newsfirstkannada.com

ಬಿಗ್​​ಬಾಸ್​ಗೆ ಹೋಗಲು ಸಜ್ಜಾದ್ರಾ ಡಾ. ಬ್ರೋ? ಈ ಬಗ್ಗೆ ಖ್ಯಾತ ಯೂಟ್ಯೂಬರ್​​ ಹೇಳಿದ್ದೇನು?

Share :

Published August 24, 2024 at 7:24pm

Update August 25, 2024 at 6:26am

    ಸೀಸನ್​​-11ಕ್ಕೆ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಎಂಬ ಬಗ್ಗೆ ಚರ್ಚೆ ಶುರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಕೆಲವರ ಹೆಸರುಗಳು

    ಈ ಬಾರಿಯ ಬಿಗ್​ಬಾಸ್ ಸೀಸನ್​ 11 ಬರ್ತಾರಾ ಗಗನ್​ ಶ್ರೀನಿವಾಸ್​​

ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಲು ತೆರೆಮರೆಯಿಂದ ತಯಾರಿ ನಡೆಯುತ್ತಿದೆ. ಸಾಕಷ್ಟು ಅಭಿಮಾನಿಗಳು ಬಿಗ್​ಬಾಸ್​ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸೀಸನ್​​-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಕೂಡ ಶುರುವಾಗ್ತಿದೆ.

ಇದನ್ನೂ ಓದಿ: ನಮಸ್ಕಾರ ದೇವ್ರು.. ಡಾಕ್ಟರ್​ ಬ್ರೋಗೆ ಇದೆಂಥಾ ವರ! ಇದೇ ನೋಡಿ ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ!

ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಬಿಗ್‌ಬಾಸ್‌ ಕನ್ನಡದ 11 ನೇ ಸೀಸನ್‌ ಪ್ರಸಾರವಾಗಲಿದೆ ಎಂದು ಸುದ್ದಿಯಾಗಿದೆ. ಅದಕ್ಕೂ ಮುನ್ನವೇ ಸೋಷಿಯಲ್​ ಮೀಡಿಯಾದಲ್ಲಿ ಈ ಬಾರಿಯ ಬಿಗ್​ಬಾಸ್​ಗೆ ಇವರೇ ಹೋಗುತ್ತಾರೆ, ಅವರು ಹೋಗುತ್ತಾರೆ ಅಂತ ಅಂದಾಜಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಕೇಳಿ ಬಂದಿರೋ ಹೆಸರೇ ಡಾ.ಬ್ರೋ. ಅರ್ಚಕರ ಮಗನಾಗಿ ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜೆ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗ ಇವರು. ಇಂದು ಯೂಟ್ಯೂಬ್​ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.

ಹೌದು, ಬಿಗ್​ಬಾಸ್​​ ಮನೆಗೆ ಸುಖಾ ಸುಮ್ಮನೆ ಯಾರನ್ನೂ ಕರೆಸಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ, ಸಿನಿಮಾ ತಾರೆಯರನ್ನ, ಕ್ರೀಡಾಪಟುಗಳನ್ನು ಹಾಗೂ ​ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದವರನ್ನು ಕರೆಸಲಾಗುತ್ತದೆ. ಜನಪ್ರಿಯತೆ ಹೆಚ್ಚು ಸಿಗೋದ್ರಿಂದ ಇಂಥ ಆಫರ್ ಬಂದರೆ ಯಾರೂ ಮಿಸ್​ ಮಾಡಿಕೊಳ್ಳಲ್ಲ. ಆಗಸ್ಟ್​ ಬರುತ್ತಿದ್ದಂತೆ ವೀಕ್ಷಕರು ಬಿಗ್​ಬಾಸ್​ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್​ ಶುರುವಾಗೋದು ಅಕ್ಟೋಬರ್​ ಕೊನೆ ವಾರ ಅಥವಾ ಸೆಪ್ಟಂಬರ್​ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇಯೇ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ.

ಇನ್ನು, ಹೀಗೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11ಕ್ಕೆ ಗಗನ್​​ ಶ್ರೀನಿವಾಸ್ ಅವರು ಹೋಗುತ್ತಾರೆ ಎಂದು ಕೆಲವರು ಹೇಳಿಕೊಂಡಿದ್ದರು.  ಆದರೆ, ಈ ಬಗ್ಗೆ ಖುದ್ದು ಗಗನ್​ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಮೂರು ತಿಂಗಳು ಒಂದೇ ಮನೆಯಲ್ಲಿ ಇರಲು ಕಷ್ಟವಾಗುತ್ತದೆ. ಅದೇ ಮೂರು ತಿಂಗಳಲ್ಲಿ ಐದು ದೇಶ ಸುತ್ತಬಹುದು. ಆದರೆ ಒಂದೇ ಮನೆಯಲ್ಲಿ 3 ತಿಂಗಳು ಇರೋದೆ ಪ್ರಾಬ್ಲಮ್ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿದ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಇನ್ನೂ, ಡಾ ಬ್ರೋ ಅವರು ಬಿಗ್​ಬಾಸ್​ಗೆ ಎಂಟ್ರಿ ಕೊಡ್ತಾರೆ ಅಂತ ನಂಬಿಕೆ ಇಟ್ಟುಕೊಂಡಿದ್ದವರ ಆಸೆ ಸುಳ್ಳಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​ಗೆ ಹೋಗಲು ಸಜ್ಜಾದ್ರಾ ಡಾ. ಬ್ರೋ? ಈ ಬಗ್ಗೆ ಖ್ಯಾತ ಯೂಟ್ಯೂಬರ್​​ ಹೇಳಿದ್ದೇನು?

https://newsfirstlive.com/wp-content/uploads/2024/08/dr-bro.jpg

Load More