newsfirstkannada.com

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಬಿಡುಗಡೆ ಆಗುತ್ತಾ? ಬಿಜೆಪಿ ನಾಯಕರಿಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

Share :

26-07-2023

    ‘DJ ಹಳ್ಳಿ, KG ಹಳ್ಳಿ ಕೇಸ್​ ತಕ್ಷಣ ವಾಪಸ್ ಪಡೆಯಲು ಆಗಲ್ಲ’

    ‘ಸಂಪುಟ ಉಪಸಮಿತಿ ಮುಂದೆ ಮಂಡನೆ ಆಗಬೇಕು’

    ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ ಬಹಳ ಸಣ್ಣದು-ಗೃಹ ಸಚಿವ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರೋರನ್ನು ನಿಯಮದ ಅನುಸಾರ ಬಿಡುಗಡೆ ಮಾಡುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ‘ಬೇರೆ ಬೇರೆ ಪ್ರಕರಣದಲ್ಲಿ ಹಾಕಿರೋ‌ ಕೇಸ್​ನಲ್ಲಿ ‌ಸತ್ಯಾಂಶ ಇಲ್ಲದಿದ್ರೆ ವಾಪಸ್ ಪಡೆಯಿರಿ ಎಂದು ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಅವರ ಮನವಿಯಂತೆ ಅದನ್ನು ನಾವು ತಕ್ಷಣ ವಾಪಸ್ ತೆಗೆದುಕೊಳ್ಳಲು ಆಗೋದಿಲ್ಲ ಎಂದಿದ್ದಾರೆ.

ಇದನ್ನು ಸಚಿವ ಸಂಪುಟ ಉಪಸಮಿತಿ ಮುಂದೆ ಮಂಡನೆ ಮಾಡಬೇಕು. ಅಲ್ಲಿ ಅದನ್ನು ತೀರ್ಮಾನ ಮಾಡಲಾಗುತ್ತದೆ. ನಾವೀಗ ಆ ಪ್ರಕ್ರಿಯೆ ಮಾಡಿದ್ದೇವೆ ಅಷ್ಟೇ. ನಂತರ ಈ ವಿಚಾರ ಕ್ಯಾಬಿನೆಟ್ ಮುಂದೆ ಬರುತ್ತದೆ. ಕ್ಯಾಬಿನೆಟ್​ನಲ್ಲಿ ಅದು ಅಪ್ರೂವಲ್ ಆಗುತ್ತದೆ ಅಂತಾ ಅಲ್ಲ. ಕಾನೂನಾತ್ಮಕವಾಗಿದ್ರೆ ಅದನ್ನ ನೋಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ರಾಜಕಾರಣ ಮಾಡ್ತಿದ್ದಾರೆ? ಸಣ್ಣ ಸಣ್ಣ ವಿಷಯಗಳಲ್ಲಿ ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ ಎಂದು ಕಾಣಿಸುತ್ತದೆ. ಬರಗಾಲ, ಪ್ರವಾಹದ ಬಗ್ಗೆ ಬಿಜೆಪಿಯವರು ಮಾತನಾಡಲ್ಲ. ಬೇರೆ ಕೆಲಸ ಇಲ್ಲ ಎಂದು ಕಾಣಿಸುತ್ತದೆ ಅಂತಾ ಪರಮೇಶ್ವರ್‌ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಬಂಧಿತರ ರಿಲೀಸ್​ಗೆ ತನ್ವೀರ್ ಸೇಠ್ ಪತ್ರ; ಬಿಡುಗಡೆ ಬಗ್ಗೆ ಪರಿಶೀಲಿಸಲು ಗೃಹ ಸಚಿವರಿಂದ ಆದೇಶ

ಇದೇ ವೇಳೆ ಉಡುಪಿ ಜಿಲ್ಲೆಯ ಖಾಸಗಿ ಕಾಲೇಜು ಒಂದರಲ್ಲಿ ಹೆಣ್ಮಕ್ಕಳ ವಾಷ್​​ರೂಮ್​​ನಲ್ಲಿ ವಿಡಿಯೋ ಮಾಡಿದ ಪ್ರಕರಣದ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಉಡುಪಿ ಘಟನೆ ಬಹಳ ಸಣ್ಣದು. ಅದಕ್ಕೂ ರಾಜಕೀಯ ಬಣ್ಣ ಕೊಡೋದು ಯಾಕೆ? ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುವುದು ಯಾಕೆ? ಪ್ರಿನ್ಸಿಪಾಲ್ ಇದ್ದಾರೆ, ಸಮಿತಿ ಇದೆ. ದೂರು ಇಲ್ಲ, ಏನೂ ಇಲ್ಲ. ರಾಜಕೀಯ ಮಾಡೋದನ್ನು ಬಿಜೆಪಿಯವರು ಮೊದಲು ನಿಲ್ಲಿಸಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಬಿಡುಗಡೆ ಆಗುತ್ತಾ? ಬಿಜೆಪಿ ನಾಯಕರಿಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

https://newsfirstlive.com/wp-content/uploads/2023/07/Parameshwar-1-1.jpg

Load More