ಮುಳಕಟ್ಟಮ್ಮನಿಗೆ 2 ಚಿನ್ನದ ಹಾರ ನೀಡಿ ಹರಕೆ ತೀರಿಸಿದ ಪರಂ
ದೇವರಿಗೆ 500 ಗ್ರಾಂ ತೂಕದ ಎರಡು ಚಿನ್ನದ ಹಾರ ಉಡುಗೊರೆ
ಪತ್ನಿ ಕನ್ನಿಕಾ ಪರಮೇಶ್ವರಿ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದ
ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಇಂದು 72ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆ ಪರಮೇಶ್ವರ್ ಅವರು ಮಾಗಡಿ ತಾಲೂಕು ಕುದೂರಿನಲ್ಲಿರುವ ಮನೆ ದೇವರಾದ ಮುಳ್ಕಟ್ಟಮ್ಮ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವೇಳೆ ಮುಳಕಟ್ಟಮ್ಮನಿಗೆ ಎರಡು ಚಿನ್ನದ ಹಾರ ನೀಡುವ ಮೂಲಕ ಹರಕೆ ತೀರಿಸಿದ್ದಾರೆ.
ಶ್ರೀ ಮುಳಕಟ್ಟಮ್ಮನಿಗೆ ಉಡುಗೊರೆಯಾಗಿ ನೀಡಿದ ಚಿನ್ನವು ಸುಮಾರು 500 ಗ್ರಾಂ ತೂಕದ್ದಾಗಿದೆ. ಜಿ.ಪರಮೇಶ್ವರ್ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ಪರಮೇಶ್ವರ್ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ದೇವರ ದರ್ಶನ ಪಡೆದು ತುಮಕೂರಿಗೆ ವಾಪಸ್ ಆಗಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರ ಜೊತೆ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಉಪಸ್ಥಿತರಿದ್ದರು.
ತುಮಕೂರಿನ ಹೆಗ್ಗೆರೆಯಲ್ಲಿರುವ ಪರಮೇಶ್ವರ್ ಮನೆಯಲ್ಲಿ ಇಂದು ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತ ದಂಡೇ ನೆರೆದಿದೆ. ಬೆಳಗ್ಗೆಯಿಂದಲೇ ಗೃಹ ಸಚಿವ ಪರಮೇಶ್ವರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ