newsfirstkannada.com

HDK ಜೊತೆಗೂ ಗೃಹ ಸಚಿವನಾಗಿದ್ದೆ, ಆಗ ಏನೇನಾಗಿತ್ತೆಂದು ಹೇಳೋದು ಸರಿಯಲ್ಲ -ವರ್ಗಾವಣೆ ದಂಧೆ ಆರೋಪಕ್ಕೆ ಪರಂ ವಾಗ್ದಾಳಿ

Share :

04-08-2023

    ‘ಸರ್ಕಾರ ನಡೆಸೋರು ನಾವು, ಹಾಗೆಲ್ಲ ಆಗಲ್ಲ’

    ಅಗತ್ಯ ಇರೋರನ್ನ ಮಾತ್ರ ವರ್ಗಾವಣೆ ಮಾಡ್ತೀವಿ

    ಕುಮಾರಸ್ವಾಮಿ ಆರೋಪಕ್ಕೆ ಪರಂ ಕೌಂಟರ್

ಬೆಂಗಳೂರು: ರಾಜ್ಯ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿಯವರು ಏನು ಬೇಕಾದ್ರೂ ಕಮೆಂಟ್ ಮಾಡಲಿ. ಸರ್ಕಾರ ನಡೆಸುವವರು ನಾವು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನು ಮಾಡುತ್ತೇವೆ. ನಮಗೆ 1200 ಇನ್ಸ್​ಪೆಕ್ಟರ್ಸ್​ ಇದ್ದಾರೆ. ಅಷ್ಟನ್ನು ನಾವು ವರ್ಗಾವಣೆ ಮಾಡೋದಿಲ್ಲ. ಎಷ್ಟು ಮಂದಿ ಅಗತ್ಯ ಇದೆಯೋ ಅಷ್ಟು ಜನರನ್ನು ಮಾತ್ರ ವರ್ಗಾವಣೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ವಿದೇಶ ಪ್ರವಾಸದಿಂದ ಕುಮಾರಸ್ವಾಮಿ ವಾಪಸ್​; ಬೆಂಗಳೂರಿಗೆ ಬರ್ತಿದ್ದಂತೆ ಸರ್ಕಾರ ಬೀಳಿಸುವ DKS ಆರೋಪಕ್ಕೆ ಕೌಂಟರ್..!

ಯಾವ ಏರಿಯಾದಲ್ಲಿ ಯಾವ ರೀತಿ ಯಾರನ್ನು ಹಾಕಿದ್ರೆ ಅಪರಾಧ ಪ್ರಕರಣಗಳು ಕಂಟ್ರೋಲ್​​ಗೆ ಬರುತ್ತದೆ. ಈ ದೃಷ್ಟಿಕೋನ ಇಟ್ಕೊಂಡು ವರ್ಗಾವಣೆ ಮಾಡುತ್ತೇವೆ. ಇವರು ಹೇಳಿದ ಹಾಗೆ ಮಾಡೋದಿಲ್ಲ. ಇವರು ಕೂಡ ಮುಖ್ಯಮಂತ್ರಿಗಳಾಗಿದ್ದವರು, ಆಗಲೂ ನಾನೇ ಗೃಹ ಸಚಿವನಾಗಿದ್ದೆ. ಅವರು ಯಾವ ರೀತಿ ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿಗಳಾಗಿದ್ದಾಗ ಕೊಡ್ತಿದ್ರು ಎಂಬುದನ್ನು ನಾನು ಹೇಳಲ್ಲ. ಅದನ್ನ ಹೇಳುವುದು ಕೂಡ ಚೆನ್ನಾಗಿ ಕಾಣುವುದಿಲ್ಲ. ಕೆಲವು ವರ್ಗಾವಣೆ ಸರಿ ಎನಿಸಿಲ್ಲ ಎನ್ನುವ ಕಾರಣಕ್ಕಾಗಿ ನಿಲ್ಲಿಸಿದ್ದೇವೆ. ಅದನ್ನೆಲ್ಲ ನೋಡಿ ಸರಿ ಮಾಡಿ ವರ್ಗಾವಣೆ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಕುಮಾರಸ್ವಾಮಿ ಆರೋಪ ಏನು..?

ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು. ಪೊಲೀಸ್ ಅಧಿಕಾರಿಗಳನ್ನು ಆ ಮಟ್ಟಿಗೆ ಬಳಸಿಕೊಂಡರೆ ಅವರು ಜನ ಸಾಮಾನ್ಯರ ರಕ್ಷಣೆಯನ್ನು ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್​ನಲ್ಲಿ ಸಭೆ ನಡೆಯಬೇಕಾದ್ರೆ ಯಾರು ಇದ್ದರು? ವೈಎಸ್​ಟಿ ಟ್ಯಾಕ್ಸ್​ನವರು ಅಲ್ಲೇ ಇದ್ರಾ ಅಲ್ವಾ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್​ಟಿ ಟ್ಯಾಕ್ಸ್​ನವರು ಯಾಕೆ ಅಲ್ಲಿದ್ದರು? ಅವರನ್ನು ಇಟ್ಕೊಂಡು ಚರ್ಚೆ ಮಾಡಿದ್ದರೆ ಈ ಆಡಳಿತ ಎಲ್ಲಿಗೆ ಬಂತು. ವರ್ಗಾವಣೆ ಮಾಡಿ ಅದನ್ನು ಮತ್ತೆ ಯಾಕೆ ವಾಪಸ್ ಪಡೆದುಕೊಂಡರು ಎಂದು ಪ್ರಶ್ನಿಸಿದರು. ಈ ಹಿಂದೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ವರ್ಗಾವಣೆ ದಂಧೆ ಆರೋಪ ಹೊರಸಿದ್ದರು. ಈ ಸಂದರ್ಭದಲ್ಲಿ YST ಅಂದರೆ ಯತೀಂದ್ರ ಟ್ಯಾಕ್ಸ್ ಸರ್ವೀಸ್ ಅಲ್ಲವೇ ಎಂದು ಪ್ರಶ್ನಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HDK ಜೊತೆಗೂ ಗೃಹ ಸಚಿವನಾಗಿದ್ದೆ, ಆಗ ಏನೇನಾಗಿತ್ತೆಂದು ಹೇಳೋದು ಸರಿಯಲ್ಲ -ವರ್ಗಾವಣೆ ದಂಧೆ ಆರೋಪಕ್ಕೆ ಪರಂ ವಾಗ್ದಾಳಿ

https://newsfirstlive.com/wp-content/uploads/2023/08/HDK_PARAM.jpg

Load More