newsfirstkannada.com

VIDEO: ರಿವರ್ಸ್ ಗೇರ್ ಹಾಕೋ ಬದಲು ಪ್ಲಾಟ್ ಫಾರಂ ಮೇಲೆ ಬಸ್ ಹತ್ತಿಸಿದ ಡ್ರೈವರ್; ಮೂವರ ಸಾವು

Share :

07-11-2023

    ಪ್ಲಾಟ್ ಫಾರಂ ಮೇಲೆ ಹತ್ತಿದ APSRTC AC ಮೆಟ್ರೋ ಲಕ್ಷುರಿ ಬಸ್

    ಬಸ್‌ ನಿಲ್ದಾಣದ ಸಿಸಿಟಿವಿಯಲ್ಲಿ ದುರ್ಘಟನೆಯ ಭಯಾನಕ ದೃಶ್ಯ

    ಸುಮ್ಮನೆ ಕುಳಿತಿದ್ದವರ ಮೇಲೆ ಹತ್ತಿಸಿದ ಮೆಟ್ರೋ ಲಕ್ಷುರಿ ಬಸ್‌ ಚಾಲಕ

ವಿಜಯವಾಡ: ಪ್ಲಾಟ್‌ ಫಾರಂನಲ್ಲಿ ಕೂತಿದ್ದವರ ಮೇಲೆ ಡ್ರೈವರ್‌ ಬಸ್ ಹತ್ತಿಸಿರೋ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಜಯವಾಡ ಬಸ್‌ ನಿಲ್ದಾಣದಲ್ಲಿ ಸಾರಿಗೆ ಬಸ್ ಚಾಲಕ ರಿವರ್ಸ್ ಗೇರ್ ಹಾಕುವ ಬದಲು ಪ್ಲಾಟ್ ಫಾರಂ ಮೇಲೆ ಹತ್ತಿಸಿದ್ದಾನೆ. ಪ್ಲಾಟ್‌ಫಾರಂನಲ್ಲಿ ಕುಳಿತಿದ್ದ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಪ್ಲಾಟ್‌ ಫಾರಂನಲ್ಲಿ ಕಾದು ಕುಳಿತಿದ್ದವರಿಗೆ ಈ ಬಸ್‌ ಯಮಸ್ವರೂಪಿಯಾಗಿ ಬಂದಿದೆ. ಬಸ್‌ ನಿಲ್ದಾಣದ ಸಿಸಿಟಿವಿಯಲ್ಲಿ ದುರ್ಘಟನೆಯ ಭಯಾನಕ ದೃಶ್ಯ ಸೆರೆಯಾಗಿದೆ. ಸುಮ್ಮನೆ ಕುಳಿತಿದ್ದವರ ಮೇಲೆ ರಭಸವಾಗಿ ಹತ್ತಿಸಿದ ಬಸ್‌ ಚಾಲಕ ಮೂವರ ಸಾವಿಗೆ ಕಾರಣವಾಗಿದ್ದಾನೆ. ಅದೃಷ್ಟವಶಾತ್ ಸಾರಿಗೆ ಬಸ್‌ನ ಒಳಗೆ 24 ಮಂದಿ ಪ್ರಯಾಣಿಕರು ಇದ್ದರು. ಅವರು ಈ ದುರ್ಘಟನೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕಳೆದ ನವೆಂಬರ್ 6ರಂದೇ ವಿಜಯವಾಡ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ಲಾಟ್ ಫಾರಂ ಮೇಲೆ ಬಸ್‌ ಹತ್ತಿರೋ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ನೋಡಲು ಭೀಕರವಾಗಿದ್ದು, APSRTC ಹಿರಿಯ ಅಧಿಕಾರಿಗಳು ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಇಲಾಖೆಯೇ ಭರಿಸುವುದಾಗಿ ಹೇಳಿದೆ.

ಬಸ್ ಅಪಘಾತಕ್ಕೆ ಕಾರಣವೇನು?

ವಿಜಯವಾಡದ ಪಂಡಿತ್ ನೆಹರು ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 12ರಲ್ಲಿ ಈ ಘಟನೆ ನಡೆದಿದೆ. ನಿಂತಿದ್ದ APSRTC AC ಮೆಟ್ರೋ ಲಕ್ಷುರಿ ಬಸ್ ಪ್ಲಾಟ್ ಫಾರಂ ಮೇಲೆ ಹತ್ತಿದೆ. ಮಹಿಳೆಗೆ ಗುದ್ದಿದ ಬಸ್ ಹಾಗೇ ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಈ ಬಸ್‌ ದುರಂತಕ್ಕೆ ಅಕ್ಕಪಕ್ಕದಲ್ಲಿದ್ದವರೆಲ್ಲಾ ಪ್ರಾಣ ರಕ್ಷಿಸಿಕೊಳ್ಳಲು ಓಡಿ ಹೋಗಿದ್ದಾರೆ. ಸಾರಿಗೆ ಬಸ್‌ ಒಳ್ಳೆ ಕಂಡೀಷನ್‌ನಲ್ಲೇ ಇತ್ತು. ಆದರೆ ಚಾಲಕನಿಗೆ 60 ವರ್ಷ ವಯಸ್ಸಾಗಿದ್ದು, ಈ ಘಟನೆಗೆ ನಿಖರ ಕಾರಣ ಏನು ಅನ್ನೋದು ತನಿಖೆಯಿಂದಲೇ ಬಯಲಾಗ ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಿವರ್ಸ್ ಗೇರ್ ಹಾಕೋ ಬದಲು ಪ್ಲಾಟ್ ಫಾರಂ ಮೇಲೆ ಬಸ್ ಹತ್ತಿಸಿದ ಡ್ರೈವರ್; ಮೂವರ ಸಾವು

https://newsfirstlive.com/wp-content/uploads/2023/11/Vijayawada-Bus-Accident.jpg

Load More