ವಿಶ್ವದ ಮೂಲೆ ಮೂಲೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗ
ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ ಗಗನ್ ಶ್ರೀನಿವಾಸ್
ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತೆ ಡಾ.ಬ್ರೋ ವಿಡಿಯೋಸ್
ಡಾ. ಬ್ರೋ (Dr. Bro) ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಡಾ. ಬ್ರೋ ಅಂದ್ರೆ ಗಗನ್ ಶ್ರೀನಿವಾಸ್ ಚಿರಪರಿಚಿತ. ನಮಸ್ಕಾರ ದೇವ್ರು ಎಂದು ದೇಶ ವಿದೇಶ ಸುತ್ತುತ್ತಿದ್ದ ಡಾಕ್ಟರ್ ಬ್ರೋ ಅವರು ಒಂದಲ್ಲಾ ಒಂದು ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತಾರೆ.
ಇದನ್ನೂ ಓದಿ: ನಮಸ್ಕಾರ ದೇವ್ರು.. ಕ್ರಿಕೆಟ್ ಫ್ಯಾನ್ಸ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ಡಾಕ್ಟರ್ ಬ್ರೋ; ಏನದು..?
ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ಡಾಕ್ಟರ್ ಬ್ರೋ ಅವರು, ದೇಶ ವಿದೇಶಕ್ಕೆ ಹೋಗಿ ಅಲ್ಲಿನ ಅಲ್ಲಿ ವಾಸ್ತವ್ಯದ ಬಗ್ಗೆ ಜನರಿಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸುತ್ತಾರೆ ಈ ಡಾ.ಬ್ರೋ. ಪ್ರಸ್ತುತ ದುನಿಯಾದಲ್ಲಿ ಯೂಟ್ಯೂಬರ್‌ಗಳೇ ಸಖತ್ ಫೇಮಸ್ ಆಗುತ್ತಿದ್ದಾರೆ. ಕೆಲವರು ದೇಶ, ವಿದೇಶ ಸುತ್ತಿ ಖ್ಯಾತಿ ಪಡೆದ್ರೆ, ಕೆಲವರು ಮನೆಯಲ್ಲೇ ಅಡುಗೆ ವಿಡಿಯೋ ಮಾಡಿ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಯೂಟ್ಯೂಬ್ನಲ್ಲಿ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಿ ಜನರ ಬಳಿ ಗುರುತಿಸಿಕೊಂಡಿದ್ದಾರೆ. ಇಂತಹ ಸಾಲಿನಲ್ಲಿ ನಮಸ್ಕಾರ ದೇವ್ರು ಎಂದು ವಿಡಿಯೋ ಪ್ರಾರಂಭಿಸೋ ಡಾ.ಬ್ರೋ ಕೂಡ ಒಬ್ಬರು.
ಸ್ವಾತಂತ್ರ್ಯ ದಿನಾಚರಣೆ ದಿನವೇ ಡಾ. ಬ್ರೋ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದರು. ಗಗನ್ ಶ್ರೀನಿವಾಸ್ ಅವರ ಗೋಪ್ರವಾಸದಲ್ಲಿ ಕನ್ನಡ ಟೂರ್ ಮ್ಯಾನೇಜರ್, ಕ್ಯಾಮೆರಾಮ್ಯಾನ್ ಕೂಡ ಜೊತೆಗೆ ಇರುತ್ತಾರೆ. ಆಲ್ ರೆಡಿ ಗೋ ಪ್ರವಾಸ ಮೂಲಕ ಟೂರ್ಗೆ ಹೋಗಿ ಬಂದವರು ಫುಲ್ ಖುಷಿಯಾಗಿದ್ದು 5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ ಎಂದು ಡಾ.ಬ್ರೋ ಹೇಳಿದ್ದರು. ಸದ್ಯ ವಿಚಾರ ಏನೆಂದರೆ, ಗಗನ್ ಅವರು ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇನ್ನು ಗಗನ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡ ವಿಡಿಯೋಗಳು ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿವೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಒಟ್ಟು 157 ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಗಗನ ಶೇರ್ ಮಾಡಿಕೊಂಡ ವಿಡಿಯೋಗಳಲ್ಲಿ ಅತಿ ಹೆಚ್ಚಾಗಿ ವೀಕ್ಷಣೆ ಕಂಡ ವಿಡಿಯೋ ಎಂದರೆ ಅದು ಭಾರತದ ಕೊನೆಯ ಬಾರ್ಡರ್ನಿಂದ ಪಾಕಿಸ್ತಾನಕ್ಕೆ ಹೋಗಿದ್ದು. ಇದೇ ವಿಡಿಯೋ 6.2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?
ಮತ್ತೊಂದು ಎಂದರೆ ಮನುಷ್ಯರನ್ನು ಕೊಂದು ತಿನ್ನೋ ಜನಗಳ ಜೊತೆ ಮುಖಾಮುಖಿ. ಇದೇ ವಿಡಿಯೋ 6 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಮತ್ತೊಂದು ಭಾರತದ ಅತಿ ದೊಡ್ಡ ಕ್ರೂಸ್ ಪ್ರಯಾಣ. ಇದೇ ವಿಡಿಯೋ 5 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇಷ್ಟು ಮಿಲಿಯನ್ ಗಟ್ಟಲೇ ವಿಡಿಯೋಗಳು ವೀಕ್ಷಣೆ ಕಾಣುವುದಕ್ಕೆ ಮುಖ್ಯ ಕಾರಣವೇ ಪರಿಪೂರ್ಣವಾದ ವಿವರ.
ಹೀಗಾಗಿ ಜನರು ಮನೆಯಲ್ಲೇ ಕುಳಿತುಕೊಂಡು ದೇಶ ವಿದೇಶದ ಬಗ್ಗೆ ಅದರಲ್ಲೂ ಕನ್ನಡದಲ್ಲಿ ಇನ್ಫ್ಯಾಮೇಶನ್ ಪಡೆದುಕೊಳ್ಳುವುದರಿಂದ ಡಾ ಬ್ರೋ ಅವರಿಗೆ ಧನ್ಯವಾದ ತಿಳಿಸುತ್ತಾರೆ. ಇನ್ನು ಡಾ. ಬ್ರೋ ಅವರು 2.54 ಚಂದಾದಾರರನ್ನು ಹೊಂದಿದ್ದಾರೆ. 2.7 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಮೂಲಕವೇ ಡಾ. ಬ್ರೋ ಅವರು ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ