Advertisment

ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಯೊಳಕ್ಕೆ ಕೊಂಡೊಯ್ದ ಚಾಲಕ! ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ..

author-image
AS Harshith
Updated On
ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಯೊಳಕ್ಕೆ ಕೊಂಡೊಯ್ದ ಚಾಲಕ! ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ..
Advertisment
  • ಬಸ್​​ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಯುವತಿ
  • ವಿಚಾರ ತಿಳಿದು ಹತ್ತಿರದ ಖಾಸಗಿ ಆಸ್ಪತ್ರೆಗೆ ‌ಬಸ್ಸನ್ನು ತಿರುಗಿಸಿದ ಚಾಲಕ
  • ಖಾಸಗಿ ಬಸ್ ಸಿಬ್ಬಂದಿ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಉಡುಪಿ: ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಯೊಳಕ್ಕೆ ಕೊಂಡೊಯ್ದು ನಿಲ್ಲಿಸಿದ ಘಟನೆ ಉಡುಪಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಹೆಸರಿನ ಬಸ್​ನಲ್ಲಿ  ಈ ಘಟನೆ ನಡೆದಿದೆ.

Advertisment

ಖಾಸಗಿ ಬಸ್ ಚಾಲಕ ಶಶಿಕಾಂತ್ ಹಾಗೂ ನಿರ್ವಾಹಕ ಸಲೀಂ ಅಸ್ವಸ್ಥಗೊಂಡ ಯುವತಿಯನ್ನು ಕಂಡು ಆಸ್ಪತ್ರೆಯತ್ರ ಬಸ್​ ತಿರುಗಿಸಿದ್ದಾರೆ. ಖಾಸಗಿ ಬಸ್ ಸಿಬ್ಬಂದಿ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆನೇಕಲ್ ಪಟಾಕಿ ದುರಂತದಲ್ಲಿ ಅಮಾನತು‌ ಆರೋಪ.. ನೇಣು ಬಿಗಿದುಕೊಂಡ CCB ಇನ್ಸ್​​ಸ್ಪೆಕ್ಟರ್ ತಿಮ್ಮೆಗೌಡ

Advertisment


">August 5, 2024

ಬಸ್​ನಲ್ಲಿದ್ದ ಯುವತಿ ಉಡುಪಿಯ ಹಳೆ ತಾಲ್ಲೂಕು ಕಚೇರಿ ಬಳಿ ತಲುಪುವ ವೇಳೆ ಅಸ್ವಸ್ಥಳಾಗಿದ್ದಾಳೆ. ಬಸ್​​ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣವೇ ವಿಚಾರ ತಿಳಿದ ಚಾಲಕ ಹತ್ತಿರದ ಖಾಸಗಿ ಟಿಎಂಎ ಪೈ ಆಸ್ಪತ್ರೆಗೆ ‌ಬಸ್ ಅನ್ನು ಕೊಂಡೊಯ್ದಿದ್ದಾರೆ.

ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬಸ್ಸನ್ನು ಕೊಂಡೊಯ್ದಿದ್ದಾರೆ. ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯುವತಿಯ ಮನೆಯವರಿಗೂ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮೊದಲ ಕರೆ, ರಕ್ಷಣಾ ತಂಡಕ್ಕೆ ಮಾಹಿತಿ.. ಅನೇಕರನ್ನು ಬದುಕಿಸಿದ ಈ ಜೀವಕ್ಕೆ ಬದುಕುವ ಅದೃಷ್ಟವೇ ಇಲ್ಲ

Advertisment

ಯುವತಿ ಮನೆಯವರು ಬರುವ ತನಕ ಯುವತಿಯ ಚಿಕಿತ್ಸೆಗೆ ಬಸ್ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಸದ್ಯ ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment