newsfirstkannada.com

ಟೆಸ್ಟ್​ ತಂಡದಿಂದ ಕೈಬಿಟ್ಟಿದ್ಕೆ ಬೇಸರಿಸಿಕೊಳ್ಳಲಿಲ್ಲ.. ಕ್ರಿಕೆಟ್ ಮೇಲಿನ ಪ್ರೀತಿ ಎಂಥದ್ದು ಎಂದು ತೋರಿಸಿದ ಪೂಜಾರ -Video

Share :

25-06-2023

    ಸೋಶಿಯಲ್ ಮೀಡಿಯಾ ಮೂಲಕ ಅಂತರಾಳ ಹೇಳಿದ ಪೂಜಾರ

    ಟ್ವಿಟರ್​ನಲ್ಲಿ ಶೇರ್ ಮಾಡಿದ ವಿಡಿಯೋಗೆ ಕೊಟ್ಟ ಕ್ಯಾಪ್ಷನ್ ಏನು..?

    ವೆಸ್ಟ್​ ವಿಂಡೀಸ್ ಟೆಸ್ಟ್​ ಸರಣಿಯಿಂದ ಚೆತೇಶ್ವರ್ ಪೂಜಾರ ಡ್ರಾಪ್..!

ಜುಲೈನಲ್ಲಿ ನಡೆಯುವ ವೆಸ್ಟ್​ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ ಪೂಜಾರ ಹೆಸರು ಇಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಪೂಜಾರ ನೆಟ್​ ಪ್ರಾಕ್ಟೀಸ್​ಗೆ ಮರಳಿದ್ದಾರೆ.

ತಂಡದಿಂದ ಕೈಬಿಡುತ್ತಿದ್ದಂತೆಯೇ ಪೂಜಾರ, ಮತ್ತೆ ಪ್ರ್ಯಾಕ್ಟೀಸ್​ಗೆ ಮರಳಿದ್ದಾರೆ. ಈ ಹಿಂದೆ ಐಪಿಎಲ್​ ಸಂದರ್ಭದಲ್ಲೂ ಕೌಂಟಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮುಂಬರು ದುಲೀಪ್ ಟ್ರೋಫಿ ಹಿನ್ನೆಲೆಯಲ್ಲಿ ಅವರು ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಈ ಮೂಲಕ ತಮಗೆ ಕ್ರಿಕೆಟ್ ಮೇಲಿನ ಬದ್ಧತೆ ಮತ್ತು ಪ್ರೀತಿ ಏನು ಅನ್ನೋದನ್ನು ತೋರಿಸಿದ್ದಾರೆ. ಇನ್ನು ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೂಜಾರ, ಕ್ರಿಕೆಟ್ ಬಾಲ್ ಮತ್ತು ಬ್ಯಾಟ್ ಸಿಂಬಲ್ ಹಾಕಿ, Love ಎಮೋಜಿ ಹಾಕಿದ್ದಾರೆ. 

ಟೀಮ್​ ಇಂಡಿಯಾ ಇತ್ತೀಚಿಗೆ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ನಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿತ್ತು. ಈ ವಿಶ್ವ ಟೆಸ್ಟ್​ನಲ್ಲಿ ಪೂಜಾರ ಬ್ಯಾಟಿಂಗ್​ ಉತ್ತಮವಾಗಿರಲಿಲ್ಲ. ಇದರಿದ ಭಾರತ ತಂಡದ ಆಯ್ಕೆ ಮಂಡಳಿ ವೆಸ್ಟ್​ ಟೂರ್ನಿಗೆ ಪೂಜಾರ ಹೆಸರನ್ನು ಕೈ ಬಿಟ್ಟಿದ್ದರು. ಟೆಸ್ಟ್​ ಸ್ಪೆಷಲಿಸ್ಟ್ ಪೂಜಾರ ಮುಂದಿನ ದುಲೀಪ್​ ಟ್ರೋಫಿಯನ್ನು ಪಶ್ಚಿಮ ವಲಯಕ್ಕಾಗಿ ಆಡಲಿದ್ದಾರೆ. ಇದಕ್ಕಾಗಿ ಅವರು ರಾಜ್‌ಕೋಟ್​ದಲ್ಲಿನ ಅಕಾಡೆಮಿಯಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಗಳಲ್ಲಿ ಪೂಜಾರ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್​ಗೆ ಅವಕಾಶ ನೀಡಲಾಗಿದೆ.

ಈ ಬಗ್ಗೆ ಪೂಜಾರ ಅವರ ತಂದೆ ಅರವಿಂದ್ ಅವರು ಮಾತನಾಡಿ, ಟೀಮ್​ನಿಂದ ಹೆಸರು ಕೈ ಬಿಟ್ಟಿದ್ದಾರೆ ಎಂದು ಇದೇ ಅಂತ್ಯವಲ್ಲ. ಚೇತೇಶ್ವರ ಪೂಜಾರ ಅವರು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿದ್ದಾರೆ. ತಮ್ಮ ತಪ್ಪುಗಳನ್ನು ಮನವರಿಕೆ ಮಾಡಿಕೊಂಡು ಶೀಘ್ರದಲ್ಲೇ ಪುಟಿದೇಳುತ್ತಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೆಸ್ಟ್​ ತಂಡದಿಂದ ಕೈಬಿಟ್ಟಿದ್ಕೆ ಬೇಸರಿಸಿಕೊಳ್ಳಲಿಲ್ಲ.. ಕ್ರಿಕೆಟ್ ಮೇಲಿನ ಪ್ರೀತಿ ಎಂಥದ್ದು ಎಂದು ತೋರಿಸಿದ ಪೂಜಾರ -Video

https://newsfirstlive.com/wp-content/uploads/2023/06/PUJARA-2.jpg

Load More