newsfirstkannada.com

ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಪಕ್ಕನಾ? ಏನಂದ್ರು ಗೊತ್ತಾ ಗೀತಾ ಶಿವರಾಜ್​ಕುಮಾರ್..?

Share :

21-06-2023

    ಮೊನ್ನೆ ಸಿದ್ದರಾಮಯ್ಯ, ಇವತ್ತು ಶಿವಕುಮಾರ್ ಭೇಟಿ

    ಕುತೂಹಲ ಮೂಡಿಸಿದೆ ಶಿವಣ್ಣ ದಂಪತಿಯ ಭೇಟಿ

    ಗೀತಾ ಚುನಾವಣೆ ಸ್ಪರ್ಧೆ ಬಗ್ಗೆ ಶಿವಣ್ಣ ಏನಂದ್ರು..?

ಬೆಂಗಳೂರು: ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಗೀತಾ ಶಿವರಾಜ್​ ಕುಮಾರ್ ದಂಪತಿ ಇವತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅನ್ನು ಭೇಟಿ ಮಾಡಿತು.

ಭೇಟಿ ಮಾಡಿ ವಾಪಸ್ ಆಗುತ್ತಿದ್ದಂತೆಯೇ ಶಿವಣ್ಣ ದಂಪತಿಗೆ ಮಾಧ್ಯಮಗಳು ಎದುರಾದವು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀರಿ ಎಂದ ಮಾತುಗಳು ಕೇಳಿಬರುತ್ತಿದೆ. ಇದೇ ವಿಚಾರಕ್ಕೆ ನೀವು ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದೀರಾ? ಎಂದು ಗೀತಾ ಶಿವರಾಜ್​ಕುಮಾರ್​​ ಅವರನ್ನು ಕೇಳಿದವು.

ಅದಕ್ಕೆ ಉತ್ತರಿಸಿದ ಗೀತಾ ಶಿವರಾಜ್​ಕುಮಾರ್, ಹಾಗೇನೂ ಇಲ್ಲ. ಇದೊಂದು ಸೌಜನ್ಯದ ಭೇಟಿ. ಅವರು ಉಪಮುಖ್ಯಮಂತ್ರಿಯಾದ ಮೇಲೆ ಭೇಟಿಯಾಗಲು ಆಗಿರಲಿಲ್ಲ. ನಾನು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡುವುದನ್ನು ನಿರ್ಧರಿಸಬೇಕಾಗಿರೋದು ನಾನಲ್ಲ. ಚುನಾವಣಾಗೆ ಸಿದ್ಧತೆ ಅಂತ ಏನಿಲ್ಲ. ಪಕ್ಷ ಹಾಗೂ ನನ್ನ ಸಹೋದರ ಪ್ರಾಥಮಿಕ ನಿರ್ಧಾರ ಮಾಡಬೇಕು ಎಂದಿದ್ದಾರೆ.

ಇದೇ ವೇಳೆ ಶಿವಣ್ಣ ಮತನಾಡಿ.. ಇದು ಸೌಜನ್ಯ ಭೇಟಿ ಅಷ್ಟೇ, ಮೊನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಇವರನ್ನು ಭೇಟಿ ಮಾಡಲು ಆಗಿರಲಿಲ್ಲ. ತಮಿಳು ಸಿನಿಮಾ ಶೂಟಿಂಗ್ ಇತ್ತು ಹೋಗಿದ್ದೆ. ಡಿ.ಕೆ.ಶಿವಕುಮಾರ್ ನನಗೆ ತುಂಬಾ ಚೆನ್ನಾಗಿ ಗೊತ್ತು ಎಂದರು. ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಚುನವಾಣೆ ಸ್ಪರ್ಧೆ ಬಗ್ಗೆ ಮಾತನಾಡಿ, ಆ ವಿಚಾರ ನನಗೆ ಏನೂ ಗೊತ್ತಿಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಪಕ್ಕನಾ? ಏನಂದ್ರು ಗೊತ್ತಾ ಗೀತಾ ಶಿವರಾಜ್​ಕುಮಾರ್..?

https://newsfirstlive.com/wp-content/uploads/2023/06/SHIVANNA.jpg

Load More