ಹರಿಪ್ರಸಾದ್ರನ್ನು ಭೇಟಿಯಾದ ಪರಮೇಶ್ವರ್, ಜಾರಕಿಹೊಳಿ
ಸಿದ್ದರಾಮಯ್ಯ ವಿರುದ್ಧ ಮಾತಿನ ಸಮರ ಸಾರಿರುವ ಹರಿಪ್ರಸಾದ್
ಹರಿಪ್ರಸಾದ್ಗೆ ನೋಟಿಸ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಸಮರ ಸಾರಿದ್ದ ಪರಿಷತ್ ಸದಸ್ಯ ಬಿ.ಕೆ,ಹರಿಪ್ರಸಾದ್‌ರನ್ನ ಮನವೊಲಿಸುವ ಯತ್ನ ನಡೆದಿದೆ. ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಹರಿಪ್ರಸಾದ್ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಸುಮಾರು ಒಂದು ಗಂಟೆಗಳ ಕಾಲ ಉಭಯ ನಾಯಕರು ಚರ್ಚೆ ಮಾಡಿದ್ದಾರೆ.. ಹರಿಪ್ರಸಾದ್ ಭೇಟಿ ಬಳಿಕ ಮಾತನಾಡಿದ ಜಿ.ಪರಮೇಶ್ವರ್, ಒಬ್ಬರಿಗೊಬ್ಬರು ಭೇಟಿ ಆಗಬಾರದು ಅಂತ ಎನಾದರೂ ಇದೆಯಾ?. ಹರಿಪ್ರಸಾದ್ ನಮ್ಮ ಹಿರಿಯ ನಾಯಕರು. ಅವರನ್ನ ಭೇಟಿ ಮಾಡಬಾರದು ಅಂತ ಇದೆಯಾ? ನಮ್ಮಲ್ಲಿ ಅನೇಕ ಆಂತರಿಕ ವಿಷಯ ಇರುತ್ತೆ.. ಆದ್ರೆ, ಹರಿಪ್ರಸಾದ್‌ರಿಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಹರಿಪ್ರಸಾದ್ಗೆ ಹೈಕಮಾಂಡ್ ಕೂಡ ನೋಟಿಸ್ ನೀಡಿದೆ. ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಹೈಕಮಾಂಡ್ ಕೇಳಿದೆ. ಸಿದ್ದರಾಮಯ್ಯರನ್ನು ಟೀಕಿಸುವ ಭರದಲ್ಲಿ ಹರಿಪ್ರಸಾದ್ ಅವರಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಹೊಡೆತ ಬೀಳುವ ಕೆಲಸ ಆಗುತ್ತಿದೆ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಜೊತೆಗೆ ವಿಪಕ್ಷ ಬಿಜೆಪಿಗೆ ಈ ವಿಚಾರ ದೊಡ್ಡ ಅಸ್ತ್ರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ