ಪಾದಚಾರಿಗೆ ಗುದ್ದಿ ಹಲ್ಲೆಗೆ ಯತ್ನಿಸಿದ್ದ ಚಾಲಕನಿಗೆ ಧರ್ಮದೇಟು
ಕುಡಿದ ಮತ್ತಿನಲ್ಲಿ ಡಿಕ್ಕಿ ಹೊಡೆದು ಅವಾಚ್ಯ ಶಬ್ದಗಳ ನಿಂದನೆ..!
ಜಯನಗರ ಸಂಚಾರಿ ಪೊಲೀಸರಿಂದ ಚಾಲಕನ ವಿರುದ್ದ ಕೇಸ್
ಬೆಂಗಳೂರು: ಚಾಲಕನೋರ್ವ ಕುಡಿದು ವಾಹನ ಚಲಾಯಿಸಿದ್ದಲ್ಲದೇ ಪಾದಚಾರಿಗೆ ಕಾರಿನಿಂದ ಡಿಕ್ಕಿ ಹೊಡೆದಿರೋ ಘಟನೆ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಜಂಕ್ಷನ್ ಬಳಿ ನಡೆದಿದೆ. ಈ ಪ್ರಕರಣ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಬಳಿಕ ಕಾರಿನಿಂದ ಇಳಿದು ಪಾದಚಾರಿ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಚಾಲಕನ ದುಂಡಾವರ್ತನೆ ಪ್ರಶ್ನಿಸಿದಕ್ಕೆ ಸ್ಥಳೀಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗುತ್ತಿದ್ದಂತೆ ಸುತ್ತ ಮುತ್ತಲಿನ ಜನ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಕುಡುಕ ಕಾರು ಚಾಲಕನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಜಯನಗರ ಸಂಚಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಶೆಯಲ್ಲಿದ್ದ ಕಾರು ಚಾಲಕ ವಿಷ್ಣು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿ ಕಾರು ಚಾಲಕ ವಿಷ್ಣು ವಿರುದ್ಧ ಡ್ರಿಂಕ್ ಡ್ರೈವ್, ರ್ಯಾಶ್ ಡ್ರೈವಿಂಗ್, ಅನುಚಿತ ವರ್ತನೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
ಜೆಪಿ ನಗರದ ದಾಲ್ಮಿಯಾ ಸರ್ಕಲ್ನಲ್ಲಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕಿರಿಕ್ ಮಾಡಿಕೊಂಡಿದ್ದಾನೆ. ಕುಡಿದು ಕಾರು ಚಾಲಾಯಿಸಿಕೊಂಡು ಬಂದ ಯುವಕ ಸುಖಾಸುಮ್ಮನೆ ಸಾರ್ವಜನಿಕರ ಜೊತೆ ಗಲಾಟೆ ಮಾಡಿದ್ದಾನೆ.#newsfirstkannada #kannadanews #newsfirstlive #fight #Bangalore pic.twitter.com/jnDUtyIPMA
— NewsFirst Kannada (@NewsFirstKan) August 3, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ