newsfirstkannada.com

Video: ಕುಡಿದು ನಡುರಸ್ತೆಯಲ್ಲೇ ರಂಪಾಟ ಮಾಡಿದ ಯುವತಿ.. ಪೊಲೀಸರು ಹೈರಾಣು

Share :

06-08-2023

    ಕುಡಿದು ಪೊಲೀಸರ ಮೇಲೆ ಕೈ ಮಾಡಲು ಬಂದ ಯುವತಿ

    ಬುದ್ದಿ ಹೇಳೋದಕ್ಕೆ ಹೋದವರ ಮೇಲೆ ಯುವತಿಯ ರಂಪಾಟ

    ಕುಡಿದ ನಶೆಗೆ ಚರ್ಚ್ ಸ್ಟ್ರೀಟ್​ನಲ್ಲಿ ಯುವತಿಯ ಡ್ರಾಮಾ

ಯುವತಿಯೊಬ್ಬಳು ತಡರಾತ್ರಿ ಮದ್ಯದ ನಶೆಯಲ್ಲಿ ಪೊಲೀಸರಿಗೆ ಮತ್ತು ದಾರಿಹೋಕರಿಗೆ ಕಿರಿಕ್​ ಮಾಡಿದ ಘಟನೆ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿದೆ. ಯುವತಿಯ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕುಡಿದ ನಶೆಯಲ್ಲಿದ್ದ ಯುವತಿಗೆ ಬುದ್ದಿ ಹೇಳೋದಕ್ಕೆ ಹೋದವರ ಮೇಲೆ ಮುಗಿಬಿದ್ದಿದ್ದಾಳೆ. ಈಕೆಯ ಸಂಬಾಳಿಸೋದಕ್ಕೆ ಆಗದೇ ಪೊಲೀಸರೇ ಹೈರಾಣಾಗಿದ್ದಾರೆ.  ಮಹಿಳಾ ಸಿಬ್ಬಂದಿ ಇಲ್ಲದೆ ಯುವತಿಯನ್ನ ಆಟೋದಲ್ಲಿ ಕುರಿಸಲು ಪೊಲೀಸರು ಪರದಾಡಿದ್ದಾರೆ.

ಯುವತಿ ಪೊಲೀಸರ ಮನವಿಗೂ ಕೇರ್ ಮಾಡದೇ ರಂಪಾಟ ಮಾಡಿದ್ದಲ್ಲದೆ, ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾಳೆ. ಈ ದೃಶ್ಯ ಕೂಡ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಬೇರೆ ಯುವತಿಯರ ಸಹಾಯದಿಂದ ಮನೆಗೆ ಕಳಿಸಲು ಪೊಲೀಸರು ಪ್ರಯತ್ನ ಮಾಡಿದ್ದಾರೆ. ಆದರೆ ಸಹಾಯಕ್ಕೆ ಬರುತ್ತಿದ್ದ ಯುವತಿಯರ ಮೇಲೆ ಆಕೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ.

ಇನ್ನು ಯುವತಿ ಎಣ್ಣೆ ಮತ್ತಲ್ಲಿ ಬಾಯಿ ಬಂದ ಹಾಗೆಯೇ ಮಾತನಾಡುತ್ತಾ, ಸಿಕ್ಕ ಸಿಕ್ಕವರ ಜೊತೆಗೆ ಗಲಾಟೆ ಮಾಡಿದ್ದಾಳೆ. ಬಳಿಕ ಒಂದು ಗಂಟೆ ಸತತ ಪ್ರಯತ್ನದಿಂದ ಕೊನೆಗೂ ಆಟೋದಲ್ಲಿ ಕಳಿಸಿಕೊಡುವಲ್ಲಿ ಪೊಲೀಸರು ಮತ್ತು ಸ್ಥಳೀಯರು ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕುಡಿದು ನಡುರಸ್ತೆಯಲ್ಲೇ ರಂಪಾಟ ಮಾಡಿದ ಯುವತಿ.. ಪೊಲೀಸರು ಹೈರಾಣು

https://newsfirstlive.com/wp-content/uploads/2023/08/Church-Street.jpg

Load More