ಡ್ರೋನ್ ಪ್ರತಾಪ್ ಅಳುವ ಶಬ್ದ ಕೇಳಿ ಓಡಿ ಬಂದ ದೀದಿಯರು
ಮನೆಯಿಂದ ಬಂದ ಪತ್ರಕ್ಕಾಗಿ ಸ್ಪರ್ಧಿಗಳ ಮಧ್ಯೆ ಹೋರಾಟ
ಅಪ್ಪ-ಅಮ್ಮನನ್ನು ನೆನದು ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಕುಟುಂಬಸ್ಥರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಹೌದು 3 ವರ್ಷದಿಂದ ಕುಟುಂಬಸ್ಥರಿಂದ ದೂರ ಉಳಿದುಕೊಂಡ ನರಕಯಾತನೆ ಅನುಭವಿಸುತ್ತಿದ್ದ ಡ್ರೋನ್ ಪ್ರತಾಪ್ ಅವರು ಅಳುವ ಮೂಲಕ ಆ ದುಃಖವನ್ನು ಹೊರ ಹಾಕಿದ್ದಾರೆ. ಇಂತಹ ಸಂದರ್ಭವೊಂದು ಒದಗಿ ಬಂದಿದ್ದು ಬಿಗ್ಬಾಸ್ ಕೊಟ್ಟ ಟಾಸ್ಕ್ನಿಂದ.
ಹೌದು, ಇಷ್ಟು ದಿನ ಮನೆಯವರಿಂದ ದೂರ ಇರೋ ಸ್ಪರ್ಧಿಗಳಿಗೆ ಬಿಗ್ಬಾಸ್ ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕುಟುಂಬದಿಂದ ದೂರ ಇರುವ ಬಿಗ್ಬಾಸ್ ಸ್ಪರ್ಧಿಗಳು ಮನೆಯವರ ಬಗ್ಗೆ ತಿಳಿದುಕೊಳ್ಳೋಕೆ ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದಾರೆ. ಮೂವರು ಸ್ಪರ್ಧಿಗಳಿಗೆ ಪತ್ರ ಪಡೆಯೋ ಅವಕಾಶ ಇದ್ದು, ಆ ಮೂವರನ್ನ ಮನೆಯವರು ಚರ್ಚಿಸಿ ಸೂಚಿಸಬೇಕು. ಈ ಅವಕಾಶವನ್ನು ಪಡೆಯೋದು ಅಷ್ಟು ಸುಲಭವಲ್ಲ. 6 ಆಟವನ್ನು ಕಂಪ್ಲೀಟ್ ಮಾಡಿದ ಮೂವರಿಗೆ ಈ ಅವಕಾಶ ಸಿಗಲಿದೆ. ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದಾರೆ.
ಇದೇ ಟಾಸ್ಕ್ ವಿಚಾರವಾಗಿ ಮನೆಯಿಂದ ನಮ್ಮ ತಂದೆ ತಾಯಿ ನನಗೆ ಪತ್ರ ಬರೆದಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ದಯಮಾಡಿ ಆ ಅವಕಾಶವನ್ನು ನನಗೆ ಕಲ್ಪಿಸಿಕೊಡಿ ಎಂದು ಬಿಗ್ಬಾಸ್ ಸ್ಪರ್ಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ತಂದೆ ತಾಯಿ ನನ್ನನ್ನು ಕ್ಷಮಿಸಿದ್ದಾರೆ. ಕ್ಷಮಿಸಿ ನನಗೆ ಪತ್ರವನ್ನು ಬರೆದಿದ್ದಾರಾ ಎಂಬ ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಾಡುತ್ತಿದೆ. ಹೀಗಾಗಿ ನನಗೆ ಪತ್ರ ಬೇಕೇ ಬೇಕು ಎಂದು ಕೇಳಿಕೊಂಡಿದ್ದಾರೆ. ಹೀಗೆ ಬೆಡ್ ರೂಮ್ನಲ್ಲಿ ಕುಳಿತುಕೊಂಡಾಗ ಅಪ್ಪ ಹಾಗೂ ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಆಗ ಅವರ ಅಳುವ ಶಬ್ದವನ್ನು ಕೇಳಿಕೊಳ್ಳುತ್ತಿದ್ದಂತೆ ಸಂಗೀತಾ, ನಮ್ರತಾ, ಇಶಾನಿ ಮತ್ತು ನೀತು ಬಂದು ಅವರನ್ನು ಸಮಾಧಾನ ಮಾಡಿ ಅವರ ಮುಖದಲ್ಲಿ ಖುಷಿ ತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ