newsfirstkannada.com

ಟೀಮ್ ಇಂಡಿಯಾದಲ್ಲಿ ಕನ್ನಡಿಗರದ್ದೇ ಹವಾ.. ಡಾ.ರಾಜ್​ಕುಮಾರ್ ಸಾಂಗ್​ಗಳಿಂದ ಫುಲ್ ಮೋಟಿವೇಶನ್

Share :

05-09-2023

    ಡಾ. ರಾಜ್​ಕುಮಾರ್ ಹಾಡುಗಳಿಗೆ ಸಚಿನ್ ಮಾರು ಹೋಗಿದ್ರು

    ದ್ರಾವಿಡ್, ಜೋಶಿ, ಕುಂಬ್ಳೆ, ಶ್ರೀನಾಥ್​, ಗಣೇಶ್ ಕನ್ನಡಿಗರು

    ರಾಜ್​ಕುಮಾರ್​ ಮೇಲಿನ ಪ್ರೀತಿ, ಅಭಿಮಾನಕ್ಕೆ ಗಡಿ ಇಲ್ಲ

ಇಂದಿಗೂ ಡಾಕ್ಟರ್​​ ರಾಜ್ ​ಕುಮಾರ್​ರ ಹಾಡುಗಳನ್ನ ಸ್ಪೂರ್ತಿಯಾಗಿಸಿ ಕೊಂಡಿರುವ ಹಲವರಿದ್ದಾರೆ. ರಾಜ್​ಕುಮಾರ್​ ಮೇಲಿನ ಪ್ರೀತಿ, ಅಭಿಮಾನಕ್ಕೆ ಗಡಿಯೇ ಇಲ್ಲ. ಟೀಮ್​ ಇಂಡಿಯಾ ಆಟಗಾರರು ಕೂಡ ಇದ್ರಿಂದ ಹೊರತಾಗಿಲ್ಲ. ಅಣ್ಣಾವ್ರು ಟೀಮ್​ ಇಂಡಿಯಾ ಆಟಗಾರರಿಗೆ ಸ್ಪೂರ್ತಿಯಾಗಿರುವುದೇ ಇವತ್ತಿನ ಸಖತ್​ ಸ್ಟೋರಿ.

ದಿವಂಗತ ನಟ ಡಾ.ರಾಜ್​ಕುಮಾರ್

ಅದು 1996-97ರ ಅವಧಿ.. ಆಗ ಭಾರತೀಯ ಕ್ರಿಕೆಟ್​ನಲ್ಲೇ ಕನ್ನಡಿಗರದ್ದೇ ಪಾರುಪತ್ಯ. ಆ ಅವಧಿಯಲ್ಲಿ ಟೀಮ್ ಇಂಡಿಯಾದಲ್ಲಿ ಅರ್ಧಕ್ಕೂ ಹೆಚ್ಚು ಆಟಗಾರರು ಕನ್ನಡಿಗರೇ ಆಗಿದ್ರು. ಸುಜಿತ್ ಸೋಮಸುಂದರ್, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್​, ವೆಂಕಟೇಶ್​ ಪ್ರಸಾದ್, ದೊಡ್ಡ ಗಣೇಶ್​, ಡೇವಿಡ್ ಜಾನ್ಸನ್, ವಿಜಯ್ ಭಾರದ್ವಾಜ್ ಎಲ್ರೂ ಟೀಮ್​ ಇಂಡಿಯಾದ ಭಾಗವಾಗಿದ್ರು.

ಮೋಟಿವೇಶನ್​ಗಾಗಿ ಹಾಡುಗಳನ್ನ ಕೇಳ್ತಿದ್ದ ಆಟಗಾರರು

ಕನ್ನಡಿಗರೆಲ್ಲ ಒಟ್ಟಾದ ಮೇಲೆ ಕೇಳಬೇಕಾ..? ಅಲ್ಲಿ ಕನ್ನಡದ್ದೇ ಹವಾ! ಆಗ ಟೀಮ್​ ಇಂಡಿಯಾದಲ್ಲಿ ಆಗಿದ್ದೂ ಅದೇ. ಇಷ್ಟೇ ಅಲ್ಲ, ಆ ಸಂದರ್ಭದಲ್ಲಿ ಇಡೀ ತಂಡಕ್ಕೆ ಡಾಕ್ಟರ್​​ ರಾಜ್​ಕುಮಾರ್​​ ಸ್ಪೂರ್ತಿಯಾಗಿದ್ರಂತೆ. ಇಡೀ ಜರ್ನಿ ಮಾಡ್ತಿದ್ದ ವೇಳೆ ಕರ್ನಾಟಕದ ಆಟಗಾರರು ಮೋಟಿವೇಶನ್​ಗಾಗಿ ರಾಜ್​ಕುಮಾರ್​ರ ಹಾಡುಗಳನ್ನ ಕೇಳ್ತಿದ್ರಂತೆ.

ಭಾರತದ ಕ್ರಿಕೆಟ್​ ತಂಡದ ಕನ್ನಡದ ಮಾಜಿ ಆಟಗಾರರು

ಅಣ್ಣಾವ್ರ ದೊಡ್ಡ ಅಭಿಮಾನಿಯಾಗಿದ್ದ ದೊಡ್ಡ ಗಣೇಶ್​, ಸೌತ್ ಆಫ್ರಿಕಾ ಟೂರ್​ಗೆ ಡಾ.ರಾಜ್​ಕುಮಾರ್ ಸಿನಿಮಾಗಳ ಹಾಡುಗಳ ಕ್ಯಾಸೆಟ್​​​ಗಳನ್ನೇ ತೆಗೆದುಕೊಂಡು ಹೋಗಿದ್ರಂತೆ. ಆಗ, ಗಣೇಶ್ ಬಳಿ ಕ್ಯಾಸೆಟ್​ ಕೊಂಡೊಯುತ್ತಿದ್ದ ಜಾವಗಲ್ ಶ್ರೀನಾಥ್​ ಸೇರಿದಂತೆ ಇತರೆ ಆಟಗಾರರು ವಾಪಸ್ ಕೊಡುತ್ತಿರಲೇ ಇಲ್ವಂತೆ. ಸಚಿನ್ ತೆಂಡೂಲ್ಕರ್ ಕೂಡ ರಾಜಕುಮಾರ್ ಹಾಡುಗಳಿಗೆ ಫಿದಾ ಆಗಿದ್ರಂತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದಲ್ಲಿ ಕನ್ನಡಿಗರದ್ದೇ ಹವಾ.. ಡಾ.ರಾಜ್​ಕುಮಾರ್ ಸಾಂಗ್​ಗಳಿಂದ ಫುಲ್ ಮೋಟಿವೇಶನ್

https://newsfirstlive.com/wp-content/uploads/2023/09/ANIL_KUMBLE.jpg

Load More