ಸುಧಾಕರ್ ಮೇಲೆ ಶಾಸಕ ಪ್ರದೀಪ್ ಈಶ್ವರ್ ಕೆಂಡಾಮಂಡಲ!
ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಖಡಕ್ ಸೂಚನೆ
ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ!
ಚಿಕ್ಕಬಳ್ಳಾಪುರ: ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಖಡಕ್ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತಾಡಿದ ಶಾಸಕ ಪ್ರದೀಪ್ ಈಶ್ವರ್, ಯಾರ ಒತ್ತಡಕ್ಕೂ ಮಣಿಯಬೇಡಿ. ನನ್ನ ಫಾಲೋವರ್ಸ್ ಆಗಲೀ, ರಾಜಕೀಯ ವ್ಯಕ್ತಿಯಾಗಲೀ ಯಾರ ಮಾತು ಕೇಳಬೇಡಿ. ನಾನೇ ಹೇಳುವತನಕ ಯಾರ ಬಗ್ಗೆಯೂ ಯೋಚನೆ ಮಾಡಬೇಡಿ. ನ್ಯಾಯಯುತವಾಗಿ ಜನ ಪರ ಕೆಲಸ ಮಾಡಿ ಎಂದರು.
ಈ ಹಿಂದೆ ಚಿಕ್ಕಬಳ್ಳಾಪುರ ಜನತೆಗೆ ಹಕ್ಕು ಪತ್ರಗಳನ್ನು ಹಂಚಲಾಗಿತ್ತು. ಹಕ್ಕು ಪತ್ರಗಳನ್ನು ಸ್ವತಃ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಡಾ. ಸಂತೋಷ್ ಕುಮಾರ್ ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಹಂಚಿದ್ದರು. ಅದು ಸುಧಾಕರ್ ಅವರು ಸಚಿವರಾಗಿದ್ದಾಗ ಹಂಚಿದ್ದಾರೆ. ಅನಧಿಕೃತವಾಗಿ ಹಕ್ಕು ಪತ್ರಗಳನ್ನು ಹಂಚಿದವರು ಯಾರೇ ಆಗಲೀ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳಲಿಲ್ಲ ಎಂದರೆ ನಿಮ್ಮ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ. ಇದರ ಬಗ್ಗೆ ಶಾಸನ ಸಭೆಯಲ್ಲಿ ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ