ಈ ಕಾರಿನಲ್ಲಿ ಸ್ಟೇರಿಂಗ್ ಇಲ್ಲ, ಡ್ಯಾಶ್ಬೋರ್ಡ್ ಇಲ್ವೇ ಇಲ್ಲ
ಡ್ರೈವರ್ ಇಲ್ಲದೆ ಚಲಿಸುತ್ತೆ ಈ ಸ್ವಯಂ ಚಾಲಿತ ಝೆಡ್ಪಾಡ್
ಬೆಂಗಳೂರು ಬೀದಿಯಲ್ಲಿ ಸಂಚರಿಸಿದ ಚಾಲಕ ರಹಿತ ವಾಹನ
ಚಾಲಕ ರಹಿತ ಕಾರಿನ ಬಗ್ಗೆ ಗೊತ್ತಿದ್ಯಾ?. ಇಂಥಾ ಕಾರು ಬೆಂಗಳೂರಿನ ರಸ್ತೆಯಲ್ಲಿ ಚಲಿಸಿದರೆ ಹೇಗಿರುತ್ತೆ?. ಇಲ್ಲೊಂದು ದೃಶ್ಯ ಸದ್ಯ ಚರ್ಚೆಯಲ್ಲಿದೆ.
ಪೆಟ್ರೋಲ್, ಡಿಸೇಲ್ ಕಾರಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೀಗ ವಾಯುಮಾಲಿನ್ಯ ಮತ್ತು ಇಂಧನ ಉಳಿಕೆಗಾಗಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬಂದಿದೆ. ಭಾರತ ಸರ್ಕಾರ ಕೂಡ ಭವಿಷ್ಯದ ಉಜ್ವಲತೆಗಾಗಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತೆ ಉತ್ತೇಜಿಸುತ್ತಿದ್ದಾರೆ. ಇದೇ ದೃಷ್ಟಿಕೋನವನ್ನಿಟ್ಟುಕೊಂಡು ಬಹುತೇಕರು ಎಲೆಕ್ಟ್ರಿಕ್ ಕಾರು ಖರೀದಿಸುತ್ತಿದ್ದಾರೆ. ಆದರ ಜೊತೆ ಜೊತೆಗೆ ವಿದೇಶದಲ್ಲಿ ಚಾಲಕ ರಹಿತ ಕಾರುಗಳ ನಿರ್ಮಿಸುತ್ತಿದ್ದಾರೆ. ಅಷ್ಟೇ ಏಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಚಾಲಕ ರಹಿತ ಕಾರಿನಲ್ಲೇ ಚಲಿಸೋದು. ಆದರೀಗ ಇಂತಹದ್ದೇ ಕಾರು ಬೆಂಗಳೂರಿನ ರಸ್ತೆಗಿಳಿದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನಿರುದ್ಧ್ ರವಿಶಂಕರ್ ಎಂಬ ಟ್ವಿಟ್ಟಿಗ ಚಾಲಕ ರಹಿತ ಕಾರೊಂದರ ದೃಶ್ಯವನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಬೀದಿಗಳಲ್ಲಿ ಎಂದು ಅಡಿಬರಹ ಕೊಟ್ಟಿದ್ದಾನೆ. ಇನ್ನು ದೃಶ್ಯದಲ್ಲಿ ಕಂಡಂತೆ ಇಬ್ಬರು ಯುವಕರು ಆ ಕಾರನ್ನೇ ದಿಟ್ಟಿಸಿ ನೋಡುವುದು ಕಾಣಬಹುದಾಗಿದೆ.
On the streets of Bengaluru. @peakbengaluru pic.twitter.com/VtahXpa6Mh
— anirudh ravishankar (@anrdh89) July 22, 2023
ಇದೇನಾ zPod ವಾಹನ
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಬೆಂಗಳೂರು ಮೂಲದ ಮೈನಸ್ ಝೀರೋ ಎಂಬ ಸ್ಟಾರ್ಟಪ್ ಸಂಸ್ಥೆ ಝೆಡ್ಪಾಡ್ ಹೆಸರಿನ ಸ್ವಯಂ ಚಾಲಿನ ವಾಹನ ತಯಾರಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಫ್ರೇಸರ್ ಟೌನ್ ಬಳಿ ಎರಡು ಬಾರಿ ಈ ವಾಹನ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದು ಭಾರತ ಮೊದಲ ಸ್ವಯಂ ಚಾಲಿತ ವಾಹನ ಎಂದು ಗುರುತಿಸಲಾಗಿದೆ.
View this post on Instagram
ಝೆಡ್ಪಾಡ್
ನಾಲ್ಕು ಸೀಟಿನ ವಾಹನ ಇದಾಗಿದ್ದು, ಡ್ಯಾಶ್ಬೋರ್ಡ್ ಅಥವಾ ಸ್ಟೀರಿಂಗ್ ಯಾವುದನ್ನು ಹೊಂದಿಲ್ಲ. ಬದಲಾಗಿ ಇದು ಕೃತಕ ಬುದ್ಧಿಮತ್ತೆ ಮೂಲಕ ನ್ಯಾವಿಗೇಟ್ ಮಾಡುತ್ತಾ ರಸ್ತೆಯಲ್ಲಿ ಚಲಿಸುತ್ತದೆ. ಜೊತೆಗೆ ಕ್ಯಾಮೆರಾದ ಸಹಾಯವನ್ನು ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ