/newsfirstlive-kannada/media/post_attachments/wp-content/uploads/2024/02/NIkhil-Kumarswamy-On-Mandya.jpg)
ರಾಜ್ಯದಲ್ಲಿ ನಡೆದಿರೋ ಉಪಚುನಾವಣೆಯಲ್ಲಿ ಬಹಳ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿರೋದು ಅಂದ್ರೆ ಚನ್ನಪಟ್ಟಣ. ಬೊಂಬೆ ನಾಡಿನಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ದಟ್ಟವಾಗಿದೆ. ಈ ನಡುವೆ ನಿಖಿಲ್‌ಗೆ ರಾಜಯೋಗ ಶುರುವಾಗಿದೆ ಅಂತಾ ಗುರೂಜಿಯೊಬ್ಬರು ಭವಿಷ್ಯ ನುಡಿದಿರೋದು ಮಹತ್ವ ಪಡ್ಕೊಂಡಿದೆ. 2023ರ ಬಳಿಕ ಗೌಡರ ಕುಟುಂಬದ ಕುಡಿಗೆ ಈಗ ಒಳ್ಳೆಯ ಕಾಲ ಬಂದಿದೆ. ಹೀಗಂತ ಆಚಾರ್ಯರೊಬ್ಬರು ಯವರಾಜನ ಹೊಸ ದಿಶೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ; ಯಾರವರು?
/newsfirstlive-kannada/media/post_attachments/wp-content/uploads/2024/10/NIKHIL_HDK_BSY.jpg)
ನಿಖಿಲ್ ಕುಮಾರಸ್ವಾಮಿ ಬಾಳಲ್ಲಿ ಶುಭ ಶಕುನ ಬಂದಿದೆ. ಬೊಂಬೆನಾಡಿನಲ್ಲಿ ಸ್ಪರ್ಧಿಸಿ ಮತಯುದ್ಧ ಎದುರಿಸಿರೋ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದೆ. ಚನ್ನಪಟ್ಟಣ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹ ಭೇಧಿಸುತ್ತಾರೆ ಅಂತ ತುಮಕೂರಿನ ಡಾ. ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸೈನಿಕನ ಸದೆಬಡಿದು ಅಭಿಮನ್ಯು ಮತಯುದ್ಧದಲ್ಲಿ ಶುಭಸುದ್ದಿಯನ್ನ ಕೇಳ್ತಾರೆ ಅಂತ ಗುರೂಜಿ ಶುಭಶಕುನವನ್ನ ನುಡಿದಿದ್ದಾರೆ.
/newsfirstlive-kannada/media/post_attachments/wp-content/uploads/2023/06/HDkumaraswamy-Nikhil.jpg)
2016ರಲ್ಲಿ ತುಮಕೂರಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಚಂಡಿಕಾ ಯಾಗ ಮಾಡಿಸಿದ್ರು. ತಾಯಿಯ ಸನ್ನಿಧಿಯಲ್ಲಿ ಯಾಗ ಮಾಡಿಸಿ ತಮ್ಮ ಕುಟುಂಬ ಮತ್ತು ಮೊಮ್ಮಗನ ಭವಿಷ್ಯದ ಬಗ್ಗೆ ಪ್ರಾರ್ಥಿಸಿದ್ರು. 2016ರಲ್ಲಿ ಮಾಡಿದ ಯಾಗದ ಫಲದಿಂದ ಕುಮಾರಸ್ವಾಮಿ ಸಿಎಂ ಆಗಿದ್ರು. ಈಗ ಚನ್ನಪಟ್ಟಣ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸ್ತಾರೆ ಅಂತ ಆಚಾರ್ಯರು ಹೇಳಿದ್ದಾರೆ.
ಇನ್ನೂ ನಿಖಿಲ್ ಕುಮಾರಸ್ವಾಮಿಗೆ 2024ರಲ್ಲಿ ರಾಜಯೋಗ ಶುರುವಾಗಿದ್ದು, ಇನ್ಮುಂದೆ ಉನ್ನತ ಹುದ್ದೆಗೆ ಏರ್ತಾರೆ ಅಂತ ಡಾ.ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿಗಳು ಭವಿಷ್ಯ ನುಡಿದಿದ್ದಾರೆ. ಜೊತೆಗೆ ತಂದೆ-ತಾಯಿ, ಗುರು, ಅತಿಥಿಗಳ ಆಶೀರ್ವಾದ ನಿಖಿಲ್ ಮೇಲೆ ಇದೆ ಅಂತ ಗುರೂಜಿ ಆಶೀರ್ವದಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಬೆನ್ನಹಿಂದೆ ಮೂಕಾಂಬಿಕಾ ದೇವಿ ಇದ್ದೇ ಇರುತ್ತಾಳೆ ಅಂತ ಆಚಾರ್ಯರು ಆಶೀರ್ವದಿಸಿದ್ದಾರೆ. 2023ರಿಂದಲೇ ನಿಖಿಲ್‌ಗೆ ಜಯದ ಯೋಗ ಕೂಡಿ ಬಂದಿದೆ ಅಂತ ಗುರೂಜಿ ಶುಭಶಕುನ ನುಡಿದಿದ್ದಾರೆ.
/newsfirstlive-kannada/media/post_attachments/wp-content/uploads/2023/10/HDK_Nikhil.jpg)
2019ರಲ್ಲಿ ಲೋಕಸಭಾ ಚುನಾವಣೆ ಸೋಲು, 2023ರಲ್ಲಿ ರಾಮನಗರದ ಸೋಲು, ಈ ಎರಡೂ ಸೋಲಿನಿಂದ ಕಂಗೆಟ್ಟಿದ್ದ ನಿಖಿಲ್ ಬಾಳಲ್ಲಿ ಶುಭಕಾಲ ಬಂದಿದೆ. 2024ರಲ್ಲಿ ರಾಜಯೋಗ ಶುರುವಾಗಿದ್ದು, ಇನ್ಮೇಲೆ ಜೆಡಿಎಸ್ ಯುವರಾಜ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಂತೆ. ಗುರೂಜಿ ಭವಿಷ್ಯ ಏನೇ ಇರಲಿ.. ಮತದಾರರು ಬರೆದಿರೋ ಭವಿಷ್ಯವಂತೂ ನವೆಂಬರ್ 23ಕ್ಕೆ ಗೊತ್ತಾಗೋದಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us