರಮುಖವಾದದ್ದು ಅಂದ್ರೆ.. ಐಪಿಸಿ ಸೆಕ್ಷನ್ 364.

ಇದನ್ನೂ ಓದಿ: VIDEO: ನಟ ದರ್ಶನ್​ ವಿರುದ್ಧದ ವಿಡಿಯೋ ಲೈಕ್​ ಮಾಡಿದ ಧ್ರುವ ಸರ್ಜಾ.. ಅದರಲ್ಲೇನಿತ್ತು? 

ದರ್ಶನ್‌ಗೆ ಜೈಲು ಫಿಕ್ಸಾ?
ಕಿಡ್ನ್ಯಾಪ್ ಆರೋಪ – ಐಪಿಸಿ ಸೆಕ್ಷನ್ 364

ರೇಣುಕಾಸ್ವಾಮಿ ಹತ್ಯೆಗೂ ಮೊದಲು ಚಿತ್ರದುರ್ಗದಿಂದ ಆತನನ್ನು ಕಿಡ್ನಾಪ್ ಮಾಡಿ ಕರೆ ತರಲಾಗಿತ್ತು. ಈ ಆರೋಪದ ಅಡಿಯಲ್ಲಿ ದರ್ಶನ್ ವಿರುದ್ಧ ಐಪಿಸಿ ಸೆಕ್ಷನ್ 364 ಹಾಕಲಾಗುತ್ತೆ ಎಂಬ ಮಾಹಿತಿಗಳಿವೆ. ಈ ಮೂರು ಸೆಕ್ಷನ್‌ಗಳು ದರ್ಶನ್‌ರ ಜೈಲೂಟದ ಭವಿಷ್ಯ ಬರೆಯಲಿವೆ. ಹಾಗಾದ್ರೆ ದರ್ಶನ್‌ ವಿರುದ್ಧದ ಮರ್ಡರ್‌ ಕೇಸ್‌ನಲ್ಲಿ ಹಾಕಲಾಗಿರೋ ಸೆಕ್ಷನ್‌ಗಳಿಗೆ ಸಾಕ್ಷಿಗಳು ಸ್ಟ್ರಾಂಗ್ ಆಗಿವೆಯಾ? ಪೊಲೀಸರ ತನಿಖೆಯಲ್ಲಿ ಪ್ರಬಲವಾದ ಸಾಕ್ಷಿಗಳು ಸಿಕ್ತಿವೆಯಾ? ಪ್ರಾಥಮಿಕ ಹಂತದ ತನಿಖೆಯಲ್ಲಿ ಕಂಡು ಬಂದಿರೋ ಶಾಕಿಂಗ್ ರಹಸ್ಯಗಳು ಇಲ್ಲಿವೆ ಮುಂದೆ ಓದಿ.

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್, ಕೆಟ್ಟ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಈ ಕೊಲೆ ನಡೆಸಲಾಗಿದೆ ಎಂಬ ಆರೋಪವಿದೆ. ತನಗೆ ರೇಣುಕಾಸ್ವಾಮಿ ಕೆಟ್ಟ ಸಂದೇಶ ಕಳುಹಿಸುತ್ತಿದ್ದರ ಬಗ್ಗೆ ಪವಿತ್ರಾ ಗೌಡ ದರ್ಶನ್‌ಗೆ ತಿಳಿಸಿದ್ದರು. ಆ ಬಳಿಕ ಕುಪಿತಗೊಂಡ ದರ್ಶನ್ ರೇಣುಕಾಸ್ವಾಮಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಆತನನ್ನು ಕರೆಸಿಕೊಳ್ಳೋಕೆ ಪ್ಲಾನ್ ಮಾಡಿದ್ರು ಎಂಬ ಆರೋಪವಿದೆ. ರೇಣುಕಾಸ್ವಾಮಿಯನ್ನು ಕರೆಸಿಕೊಳ್ಳೋಕೆ ಕೇಸ್‌ನ ನಾಲ್ಕನೇ ಆರೋಪಿಯಾಗಿರೋ ಚಿತ್ರದುರ್ಗದ ರಾಘವೇಂದ್ರ ಎಂಬಾತನಿಗೆ ಸೂಚನೆ ಕೊಡ್ತಾರಂತೆ. ಹಾಗಾಗಿ, ಕಿಡ್ನಾಪ್ ಆರೋಪದ ಅಡಿಯಲ್ಲಿ ದರ್ಶನ್‌ ವಿರುದ್ಧ ಐಪಿಸಿ ಸೆಕ್ಷನ್ 364 ದಾಖಲಾಗೋ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಕಿಡ್ನಾಪ್ ಆರೋಪಕ್ಕೆ ಸಂಬಂಧಪಟ್ಟಂತೆ ಫೋನ್ ಕಾಲ್ ರೆಕಾರ್ಡ್, ಸಿಡಿಆರ್ ಸಾಕ್ಷಿಗಳು ಪೊಲೀಸರಿಗೆ ಲಭಿಸಿವೆ ಎನ್ನಲಾಗ್ತಿದೆ.

ದರ್ಶನ್ ತನ್ನ ಆಪ್ತ ವಿನಯ್‌ಗೆ ಕರೆ ಮಾಡಿ ಹುಡುಗರನ್ನು ಅರೆಂಜ್ ಮಾಡುವಂತೆ ಹೇಳಿದ್ದ ಆರೋಪವಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಸಿಕ್ಕಿವೆ ಎನ್ನಲಾಗುತ್ತಿದೆ. ಮೊದಲಿಗೆ, ದರ್ಶನ್ ವಿನಯ್‌ಗೆ ಕರೆ ಮಾಡಿರೋ ಬಗ್ಗೆ ಆ ಬಳಿಕ ವಿನಯ್ ತನ್ನ ಸಹಚರರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿರೋ ಬಗ್ಗೆ ಫೋನ್ ಕಾಲ್ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗ್ತಿದೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ಪ್ಲಾನ್ ಪ್ರಕಾರ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ತಂದು ಪಟ್ಟಣಗೆರೆಯ ಆಪ್ತನ ಶೆಡ್‌ನಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪ ದರ್ಶನ್ ಮೇಲಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಬಲ ಸಾಕ್ಷಿ ಕೂಡ ಪೊಲೀಸರಿಗೆ ಲಭಿಸಿವೆ ಎನ್ನಲಾಗುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಅಂದ್ರೆ ಹತ್ಯೆ ನಡೆಸಿದ ಪಟ್ಟಣಗೆರೆ ಶೆಡ್‌ಗೆ ದರ್ಶನ್ ಮೂರು ಬಾರಿ ಭೇಟಿ ನೀಡಿರೋದಕ್ಕೆ ಪುರಾವೆಯಂತಿರೋ ಸಿಸಿಟಿವಿ ಸಾಕ್ಷ್ಯಗಳು. ಶನಿವಾರ ಸಂಜೆ 7.30 ಕ್ಕೆ ರಾತ್ರಿ 10 ಗಂಟೆಗೆ ಮತ್ತು ಮರುದಿನ ಬೆಳಗಿನ ಜಾವ 3.30ಕ್ಕೆ ಮೂರು ಬಾರಿ ದರ್ಶನ್ ಕಾರು ಶೆಡ್‌ಗೆ ಬಂದು ಹೋಗಿರೋದಕ್ಕೆ ಸಿಸಿಟಿವಿ ಸಾಕ್ಷಿಗಳು ಸಿಕ್ಕಿವೆ.

ಬೆಂಗಳೂರಿನ ಪಟ್ಟಣಗೆರೆಯ ಬಳಿಯಲ್ಲಿದ್ದ ಆಪ್ತನೊಬ್ಬನಿಗೆ ಸೇರಿದ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕಟ್ಟಿ ಹಾಕಿ ಅಮಾನುಷವಾಗಿ ಹೊಡೆದು ಕೊಲ್ಲಲಾಗಿದೆ ಎಂಬ ಆರೋಪ ದರ್ಶನ್ ಗ್ಯಾಂಗ್ ಮೇಲಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ದರ್ಶನ್ ವಿರುದ್ಧ ಸಿಕ್ಕಿರೋ ಪ್ರಬಲ ಸಾಕ್ಷಿ ಅಂದ್ರೆ ಮೊಬೈಲ್ ಟವರ್ ಲೊಕೇಷನ್ ಅಂತ ಹೇಳಲಾಗುತ್ತಿದೆ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಇದ್ದರು ಎಂಬುದಕ್ಕೆ ಮೊಬೈಲ್ ಟವರ್ ಲೊಕೇಷನ್ ಸಾಕ್ಷ್ಯ ಸಿಕ್ಕಿದೆಯಂತೆ. ಕೊಲೆ ಕೇಸ್‌ನಲ್ಲಿ ಯಾಱರ ಬಂಧನವಾಗಿದೆಯೋ ಅವರೆಲ್ಲೂ ಒಂದೇ ಜಾಗದಲ್ಲಿ ಇದ್ದರು ಎಂಬುದನ್ನು ಮೊಬೈಲ್ ಟವರ್ ಲೋಕೇಷನ್ ಸ್ಪಷ್ಟೀಕರಿಸುತ್ತಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ರೇಣುಕಾಸ್ವಾಮಿಯನ್ನು ತಾವೇ ಕೊಂದಿದ್ದು ಅಂತ ನಾಲ್ವರು ಆರೋಪಿಗಳು ತಾವೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಸರಂಡರ್ ಆಗಿದ್ರು. ಆ ಆರೋಪಿಗಳ ಮೇಲೆ ಅನುಮಾನ ಬಂದು ಬೆಂಡೆತ್ತಿ ಬಾಯ್ಬಿಡಿಸಿದ ಬಳಿಕ ದರ್ಶನ್ ಹೆಸರು ಹೊರಬಿದ್ದಿತ್ತು. ರೇಣುಕಾಸ್ವಾಮಿಯನ್ನು ತಾವೇ ಕೊಂದಿದ್ದು ಎಂದು ಶರಣಾಗಿದ್ದ ನಾಲ್ವರು ಆರೋಪಿಗಳು ದರ್ಶನ್ ಪಾತ್ರದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ, ಸರೆಂಡರ್ ಆದವರೇ ದರ್ಶನ್ ಹೆಸರು ಬಾಯ್ಬಿಟ್ಟು ಕೊಲೆ ಮಾಡಿದ ಸಂದರ್ಭದಲ್ಲಿ ದರ್ಶನ್ ಕೂಡ ಇದ್ದರು ಎಂದು ತಪ್ಪೊಪ್ಪಿಕೊಂಡಿರೋದು ಪ್ರಮುಖ ಸಾಕ್ಷಿಯಾಗಿ ನಿಲ್ಲಲಿದೆ ಎನ್ನಲಾಗ್ತಿದೆ.

ದರ್ಶನ್ ವಿರುದ್ಧದ ಸಾಕ್ಷಿನಾಶ ಆರೋಪದ ಕೇಸ್ ತಾವು ಮತ್ತು ಗೆಳತಿ ಪವಿತ್ರಾ ಗೌಡರನ್ನು ಕೊಲೆ ಕೇಸ್‌ನಿಂದ ಸೇಫ್ ಮಾಡಿಕೊಳ್ಳೋದಕ್ಕೆ ದರ್ಶನ್ 30 ಲಕ್ಷ ಆಮಿಷವೊಡ್ಡಿದ್ದರು ಎಂಬ ಆರೋಪವಿದೆ. ಸರೆಂಡರ್ ಆಗಿರೋ ನಾಲ್ವರು ಆರೋಪಿಗಳ ಹೇಳಿಕೆ ಬಳಿಕವೇ ದರ್ಶನ್ ಪಾತ್ರದ ಬಗ್ಗೆ ದರ್ಶನ್ ಸಾಕ್ಷಿ ನಾಶಕ್ಕೆ ಪ್ರಯತ್ನ ಪಟ್ಟಿರೋ ಆರೋಪ ಕೇಳಿ ಬಂದಿದೆ. ಶರಣಾಗತಿ ಆಗಿದ್ದ ನಾಲ್ವರು ಆರೋಪಿಗಳು ನೀಡಿದ್ದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳೋದಕ್ಕೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಲ್ಲಾ ಸಾಕ್ಷಿಗಳನ್ನು ಕಲೆಹಾಕಿ ಕೇಸ್‌ನ ಜಾಡು ಭೇದಿಸಲು ಮುಂದಾಗಿದ್ದಾರೆ.

ಸ್ಥಳ ಮಹಜರು.. ಸಾಕ್ಷಿಗಳ ಸಂಗ್ರಹ.. ದರ್ಶನ್​ಗೆ ಕಂಟಕ ಫಿಕ್ಸ್‌?
ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಂದಿದೆ ಎನ್ನಲಾಗುತ್ತಿರೋ ಪಟ್ಟಣಗೆರೆ ಶೆಡ್‌ನಲ್ಲಿ ಪೊಲೀಸರು ಸ್ಪಾಟ್ ಮಹಜರು ಮಾಡಿದ್ದಾರೆ. ಮಹಜರ್ ವೇಳೆ ಪೊಲೀಸರಿಂದ ಮಹತ್ವದ ಸಾಕ್ಷಿಗಳ ಸಂಗ್ರಹಿಸೋ ಮಾಹಿತಿಯಿದೆ. ಪಟ್ಟಣಗೆರೆ ಶೆಡ್‌ನ 4 ಪ್ರದೇಶದಲ್ಲಿ ಸಾಕ್ಷಿಗಳ ಸಂಗ್ರಹಿಸಲಾಗಿದ್ಯಂತೆ.

ಮೊದಲು ರೇಣುಕಾಸ್ವಾಮಿ ಇಲ್ಲಿಗೆ ಬಂದಿದ್ದನಾ? ಕೊಲೆ ಜಾಗದಲ್ಲಿ ಮೃತ ಇದ್ದನಾ ಅನ್ನೋದು ಪ್ರೂವ್ ಆಗಬೇಕು. ಒಂದು ವೇಳೆ ಅದನ್ನ ಸಾಬೀತು ಮಾಡುವಲ್ಲಿ ವಿಫಲವಾದರೆ ದರ್ಶನ್ ಗ್ಯಾಂಗ್ ಬಚಾವಾಗೋ ಸಾಧ್ಯತೆಯಿರುತ್ತೆ. ಹಾಗಾಗಿ ಮೃತ ವ್ಯಕ್ತಿ ಆ ಶೆಡ್‌ನಲ್ಲಿ ಇದ್ದ ಎನ್ನುವ ಬಗ್ಗೆ ಸಾಕ್ಷಿ ಸಂಗ್ರಹ ಕಾರ್ಯ ನಡೆದಿದೆ. ಮತ್ತೊಂದು ಕಡೆ ಹತ್ಯೆಯಾದ ರೇಣುಕಾಸ್ವಾಮಿ ಡೆಡ್‌ ಬಾಡಿ ಸಿಕ್ಕ ಸುಮ್ಮನಹಳ್ಳಿ ಮೋರಿಗೆ ತೆರಳಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರಂತೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಸೆಕ್ಷನ್ 302 ಬಗ್ಗೆ ರಮ್ಯಾ ಧ್ವನಿ ಎತ್ತಿದ್ದೇಕೆ? 

ಹತ್ಯೆಯಾದ ರೇಣುಕಾಸ್ವಾಮಿ ಡೆಡ್‌ಬಾಡಿಗೆ ಸಂಬಂಧಿಸಿದ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ ಆತ ಆ ಶೇಡ್‌ನಲ್ಲಿ ಮುಟ್ಟಿದ ವಸ್ತುಗಳ ಸೀಜ್ ಮಾಡಲಾಗಿದೆಯಂತೆ. ಆ ವಸ್ತುಗಳ ಮೂಲಕ ರೇಣುಕಾಸ್ವಾಮಿಯ ಫಿಂಗರ್ ಪ್ರಿಂಟ್ ಕಲೆ ಹಾಕಲಾಗಿದೆಯಂತೆ. ಜೊತೆಗೆ ಶೆಡ್‌ನ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಸೀಜ್ ಮಾಡಿಕೊಂಡಿದ್ದು ಆತನ ಕರೆದುಕೊಂಡು ಬಂದಿರುವ ದೃಶ್ಯಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರಂತೆ.

ಪ್ರಮುಖವಾಗಿ ದರ್ಶನ್ ಗ್ಯಾಂಗ್ ಕೊಲೆ ಮಾಡಿದ್ದೇ ಆದ್ರೆ ಅದಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನೂ ಕಲೆಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರಂತೆ. ಮೃತನ ಕರೆದುಕೊಂಡು ಬಂದಿದ್ದು ಯಾರು..? ಯಾವಾಗ? ಯಾವ ಕಡೆಯಿಂದ, ಯಾವ ರೀತಿ ಕರೆದುಕೊಂಡು ಬಂದರು? ಯಾರು ಯಾರು ಹಲ್ಲೆ ಮಾಡಿ ಕೊಂದರು ಎಂದು ಹೇಳಿಕೆ ಸಾಕ್ಷಿ ಪಡೆದುಕೊಂಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳಿಗೂ ಪೊಲೀಸರು ಪತ್ತೆ ಹಚ್ಚಲು ಆರಂಭಿಸಿದ್ದಾರಂತೆ. ಯಾವ ಜಾಗದಲ್ಲಿ, ಯಾರು ಹಲ್ಲೆ ಮಾಡಿದ್ರು, ವೆಪನ್ ಯಾರು ತಂದ್ರು ಎಂಬುದನ್ನು ಪತ್ತೆ ಹಚ್ಚೋದಕ್ಕೂ ತನಿಖೆ ಚುರುಕುಗೊಂಡಿದೆ.

ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿತ್ತಾ ದರ್ಶನ್ ಗ್ಯಾಂಗ್?
ಪಟ್ಟಣಗೆರೆ ಶೇಡ್‌ನ ಸ್ಥಳ ಮಹಜರು ವೇಳೆ ಪೊಲೀಸರ ಎದುರು ಹಲವಾರು ಶಾಕಿಂಗ್ ವಿಚಾರಗಳು ಬಯಲಾಗಿವೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿಯನ್ನು ಕರೆತಂದು ಮೊದಲಿಗೆ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಲಾಯಿತು ಎನ್ನಲಾಗ್ತಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಾಕ್ಷಿಗಳಾಗಲಿರೋ ರಿಪಿಸ್ & ದೊಣ್ಣೆಗಳನ್ನೂ ವಶಪಡಿಸಿಕೊಳ್ಳಲಾಗಿದೆಯಂತೆ. ಜೊತೆಗೆ, ಆ ಜಾಗದಲ್ಲಿ ದರ್ಶನ್ ಇದ್ದರು ಎಂಬುದಕ್ಕೆ ಕೂದಲು, ಫಿಂಗರ್‌ ಪ್ರಿಂಟ್‌ಗೂ ಪೊಲೀಸರು ಹುಡುಕಾಡಿದ್ದಾರಂತೆ. ಹತ್ಯೆಯಾದ ರೇಣುಕಾಸ್ವಾಮಿಯನ್ನು ಗೋಡೆಗೆ ಗುದ್ದಿಸಿರುವ ಜಾಗದಲ್ಲಿ ಕೂದಲು ಪತ್ತೆಯಾಗಿದ್ದು ಆ ಕೂದಲು ಯಾರದ್ದು ಎಂಬುದನ್ನು ಖಚಿತಪಡಿಸಿಕೊಳ್ಳೋ ಕಾರ್ಯವೂ ಚಾಲ್ತಿಯಲ್ಲಿದೆಯಂತೆ.

ಈ ಎಲ್ಲಾ ಸ್ಥಳ ಮಹಜರು, ಆರೋಪಿಗಳ ಹೇಳಿಕೆಗಳು ಸಿಕ್ಕಿರೋ ಡಿಜಿಟಲ್ ಸಾಕ್ಷಿಗಳ ಮೂಲಕ ದರ್ಶನ್ ವಿರುದ್ಧದ ಕೊಲೆ, ಕಿಡ್ನಾಪ್, ಸಾಕ್ಷಿನಾಶ ಆರೋಪ ಸಾಬೀತಾಗಿದ್ದೇ ಆದ್ರೆ ಕಠಿಣ ಶಿಕ್ಷೆಯಾಗೋದು ಕನ್ಫರ್ಮ್. ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಪ್ರಬಲವಾದ ಡಿಜಿಟಲ್ ಸಾಕ್ಷಿಗಳು ಕೆಲ ಆರೋಪಿಗಳ ತಪ್ಪೊಪ್ಪಿಗೆ ಸಾಕ್ಷಿಗಳು ನಿರ್ಣಾಯಕವಾಗುತ್ತವೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ 3 ಸೆಕ್ಷನ್‌.. 10 ಸಾಕ್ಷಿ? ಬೇಲ್ ಸಿಗೋದು ಡೌಟ್‌? ಡೆಡ್ಲಿ ಮರ್ಡರ್ ಕೇಸ್‌ನಲ್ಲಿ ದರ್ಶನ್​ಗೆ ಜೈಲು ಫಿಕ್ಸಾ?

https://newsfirstlive.com/wp-content/uploads/2024/06/DARSHAN-12.jpg

Load More