newsfirstkannada.com

ಬೆಂಗಳೂರಿನ ಈ ಏರಿಯಾಗೆ ‘ಪಾರಿವಾಳ ಕಂಟಕ’; ಅವುಗಳ ಹೆಸರು ಹೇಳಿದ್ರೆ ರೊಚ್ಚಿಗೇಳ್ತಾರೆ ಇಲ್ಲಿಯ ಜನ..! ಯಾಕೆ ಗೊತ್ತಾ..?

Share :

15-07-2023

    ಪಾರಿವಾಳದಿಂದ ಸಿಲಿಕಾನ್​ ಸಿಟಿ ಮಂದಿಗೆ ತೊಂದರೆ..!

    ಕಠಿಣ ಕ್ರಮಕ್ಕೆ ಆಗ್ರಹಿಸಿದ ಸ್ಥಳೀಯ ನಿವಾಸಿಗಳು..!

    ನಂಬಲು ಅಸಾಧ್ಯವಾಗಿದ್ಗರೂ ಇದು ಮಾತ್ರ ಸತ್ಯ..!

ಬೆಂಗಳೂರು: ಪಾರಿವಾಳ ಶಾಂತಿಯ ಸಂಕೇತ ಅನ್ನೋ ನಂಬಿಕೆ ಹಲವರಲ್ಲಿದೆ. ಆದರೆ ಅಂಥ ಪಾರಿವಾಳವೇ ಜನರ ಮನಃಶಾಂತಿ‌ ಕಡಿಸಿದರೆ ಹೇಗೆ ಹೇಳಿ? ಹೌದು, ನಗರದ ಬಸವನಗುಡಿ‌ಯ ಸಜ್ಜನ್ ರಾವ್ ಸರ್ಕಲ್ ಬಳಿಯ ನಿವಾಸಿಗಳಿಗೆ ಪಾರಿವಾಳ ಅಂದ್ರೆನೇ ಕೈಕಾಲು ನಡುಗುವಂತೆ ಆಗೋಗಿದೆಯಂತೆ!

ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್‌ ಸುತ್ತಮುತ್ತ ಬೆಳಂಬೆಳಗ್ಗೆ ಸಾವಿರಾರು ಪಾರಿವಾಳಗಳು ಆಹಾರಕ್ಕಾಗಿ ಬಂದು ಸೇರುತ್ತವೆ. ಜನರು ಕೂಡ ಮಾನವೀಯ ನೆಲೆಗಟ್ಟಿನಲ್ಲಿ ಪಾರಿವಾಳಗಳಿಗೆ ಅನ್ನ, ಕಾಳುಗಳನ್ನು ಸುರಿದು ಹೋಗುತ್ತಾರೆ‌.‌ ಇದು ಇಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ಹತ್ತಲ್ಲ, ನೂರಲ್ಲ, ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಪಾರಿವಾಳಗಳು ನೆಲೆ ಕಂಡುಕೊಂಡಿದೆ. ಆದ್ರೆ, ಇದೇ ಈಗ ಇಲ್ಲಿನ ಸುತ್ತಮುತ್ತಲಿನ ಜನರ ನಿದ್ದೆ ಗೆಡಿಸಿದೆ.

ಈ ಪಾರಿವಾಳಗಳು ಗುಂಪಾಗಿ ಹಾರಾಡುವ ಕಾರಣಕ್ಕೆ ಇದರಿಂದ ಧೂಳು ಉತ್ಪತಿಯಾಗುತ್ತಿದ್ದು, ಇದರಿಂದ ಅಕ್ಕಪಕ್ಕದ ಪ್ಲ್ಯಾಟ್, ಮನೆಯಲ್ಲಿರುವ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ. ಜೊತೆಗೆ ಪಾರಿವಾಳಗಳು ಮನೆ, ಅಪಾರ್ಟ್ಮೆಂಟ್​ನಲ್ಲಿ ಗೂಡು ಕಟ್ಟಿ ಸಂತಾನೋತ್ಪತ್ತಿಯನ್ನು ಮಾಡುತ್ತಿದ್ದು ಕಮ್ಯೂನಿಟಿಯ ಜಾಗಗಳು ಗಲೀಜಾಗುತ್ತಿದೆಯಂತೆ. ಎಲ್ಲಕ್ಕಿಂತ ಮುಖ್ಯವಾಗಿ ವಯಸ್ಕರಿಗೆ ಇದರಿಂದ ಆರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಬೇರೆ ಭಾಗದ ಜನರು ಕಾಳು, ಅನ್ನ ತಂದು ಹಾಕುತ್ತಿರುವ ಕಾರಣ ಪಾರಿವಾಳಗಳು ಈ ಜಾಗ ಬಿಟ್ಟು ಕದಲುತ್ತಿಲ್ಲ. ಆಹಾರ ಕೊಡುವುದು ನಿಲ್ಲಿಸಿದರೆ ಪಾರಿವಾಳ ಕಾಟದಿಂದ ಪಾರಾಗಬಹುದು ಎಂದು ಸ್ಥಳೀಯರು ಅಹವಾಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪಾರಿವಾಳಕ್ಕೆ ಕಾಳು ಹಾಕುವವರ ವಿರುದ್ಧ ಕೂಡಲೇ ಕ್ರಮತೆಗೆದುಕೊಳ್ಳಿ ಎಂದು ಬ್ಯಾನರ್ ಕೂಡ ಇಲ್ಲಿ ಅಳವಡಿಸಿದ್ದಾರೆ.

ಒಟ್ಟಾರೆ ಬೆಂಗಳೂರಿನ ಅದಮ್ಯ ಜಾಗದ ನಿವಾಸಿಗಳಿಗೆ ಪಾರಿವಾಳದಿಂದ ಕಾಟ ಎಂದರೆ ನಂಬಲು ಸ್ವಲ್ಪ ಕಷ್ಟವೇ. ಆದರೆ ಇದು ವಾಸ್ತವ. ಪ್ರೀತಿಯ ಸಂಕೇತವಾದ ಪಾರಿವಾಳಗಳನ್ನೇ ಇಲ್ಲಿನ ಜನ ದ್ವೇಷಿಸೋ ಪರಿಸ್ಥಿತಿ ಉದ್ಭವಿಸಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಪಾರಿವಾಳಗಳಿಗೂ ತೊಂದರೆಯಾಗದಂತೆ ಜನರಿಗೂ ಸಮಸ್ಯೆಯಾಗದಂತೆ ಕ್ರಮಕ್ಕೆ ಮುಂದಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಈ ಏರಿಯಾಗೆ ‘ಪಾರಿವಾಳ ಕಂಟಕ’; ಅವುಗಳ ಹೆಸರು ಹೇಳಿದ್ರೆ ರೊಚ್ಚಿಗೇಳ್ತಾರೆ ಇಲ್ಲಿಯ ಜನ..! ಯಾಕೆ ಗೊತ್ತಾ..?

https://newsfirstlive.com/wp-content/uploads/2023/07/dove-3.jpg

Load More