ಈ ವಿಚಿತ್ರ ಆಚರಣೆ ಎಲ್ಲಿ ನಡೀತು ಗೊತ್ತಾ..?
ರಾಜ್ಯದಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ
ಮುಂಗಾರು ಮಳೆ ಬಾರದೇ ಏನೇನ್ ಆಗ್ತಿದೆ ರಾಜ್ಯದಲ್ಲಿ?
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ಹನಿ ನೀರಿಗಾಗಿ ಜನ ಪರದಾಟ ನಡೆಸ್ತಿದ್ದಾರೆ. ನದಿ-ತೊರೆಗಳು ಬತ್ತಿ ಹೋಗಿವೆ. ಟ್ಯಾಂಕರ್ ನೀರು ಸಾಲುತ್ತಿಲ್ಲ. ಬೋರ್ವೆಲ್ಗಳು ಕೆಟ್ಟು ಹೋಗಿವೆ. ಮಳೆಗಾಗಿ ಎಲ್ಲೆಡೆ ಪೂಜೆ-ಪ್ರಾರ್ಥನೆಗಳು ನಡೆಯುತ್ತಿವೆ.
ಉಯ್ಯೋ ಉಯ್ಯೋ ಮಳೆರಾಯ. ಹೂವಿನ ತೋಟಕ್ಕೆ ನೀರಿಲ್ಲ ಎಂಬ ಕವಿವಾಣಿಯಂತೆ ಕರುನಾಡಿನ ರೈತರು ಮಳೆಗಾಗಿ ಆಕಾಶದತ್ತ ನೋಡುತ್ತಾ ಕುಳಿತಿದ್ದಾರೆ. ಸಕಾಲಕ್ಕೆ ಮುಂಗಾರು ಮಳೆ ಬಾರದೇ ಜಲಸಂಕಷ್ಟ ಎದುರಾಗಿದೆ. ಜೀವಜಲಕ್ಕಾಗಿ ಜನ-ಜಾನುವಾರುಗಳು ಪರದಾಟ ನಡೆಸ್ತಿರುವ ವಾತಾವರಣ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಜನ ಜಲಮೂಲಗಳನ್ನು ಹುಡುಕುತ್ತಿದ್ದಾರೆ. ಕಾವೇರಿ, ಕೃಷ್ಣೆಯಂತಹ ಪ್ರಮುಖ ನದಿಗಳು ಹರಿಯುವ ಕರ್ನಾಟಕದಲ್ಲಿ ಬರದ ಕಾರ್ಮೋಡ ಮೂಡಿದೆ.
ಕರ್ನಾಟಕದಲ್ಲಿ ಬರದ ಗೆರೆ.. ನೀರಿಗಾಗಿ ಹಾಹಾಕಾರ..!
ಗಣಿನಾಡು ಬಳ್ಳಾರಿ ಜಿಲ್ಲೆಗೆ ಮಳೆಯಿಲ್ಲದೇ ಬರದ ಛಾಯೆ ಆವರಿಸಿದೆ. ಸಿರಗುಪ್ಪ ತಾಲೂಕಿನ ಊಳೂರು ಗ್ರಾಮದ ಜನತೆ ವೇದಾವತಿ ನದಿಯ ಮಧ್ಯದಲ್ಲಿ ಅಗೆದು ನೀರು ಸಂಗ್ರಹ ಮಾಡ್ತಿದ್ದಾರೆ. ಕೆಲಸ-ಕಾರ್ಯಗಳನ್ನು ಬಿಟ್ಟು ಮಹಿಳೆಯರು ಹಾಗೂ ಪುರುಷರು, ಶಾಲೆಗೆ ಹೋಗದೇ ಮಕ್ಕಳು ಕುಡಿಯುವ ನೀರಿಗಾಗಿ ದಿನವಿಡೀ ಕಾದು ಕುಳಿತುಕೊಳ್ಳುವಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ರೂ ಒಂದು ಕ್ಯಾನ್ಗೆ 5ರೂ. ಇದ್ರೂ ಕೊಡಲಾರದ ಪರಿಸ್ಥಿತಿ ಇದೆ.. ಗ್ರಾಮಸ್ಥರು ತುಂಬಿದ ಕೊಡ ಹೊತ್ತು ಕಿಲೋಮೀಟರ್ಗಟ್ಟಲೇ ನಡೆದು ಬರುತ್ತಿರುವ ದೃಶ್ಯಗಳು ಕಂಡು ಬರ್ತಿವೆ.
ಕರುಣೆ ತೋರದ ವರುಣ.. ಕುಂದಾನಗರಿಯ ಜನ ಹೈರಾಣ!
ಅತ್ತ ಕುಂದಾನಗರಿ ಬೆಳಗಾವಿ ಜಿಲ್ಲೆಯ ಸ್ಥಿತಿಯಂತೂ ಹೇಳತೀರದಾಗಿದೆ. ಮುಂಗಾರು ವಿಳಂಬದಿಂದಾಗಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೂ ನೀರಿನ ಭವಣೆ ಇನ್ನಿಲ್ಲದಂತೆ ಕಾಡ್ತಿದೆ. ಹಾಸ್ಟೆಲ್ನಲ್ಲಿ 260ಕ್ಕೂ ಹೆಚ್ಚು ಮಕ್ಕಳಿದ್ದು ಟ್ಯಾಂಕರ್ ನೀರು ಸಾಕಾಗುತ್ತಿಲ್ಲ. ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆಯಲು ಮುಂದಾಗಿದ್ದಾರೆ.
ರಾಮನಗರದ ಜನತೆಗೆ ಕಲುಷಿತ ನೀರಿನ ಕಂಟಕ!
ಒಂದ್ಕಡೆ ನೀರಿಲ್ಲದೇ ಜನ ಪರದಾಡ್ತಿದ್ರೆ ಇತ್ತ ರಾಮನಗರದ 12 ವಾರ್ಡ್ಗಳಿಗೆ ಕಲುಷಿತ ನೀರಿನ ಕಂಟಕ ಎದುರಾಗಿದೆ. ಕಲುಷಿತ ನೀರು ಕುಡಿದು ಜನ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅರ್ಕಾವತಿ ನದಿಯ ಕಲುಷಿತ ನೀರನ್ನ ಶುದ್ಧೀಕರಣ ಮಾಡಿ ಪೂರೈಕೆ ಮಾಡಲಾಗ್ತಿದೆ. ಕೊಳಚೆ ನೀರು, ಕಾರ್ಖಾನೆಗಳ ರಾಸಾಯನಿಕ ಕೂಡ ನದಿ ಸೇರ್ತಿದ್ದು ಇದೇ ನೀರನ್ನು ನಗರಸಭೆ ಪೂರೈಕೆ ಮಾಡ್ತಿರೋದ್ರಿಂದ ಜನ ಸಂಕಷ್ಟ ಎದುರಿಸುವಂತಾಗಿದೆ.
ವಿಜಯಪುರದಲ್ಲಿ ಮಳೆಗಾಗಿ ವಿಚಿತ್ರ ಆಚರಣೆ!
ಅತ್ತ ಗುಮ್ಮಟನಗರಿ ವಿಜಯಪುರದಲ್ಲಿ ಮಳೆ ಬಾರದೇ ಜನ ಸಂಕಷ್ಟ ಅನುಭವಿಸುವಂತಾಗಿದೆ. ತಾಳಿಕೋಟೆಯ ಕಲಕೇರಿ ಗ್ರಾಮದ ಜನ ಮಳೆಗಾಗಿ ಶವ ಹೂತಿದ್ದ ಜಾಗಕ್ಕೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಟ್ಯಾಂಕರ್ ಮೂಲಕ ಗೋರಿಯಲ್ಲಿನ ಶವಗಳ ಬಾಯಿಗೆ ನೀರು ಹಾಕಿದ್ದಾರೆ. ಮುಂಗಾರು ಮಳೆ ಬಾರದಿರೋದಕ್ಕೆ ಗ್ರಾಮಸ್ಥರು ವಿಚಿತ್ರ ಆಚರಣೆ ಮೂಲಕ ಪ್ರಾರ್ಥಿಸಿದ್ದಾರೆ.
ವಿಜಯಪುರದಲ್ಲಿ ಮಳೆ ಬಾರದೇ ಜನ ಸಂಕಷ್ಟ ಅನುಭವಿಸುವಂತಾಗಿದೆ. ತಾಳಿಕೋಟೆಯ ಕಲಕೇರಿ ಗ್ರಾಮದ ಜನ ಮಳೆಗಾಗಿ ಶವ ಹೂತಿದ್ದ ಜಾಗಕ್ಕೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಟ್ಯಾಂಕರ್ ಮೂಲಕ ಗೋರಿಯಲ್ಲಿನ ಶವಗಳ ಬಾಯಿಗೆ ನೀರು ಹಾಕಿದ್ದಾರೆ. ಮುಂಗಾರು ಮಳೆ ಬಾರದಿರೋದಕ್ಕೆ ಗ್ರಾಮಸ್ಥರು ವಿಚಿತ್ರ ಆಚರಣೆ ಮೂಲಕ ಪ್ರಾರ್ಥಿಸಿದ್ದಾರೆ. #Rain… pic.twitter.com/PnVC9eDSKv
— NewsFirst Kannada (@NewsFirstKan) June 26, 2023
ಬಾಗಲಕೋಟೆಯಲ್ಲಿ ಮಳೆಗಾಗಿ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ!
ಅತ್ತ ಬಾಗಲಕೋಟೆಯ ಹೊಸೂರು ಗ್ರಾಮದಲ್ಲಿ ಮಳೆಗಾಗಿ ಮುಸ್ಲಿಂಬಾಂಧವರು ವಿಶೇಷ ಪಾರ್ಥನೆ ಸಲ್ಲಿಸಿದ್ದಾರೆ. ಮಳೆ ಬರಲೆಂದು ಈದ್ಗಾ ಮೈದಾನದಲ್ಲಿರುವ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬತ್ತದಿರಲಿ ನೀರು. ಬಾಡದಿರಲಿ ಬದುಕು ಎನ್ನುವುದು ಸರ್ಕಾರದ ಘೋಷಣೆಯಾಗಿದೆ. ಮುಂಗಾರು ಮಳೆ ವಿಳಂಬದಿಂದ ಜನ ತೊಂದ್ರೆ ಅನುಭವಿಸ್ತಿದ್ದಾರೆ. ಭಾರತದ ಮಳೆ ಮಾನ್ಸೂನ್ನೊಂದಿಗೆ ಆಡುವ ಜೂಜಾಟದಲ್ಲಿ ಜನ ಹೈರಾಣಾಗಿದ್ದಾರೆ. ಈಗಲೂ ಮಳೆ ಬಾರದಿದ್ರೆ ಆ ದೇವರೇ ಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ