newsfirstkannada.com

ಪಾಕ್ ಗುಪ್ತಚರದ ಹನಿಟ್ರ್ಯಾಪ್​ಗೆ ಬಿದ್ದ DRDO ವಿಜ್ಞಾನಿ.. ಮಾಯಾಂಗನೆ ಮೋಹಕ್ಕೆ ಸಿಲುಕಿ ದೇಶದ ‘ಕ್ಷಿಪಣಿಗಳ ರಹಸ್ಯ’ವನ್ನೇ ಶತ್ರು ರಾಷ್ಟ್ರಕ್ಕೆ ಗುಟ್ಟಾಗಿಕೊಟ್ಟ!

Share :

08-07-2023

  ಮಹಾರಾಷ್ಟ್ರದ ATS ಚಾರ್ಜ್​​ಶೀಟ್​ನಲ್ಲಿ ಸ್ಫೋಟಕ ಆರೋಪ

  ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಏನೆಲ್ಲ ಗುಟ್ಟು ಬಿಟ್ಟಿದ್ದಾನೆ ಗೊತ್ತಾ?

  ದೇಶದ್ರೋಹಿ ವಿಜ್ಞಾನಿ ಪ್ರದೀಪ್ ಕರುಲ್ಕರ್ ಯಾರು..?

ಹೆಣ್ಣು, ಹೊನ್ನು, ಮಣ್ಣಿನ ಪಾಷಕ್ಕೆ ಸಿಲುಕಿ ಬಲಿಯಾದವರ ಕತೆ ಅದೆಷ್ಟೋ.. ದೊಡ್ಡ ದೊಡ್ಡ ಘಟಾನುಘಟಿಗಳು ಮೋಹದ ಬಲೆಗೆ ಸಿಲುಕಿ ಬದುಕನ್ನು ಕಳೆದುಕೊಂಡವರು ಲೆಕ್ಕಕ್ಕಿಲ್ಲ. ಹನಿಟ್ರ್ಯಾಪ್​​ನಂತಹ ಡೇಂಜರಸ್​ ಜಾಲಕ್ಕೆ ಬಿದ್ದು, ಮೇಲೆದ್ದು ಬರಲಾಗದೇ ಒದ್ದಾಡುತ್ತಿರುವವರ ಫಜೀತಿಗಳು ಕಣ್ಮುಂದೆಯೇ ಇವೆ. ಇದೀಗ ಆತಂಕದ ವಿಚಾರ ಏನೆಂದರೆ ಬದ್ಧ ವೈರಿ, ಪಾಕಿಸ್ತಾನ ನಮ್ಮ ವಿಜ್ಞಾನಿಯೊಬ್ಬರನ್ನು ಮೋಹದ ಜಾಲಕ್ಕೆ ಬೀಳಿಸಿ ಮಾಹಿತಿಗಳನ್ನು ಕದ್ದುಕೊಂಡಿದೆ. ಪಾಪಿ ಪಾಕ್​ ಈ ರೀತಿಯ ಹೊಲಸು ಕೆಲಸ ನಮ್ಮ ದೇಶದ ಭದ್ರತೆಗೆ ದೊಡ್ಡ ಆತಂಕವನ್ನೇ ತಂದೊಡ್ಡಿದೆ. ಶತ್ರು ರಾಷ್ಟ್ರದ ಇಂಥ ನೀಚ ಬುದ್ಧಿ ಒಳ್ಳೆಯದಲ್ಲ!

ಏನ್ ಕಥೆ ಇದು..?

ಪಾಕಿಸ್ತಾನದ ಗುಪ್ತಚರ ಇಲಾಖೆಯ ಜೊತೆಗೆ ರಹಸ್ಯ ನಂಟು ಹೊಂದಿರುವ ಆರೋಪದ ಮೇಲೆ DRDO (Defence Research and Development Organisation) ವಿಜ್ಞಾನಿ ಪ್ರದೀಪ್ ಕುರುಲ್ಕರ್​​​​ನನ್ನು ಮಹಾರಾಷ್ಟ್ರದ ಎಟಿಎಸ್ (Anti-Terrorism Squad) ಬಂಧಿಸಿತ್ತು. ಬಂಧಿಸುತ್ತಿದ್ದಂತೆಯೇ ಈತನ ವಿರುದ್ಧ ದೇಶದ್ರೋಹ ಕೇಸ್ ಕೂಡ ದಾಖಲಾಗಿತ್ತು. ಸಮಗ್ರ ತನಿಖೆ ನಡೆಸಿದ್ದ ಅಧಿಕಾರಿಗಳು, ಸ್ಪೆಷಲ್ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದು, ದೇಶದ ಡಿಫೆನ್ಸ್ ಪ್ರಾಜೆಕ್ಟ್ಸ್​ ವಿಚಾರಗಳನ್ನು ವಿರೋಧಿ ರಾಷ್ಟ್ರ ಪಾಕಿಸ್ತಾನದ ಜೊತೆ ಹಂಚಿಕೊಂಡಿರೋದು ಬಹಿರಂಗವಾಗಿದೆ. ಇದು ದೇಶದ ಭದ್ರತಾ ದೃಷ್ಟಿಯಿಂದ ಆತಂಕದ ವಿಚಾರವಾಗಿದೆ.

ಹೌದು, ಪಾಕಿಸ್ತಾನದ ಗುಪ್ತಚರ ಇಲಾಖೆಯ ಇಬ್ಬರು ಮಹಿಳಾ ಏಜೆಂಟ್​​ಗಳ ಜೊತೆ ಪ್ರದೀಪ್ ಕುರುಲ್ಕರ್ ಮಾಹಿತಿ ಹಂಚಿಕೊಂಡಿದ್ದಾನೆ. ಭಾರತದ ಕ್ಷಿಪಣಿ, ಡ್ರೋನ್ ಮತ್ತು ರೊಬೊಟಿಕ್ಸ್ ಪ್ರಾಜೆಕ್ಟ್​​ಗಳಂಥ ಮಹತ್ವದ ವಿಚಾರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾನೆ ಎಂದು ಚಾರ್ಜ್​ಶೀಟ್​ನಲ್ಲಿ ಆರೋಪಿಸಲಾಗಿದೆ.

ಚಾರ್ಜ್​ಶೀಟ್​ನಲ್ಲಿ ಏನಿದೆ..?

ದೋಷಾರೋಪ ಪಟ್ಟಿ ಪ್ರಕಾರ, ಪಾಕಿಸ್ತಾನಿ ಮಹಿಳಾ ಏಜೆಂಟ್​​ಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಕುರುಲ್ಕರ್ ಜೊತೆ ಸಂಪರ್ಕ ಸಾಧಿಸಲು ವಿವಿಧ ಹೆಸರುಗಳಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದರು. ಈ ಪೈಕಿ ಎರಡು ಹೆಸರುಗಳು, ಜರಾ ದಾಸ್‌ಗುಪ್ತಾ (‘Zara Dasgupta) ಮತ್ತು ಜೂಹಿ ಅರೋರಾ ಆಗಿದೆ. ಜರಾ ದಾಸ್‌ಗುಪ್ತಾ ಹೆಸರಲ್ಲಿ ಸೃಷ್ಟಿಯಾಗಿದ್ದ ಐಡಿಯಲ್ಲಿ, ತಾನು ಬ್ರಿಟನ್ ಸಾಫ್ಟ್​ವೇರ್ ಇಂಜಿನಿಯ್ ಎಂದು ಪ್ರದೀಪ್ ಬಳಿ ಹೇಳಿಕೊಂಡಿದ್ದಳು.

1837 ಪುಟಗಳ ಚಾರ್ಜ್ ಶೀಟ್‌

ಹೀಗೆ ಹೇಳಿಕೊಂಡು ಪ್ರದೀಪ್ ಜತೆ ಸ್ನೇಹ ಬೆಳೆಸಿದ್ದ ಜರಾ, ಬ್ರಹ್ಮೋಸ್ ಲಾಂಚರ್ (‘Zara Dasgupta), ಅಗ್ನಿ ಕ್ಷಿಪಣಿ ಲಾಂಚರ್ (Agni Missile Launcher) ಮತ್ತು ಮಿಲಿಟರಿ ಬಿಡ್ಡಿಂಗ್ ಸಿಸ್ಟಮ್ (Military Bridging System), ಡ್ರೋನ್ಸ್, ಯುಸಿವಿ ಸೇರಿದಂತೆ ಹಲವು ವಿಷಯಗಳ ಕುರಿತು ಪಾಕ್ ಏಜೆಂಟ್ ಮಾಹಿತಿ ಕೇಳಿದ್ದಳು. ಅದನ್ನು ಪ್ರದೀಪ್ ಕುರುಲ್ಕರ್ ಹಂಚಿಕೊಂಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಮಾತ್ರವಲ್ಲ, ಪ್ರದೀಪ್ ತನ್ನ ಕೆಲಸದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಅಂತಲೂ ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ. 1837 ಪುಟಗಳ ಚಾರ್ಜ್ ಶೀಟ್‌ನಲ್ಲಿ ಪಾಕಿಸ್ತಾನಿ ಏಜೆಂಟ್‌ಗಳು ‘ಅಗ್ನಿ-6 ಲಾಂಚರ್ ಪರೀಕ್ಷೆ ಯಶಸ್ವಿಯಾಗಿದೆಯೇ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಪ್ರದೀಪ್ ‘ಲಾಂಚರ್ ವಿನ್ಯಾಸವನ್ನು ಮಾಡಿದ್ದು ನಾನೇ. ಅದು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾನೆ. 2022 ಸೆಪ್ಟೆಂಬರ್​ನಿಂದ ಫೆಬ್ರವರಿ 2023ರ ನಡುವೆ ಮಾತುಕತೆ ನಡೆದಿದೆ ಎಂದು ಚಾರ್ಜ್​​ಶೀಟ್​ನಲ್ಲಿ ತಿಳಿಸಲಾಗಿದೆ. 2023, ಫೆಬ್ರವರಿವರೆಗೆ ವಾಟ್ಸ್​​ಆ್ಯಪ್​ ಮೂಲಕ ವಿಡಿಯೋ ಕಾಲ್, ವೈಸ್​ ಕಾಲ್​ ನಡೆಯುತ್ತಿತ್ತು. ಫೆಬ್ರವರಿ ಬಳಿಕ ಪ್ರದೀಪ್, ಪಾಕ್ ಏಜೆಂಟ್​​ ನಂಬರ್ ಬ್ಲಾಕ್ ಮಾಡಿದ್ದ. ಬ್ಲಾಕ್ ಮಾಡಿದ ಬೆನ್ನಲ್ಲೇ ಯಾಕೆ ನನ್ನ ನಂಬರ್ ಬ್ಲಾಕ್ ಮಾಡಿದ್ದೀರಿ ಎಂದು ಪಾಕ್ ಏಜೆಂಟ್ ಪ್ರಶ್ನೆ ಮಾಡಿದ್ದಳು ಎಂದು ಚಾರ್ಚ್​​ಶೀಟ್​ನಲ್ಲಿ ಆರೋಪಿಸಲಾಗಿದೆ.

ಯಾರು ಈ ಪ್ರದೀಪ್ ಕುರುಲ್ಕರ್​..?

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಮೇ 3 ರಂದು ಪ್ರದೀಪ್ ಕುರುಲ್ಕರ್​​ನನ್ನು ಬಂಧಿಸಿತ್ತು. ಬೇಹುಗಾರಿಕೆ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆಯ ಹನಿಟ್ರ್ಯಾಪ್ ಶಂಕೆ ಮೇರೆಗೆ ಬಂಧಿಸಿ ವಿಚಾರಣೆ ನಡೆಸಿತ್ತು. ಅಂದ್ಹಾಗೆ ಈ ಕುರುಲ್ಕರ್, DRDOನ ದೊಡ್ಡ ವಿಜ್ಞಾನಿಗಳಲ್ಲಿ ಒಬ್ಬ. ಈತ ದೇಶದ ರಕ್ಷಣಾ ವ್ಯವಸ್ಥೆಯ ದೊಡ್ಡ, ದೊಡ್ಡ ಯೋಜನೆಗಳ ಭಾಗವಾಗಿದ್ದಾನೆ. ರಕ್ಷಣಾ ಕ್ಷಿಪಣಿಗಳ ಬಗ್ಗೆ ಪಳಗಿರುವ ಈತ, ಲಾಂಚರ್ ಆಗಿ ಹೆಸರು ಮಾಡಿದ್ದಾನೆ. ದೇಶದ ಶಸ್ತ್ರಾಗಾರದಲ್ಲಿರುವ ಬಹುತೇಕ ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದಾನೆ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್ ಗುಪ್ತಚರದ ಹನಿಟ್ರ್ಯಾಪ್​ಗೆ ಬಿದ್ದ DRDO ವಿಜ್ಞಾನಿ.. ಮಾಯಾಂಗನೆ ಮೋಹಕ್ಕೆ ಸಿಲುಕಿ ದೇಶದ ‘ಕ್ಷಿಪಣಿಗಳ ರಹಸ್ಯ’ವನ್ನೇ ಶತ್ರು ರಾಷ್ಟ್ರಕ್ಕೆ ಗುಟ್ಟಾಗಿಕೊಟ್ಟ!

https://newsfirstlive.com/wp-content/uploads/2023/07/DRDO-1.jpg

Load More