ಡ್ರೋನ್ ಪ್ರತಾಪ್ನನ್ನು ನೋಡಿ ಉಳಿದ ಸ್ಪರ್ಧಿಗಳ ಕಣ್ಣಲ್ಲಿ ನೀರು
ಮನೆಯಿಂದ ಬಂದ ಪತ್ರಕ್ಕಾಗಿ ಸ್ಪರ್ಧಿಗಳ ಮಧ್ಯೆ ಹೋರಾಟ
ಅಪ್ಪ-ಅಮ್ಮನನ್ನು ನೆನೆದು ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ತಮ್ಮ ಅಪ್ಪನ ಧ್ವನಿ ಕೇಳುತ್ತಿದ್ದಂತೆ ಮಗುವಿನಂತೆ ಬಿಕ್ಕಿ, ಬಿಕ್ಕಿ ಅತ್ತಿದ್ದಾರೆ. ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ತಮ್ಮ ತಮ್ಮ ಕುಟುಂಬಸ್ಥರನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಡ್ರೋನ್ ಪ್ರತಾಪ್ ಕೂಡ 3 ವರ್ಷದಿಂದ ಕುಟುಂಬಸ್ಥರಿಂದ ದೂರ ಉಳಿದುಕೊಂಡ ನರಕಯಾತನೆ ಅನುಭವಿಸುತ್ತಿದ್ದರು.
ಇಷ್ಟು ದಿನ ಮನೆಯವರಿಂದ ದೂರ ಇರೋ ಸ್ಪರ್ಧಿಗಳಿಗೆ ಬಿಗ್ಬಾಸ್ ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದ್ದರು. ಕುಟುಂಬದಿಂದ ದೂರ ಇರುವ ಬಿಗ್ಬಾಸ್ ಸ್ಪರ್ಧಿಗಳು ಮನೆಯವರ ಬಗ್ಗೆ ತಿಳಿದುಕೊಳ್ಳೋಕೆ ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದರು. ಬಿಗ್ಬಾಸ್ ಕೊಟ್ಟ ಟಾಸ್ಕ್ ಅನ್ನು ಪೂರ್ಣ ಮಾಡಿದರೆ ಮಾತ್ರ ಕುಟುಂಬಸ್ಥರಿಂದ ಬಂದ ಪತ್ರ ಪಡೆಯೋ ಅವಕಾಶ ಇತ್ತು. ಆದರೆ ಮನೆ ಸದಸ್ಯರ ಎಡವಟ್ಟಿನಿಂದ ಕಾರ್ತಿಕ್, ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ ಅವರಿಗೆ ಪತ್ರ ಬಂದಿರಲ್ಲಿಲ್ಲ. ಹೀಗಾಗಿ ಈ ಮೂವರು ಬೇಸರಿಂದ ಕಾಲ ಕಳೆಯುತ್ತಿದ್ದರು.
View this post on Instagram
ಇನ್ನೂ, ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಪ್ರತಾಪ್ ಅವರಿಗೆ ನಿಮ್ಮ ತಂದೆಯಿಂದ ಲೆಟರ್ ಎನ್ನನ್ನು ಎಕ್ಸ್ಪೆಕ್ಟ್ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಹೀಗೆ ಕಿಚ್ಚ ಸುದೀಪ್ ಕೇಳುತ್ತಿದ್ದಂತೆ ಆಗೊಂದು ವಾಯ್ಸ್ ನೋಟ್ ಬರುತ್ತದೆ. ಇದನ್ನು ಕೇಳಿಸಿಕೊಂಡ ಕೂಡಲೇ ಅಪ್ಪ… ಅಪ್ಪ ತಪ್ಪಾಯ್ತಪ್ಪ ಎಂದು ಡ್ರೋನ್ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನು ನೋಡಿದ ಮನೆ ಮಂದಿಯೂ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂತಹ ಪಾಡು ಯಾರಿಗೂ ಬರಬಾರದು ಎಂದು ಕಾಮೆಂಟ್ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ