newsfirstkannada.com

ಸಚಿನ್​ ದ್ವಿಶತಕ ಬಾರಿಸುವ ಹೊತ್ತಲ್ಲೇ ಪಂದ್ಯ ಡಿಕ್ಲೇರ್​ ಮಾಡಿದ ದ್ರಾವಿಡ್! ಇದಕ್ಕೆ ಕೊಟ್ಟ ಸ್ಪಷ್ಟನೆ ಏನ್​ ಗೊತ್ತಾ?

Share :

11-08-2023

  ಮುಲ್ತಾನ್​ ಟೆಸ್ಟ್​ನಲ್ಲಿ ತೆಂಡೂಲ್ಕರ್ 194 ರನ್​ ಬಾರಿಸಿದ್ರು ​

  ಸಚಿನ್​ 200ರ ಸನಿಹದಲ್ಲಿದ್ದಾಗ ಇನ್ನಿಂಗ್ಸ್​​​ ಡಿಕ್ಲೆರ್ ಮಾಡಿದ್ರು

  ಸಚಿನ್​ ಬಳಿ ತೆರಳಿ ದ್ರಾವಿಡ್​ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಮುಲ್ತಾನ್​ ಟೆಸ್ಟ್​ನಲ್ಲಿ ಸಚಿನ್​ ತೆಂಡುಲ್ಕರ್​​ 194 ರನ್​ಗಳಿಸಿದ್ದಾಗ ಕ್ಯಾಪ್ಟನ್​ ರಾಹುಲ್​ ದ್ರಾವಿಡ್​​ ಇನ್ನಿಂಗ್ಸ್​​​ ಡಿಕ್ಲೆರ್​ ಮಾಡಿದ್ಯಾಕೆ.? ಕ್ರಿಕೆಟ್ ಅಭಿಮಾನಿಗಳನ್ನ​ ಇಂದಿಗೂ ಕಾಡ್ತಿರೋ ಮಿಲಿಯನ್​ ಡಾಲರ್​ ಪ್ರಶ್ನೆಯಿದು. ಈ ಪ್ರಶ್ನೆಗೆ ದ್ರಾವಿಡ್​ ಉತ್ತರ ಏನು ಗೊತ್ತಾ? ಈ ಸ್ಟೋರಿ ಗಮನವಿಟ್ಟು ಓದಿ.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​, ದಿ ವಾಲ್​ ರಾಹುಲ್​ ದ್ರಾವಿಡ್​​. ಕ್ರಿಕೆಟ್​ ಲೋಕ ಕಂಡ ಶ್ರೇಷ್ಠ ಆಟಗಾರರು. ಟೀಮ್​ ಇಂಡಿಯಾದ ಅದೆಷ್ಟೋ ಗೆಲುವುಗಳಲ್ಲಿ ಸಚಿನ್​ – ದ್ರಾವಿಡ್​ ಪಾತ್ರ ಮಹತ್ವದ್ದು. ಇವರಿಬ್ಬರಿಗಿದ್ದ determination, dedication, discipline ಇಂದಿಗೂ ಯುವ ಕ್ರಿಕೆಟಿಗರಿಗೆ ಪಾಠ. ಆನ್​ ಫೀಲ್ಡ್​​ನ ಆಟದ ಹೊರತಾಗಿ ಇವರಿಬ್ಬರೂ ಜೀವದ ಗೆಳೆಯರು. ಇಂಥಾ ಜೀವದ ಗೆಳೆಯರ ಮಧ್ಯೆ ಈ ಹಿಂದೆ ಒಂದು ಕಾರಣಕ್ಕೆ ಸಣ್ಣ ಮನಸ್ತಾಪ ಬಂದಿದ್ದು. ಅಭಿಮಾನಿಗಳಿಗಂತೂ ಇಂದಿಗೂ ಅದು ಮಿಲಯನ್​ ಡಾಲರ್​ ಪ್ರಶ್ನೆಯಾಗಿದೆ.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್
ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್- ರಾಹುಲ್ ದ್ರಾವಿಡ್

ಇನ್ನಿಂಗ್ಸ್​​ ಡಿಕ್ಲೆರ್​ ಮಾಡಿ ಶಾಕ್​ ನೀಡಿದ್ರು

ಅದು ಭಾರತ – ಪಾಕಿಸ್ತಾನ ನಡುವಿನ ಟೆಸ್ಟ್​ ಪಂದ್ಯ. ಮುಲ್ತಾನ್​ನಲ್ಲಿ ನಡೀತಾ ಇದ್ದ ಟೆಸ್ಟ್​ ಪಂದ್ಯದ 2ನೇ ದಿನದಾಟದಲ್ಲಿ ಸಚಿನ್​ ತೆಂಡುಲ್ಕರ್​​ 194 ರನ್​ಗಳಿಸಿ ಬ್ಯಾಟಿಂಗ್​ ಮಾಡ್ತಿದ್ರು. ಮಾಸ್ಟರ್​ ಬ್ಲಾಸ್ಟರ್​ ದ್ವಿಶತಕ ಸಿಡಿಸೋದನ್ನ ನೋಡಿಕೊಳ್ಳಲು ಅಭಿಮಾನಿಗಳು ಕಾತರಾಗಿದ್ರು. ಆದರೆ, ಇದಕ್ಕಿದ್ದಂತೆ ಕ್ಯಾಪ್ಟನ್​ ರಾಹುಲ್​ ದ್ರಾವಿಡ್​ ಇನ್ನಿಂಗ್ಸ್​​ ಡಿಕ್ಲೆರ್​ ಮಾಡಿ ಶಾಕ್​ ನೀಡಿಬಿಟ್ರು. ಸಚಿನ್​ ಡಬಲ್​ ಸೆಂಚುರಿಗೆ 6 ರನ್​ ಬೇಕಿದ್ದಾಗ ದ್ರಾವಿಡ್​ ಇನ್ನಿಂಗ್ಸ್​ ಡಿಕ್ಲೆರ್​ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯ್ತು. ಸಚಿನ್​ ತೆಂಡುಲ್ಕರ್​ ಕೂಡ ಬೇಸರ ಹೊರಹಾಕಿದ್ರು.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್
ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್

ಸ್ಪಷ್ಟನೆ ನೀಡಿದ ದ್ರಾವಿಡ್​

ವರ್ಷಗಳ ಬಳಿಕ ಅಂದು ಡಿಕ್ಲೆರ್​​ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ದ್ರಾವಿಡ್​ ನೀಡಿದ ಉತ್ತರ ಟೀಮ್​ ಗೇಮ್​ಪ್ಲಾನ್​.! ಅವತ್ತಿನ ದಿನದಾಟದ ಕೊನೆಯ 1 ಗಂಟೆ ಪಾಕಿಸ್ತಾನಕ್ಕೆ ನೀಡಬೇಕು ಅನ್ನೋದು ಟೀಮ್ ಮ್ಯಾನೇಜ್​ಮೆಂಟ್​ ಗೇಮ್ ​ಪ್ಲಾನ್​ ಆಗಿತ್ತಂತೆ. ಆಗ, ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೇಮ್​ ಪ್ಲಾನ್​ ಮುಖ್ಯ ಎಂಬ ನಿಲುವು ತಳೆದು ಕ್ಯಾಪ್ಟನ್​ ದ್ರಾವಿಡ್​ ಇನ್ನಿಂಗ್ಸ್​ ಡಿಕ್ಲೆರ್​ ಮಾಡಿದ್ರಂತೆ. ಇಷ್ಟೇ ಅಲ್ಲ ಆ ಬಳಿಕ ಬೇಸರಗೊಂಡಿದ್ದ ಸಚಿನ್​ ಬಳಿ ತೆರಳಿಯೂ ಈ ಬಗ್ಗೆ ಸ್ಪಷ್ಟನೆ ನೀಡಿದ್ರಂತೆ. ಇದನ್ನ ಸಚಿನ್ ತಮ್ಮ​ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿನ್​ ದ್ವಿಶತಕ ಬಾರಿಸುವ ಹೊತ್ತಲ್ಲೇ ಪಂದ್ಯ ಡಿಕ್ಲೇರ್​ ಮಾಡಿದ ದ್ರಾವಿಡ್! ಇದಕ್ಕೆ ಕೊಟ್ಟ ಸ್ಪಷ್ಟನೆ ಏನ್​ ಗೊತ್ತಾ?

https://newsfirstlive.com/wp-content/uploads/2023/08/Sachin-Tendulkar-2.jpg

Load More